Advertisement
ಇದರಿಂದ 10ನೇ ತರಗತಿಯಲ್ಲಿ ಪರೀಕ್ಷೆ ಬರೆಯಲು ಅವರಿಗೆ ಅನುಕೂಲ ಆಗಲಿದೆ. ಬದಲಾದ ಈ ಪ್ರಶ್ನೆಪತ್ರಿಕೆ ಕ್ರಮವನ್ನು ಎಲ್ಲ ಪ್ರೌಢಶಾಲೆಗಳಲ್ಲೂ ಅಳವಡಿಸಿಕೊಳ್ಳಬೇಕು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಬಹು ಆಯ್ಕೆ ಪ್ರಶ್ನೆಯ ಜತೆಗೆ ಬರವಣಿಗೆಯೂ ಇರಬೇಕು ಎನ್ನುವುದು ಬದಲಾವಣೆಗೆ ಕಾರಣ. 3 ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಏರಿಸಲಾಗಿದೆ. ಹಾಗೆಯೇ ಹೊಸದಾಗಿ 5 ಅಂಕದ ಒಂದು ಪ್ರಶ್ನೆಯನ್ನು ಸೇರಿಸಲಾಗಿದೆ. ಆದರೆ ಪರೀಕ್ಷೆಯ ಕಾಠಿನ್ಯದ ಮಟ್ಟದಲ್ಲಿ ಬದಲಾವಣೆ ಮಾಡಿಲ್ಲ.