ಹೊಸದಿಲ್ಲಿ: ಕೊರೊನಾ ಲಸಿಕೆಗಳನ್ನು ಪಡೆಯ ಲಿಚ್ಛಿ ಸುವ ನಾಗರಿಕರ ನೋಂದಣಿ ಹಾಗೂ ಲಸಿಕೆ ನೀಡುವಿಕೆ ಪ್ರಕ್ರಿಯೆಯ ನಿರ್ವಹಣೆಗಾಗಿ ಕೇಂದ್ರ ಸರಕಾರ ಆರಂಭಿಸಿರುವ ಕೋವಿನ್ ಜಾಲ ತಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಮುಂದಾಗಿದೆ.
“ಯುಐಪಿ ಅಡಿಯಲ್ಲಿ ಲಸಿಕೆ ಪಡೆಯುವ ಸಾರ್ವಜನಿಕರ ಮಾಹಿತಿಯನ್ನು ನಿರ್ದಿಷ್ಟ ರಿಜಿಸ್ಟರ್‌ಗಳಲ್ಲಿ ದಾಖಲಿಸಬೇಕಿದೆ. ಆದರೆ ಆ ರಿಜಿಸ್ಟರ್‌ಗಳನ್ನು ನಿರ್ವಹಣೆ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಆದರೆ ಕೊವಿನ್ ವೆಬ್‌ಸೈಟ್ ನವೀಕೃತಗೊಂಡಲ್ಲಿ ಆ ಸಮಸ್ಯೆ ಇರುವುದಿಲ್ಲ.
ಭೌತಿಕ ರಿಜಿಸ್ಟರ್‌ಗಳ ಬದಲಿಗೆ ಸಾರ್ವಜನಿಕರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲೇ ಎಂಟ್ರಿ ಮಾಡಬಹುದು. ಲಸಿಕೆ ಪಡೆದವರಿಗೆ ತತ್‌ಕ್ಷಣವೇ ಅದರ ಪ್ರಮಾಣಪತ್ರ ಸಿಗಲಿದೆ.
ಅಲ್ಲದೆ ಪತ್ರಗಳು ಡಿಜಿ ಲಾಕರ್‌ನಲ್ಲಿಯೂ ಸಂಗ್ರಹವಾಗುತ್ತವೆ’ ಎಂದು ಕೋವಿನ್ ಜಾಲತಾಣದ ಮುಖ್ಯಸ್ಥ ಡಾ| ಆರ್.ಎಸ್. ಶರ್ಮಾ ತಿಳಿಸಿದ್ದಾರೆ.