Advertisement

ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಟ್ರೈಟ್ರೇಷನ್‌ ಪ್ರಯೋಗ ಮಾದರಿ ಬದಲು

10:03 PM Jan 27, 2022 | Team Udayavani |

ಬೆಂಗಳೂರು:  ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಟೈಟ್ರೇಷನ್‌ ಪ್ರಯೋಗ ಮಾಡುವ ವಿಧಾನದಲ್ಲಿ ಮಾರ್ಪಾಡು ಮಾಡಲಾಗಿದೆ.

Advertisement

ರಸಾಯನ ಶಾಸ್ತ್ರ ವಿಷಯದಲ್ಲಿ ಟ್ರೈಟ್ರೇಷನ್‌ ಪ್ರಯೋಗವನ್ನು ಮಾಡುವ ವೇಳೆ ಪಿಪೆಟ್‌ ಉಪಯೋಗಿಸಿ ಬಾಯಿಯಿಂದ ದ್ರಾವಣವನ್ನು ಎಳೆಯುವುದು ಸಾಮಾನ್ಯ ವಿಧಾನವಾಗಿದೆ. ಆದರೆ, ಕೊರೊನಾ ಸೋಂಕು ವಿದ್ಯಾರ್ಥಿಗಳಿಂದ ಮತ್ತೂಬ್ಬ ವಿದ್ಯಾರ್ಥಿಗಳಿಗೆ ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಪ್ರಯೋಗದಲ್ಲಿ ಮಾರ್ಪಾಡು ಮಾಡಲಾಗಿದೆ.

ಪಿಪೆಟ್‌ ಅನ್ನು ಉಪಯೋಗಿರುವ ಬದಲು ಮೆಷರಿಂಗ್‌ ಜಾರ್‌ (10 ಎಂಎಲ್‌ ಅಥವಾ 25 ಎಂ.ಎಲ್‌) ಅನ್ನು ಉಪಯೋಗಿಸಬಹುದು. ನಿಖರತೆಗೆ ಮಹತ್ವ ಕೊಡು ಬದಲು ಪ್ರಯೋಗ ಮಾಡುವ ವಿಧಾನಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.

ಪ್ರಾಯೋಗಿಕ ಪರೀಕ್ಷಾ ಸಮಯದಲ್ಲಿ ಪ್ರಯೋಗ ಮಾಡುವ ವಿಧಾನಕ್ಕೆ 4 ಅಂಕ ನೀಡುವುದು, ಮೂರು ಪ್ರಯತ್ನಕ್ಕೆ 3 ಅಂಕ ಮತ್ತು ಮೊಲಾರಿಟಿ ಲೆಕ್ಕ ಮಾಡುವ ವಿಧಾನಕ್ಕೆ 3 ಅಂಕ (ಸೂತ್ರಕ್ಕೆ 1, ಸೂತ್ರದಲ್ಲಿ ಸೇರುವುದಕ್ಕೆ 1 ಮತ್ತು ಲೆಕ್ಕ ಹಾಕಿ ಉತ್ತರ ನೀಡುವುದಕ್ಕೆ 1 ಅಂಕ) ನೀಡುವಂತೆ ಸೂಚಿಸಲಾಗಿದೆ. ಈ ವರ್ಷದ ಪ್ರಯೋಗಶಾಲೆಯಲ್ಲಿ ಕನಿಷ್ಠ 6 ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸುವಂತೆ ಪಿಯು ಇಲಾಖೆ ಜಂಟಿ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next