ಕಟಪಾಡಿ:ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಣಿಪುರ-ಕಟಪಾಡಿ ಸಂಪರ್ಕದ ಮುಖ್ಯ ರಸ್ತೆಗೆ ಅಲ್ಲಲ್ಲಿ ಸೈನ್ ಬೋರ್ಡ್ ಅಳವಡಿಸುವ ಮೂಲಕ ಸಂಚಾರದ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಲಾರಂಭಿಸಿದೆ.
ರಸ್ತೆ ಅಭಿವೃದ್ಧಿಯ ಬಳಿಕ ಚಾಲಕರು ತುಸು ವೇಗವಾಗಿ ವಾಹನ ಚಲಾಯಿಸುತ್ತಾರೆ. ಇಲ್ಲಿ ಹೆಚ್ಚು ಅಪಾಯಕಾರಿ ಸ್ಥಳಗಳು ಇದ್ದು ಇಲ್ಲಿನ ಸೂಕ್ತ ರಕ್ಷಣಾ ಕ್ರಮಕ್ಕೆ ಜನಾಭಿಪ್ರಾಯವನ್ನು ಉದಯವಾಣಿ ಬಿತ್ತರಿಸಿತ್ತು.
ಸಂಚಾರಕ್ಕೆ ಅನುಕೂಲವಾಗುವಂತೆ ಚಾಲಕರು ಹೆಚ್ಚು ರಸ್ತೆಯ ಬಗ್ಗೆ ತಿಳಿದುಕೊಳ್ಳಲು ಇದೀಗ ಅಳವಡಿಸಿದ ಸೂಚನಾ ಫಲಕಗಳು ಸಹಕಾರಿಯಾಗಿದ್ದು, ಇನ್ನುಳಿದಂತೆ ತಡೆ ಬೇಲಿ ಸಹಿತ ಇತರ ಸಂಚಾರ ಸುರಕ್ಷತೆಯ ಕ್ರಮಗಳನ್ನು ಇಲಾಖೆಯು ಕೈಗೊಳ್ಳುವ ಭರವಸೆಯನ್ನು ನಿತ್ಯ ಸಂಚಾರಿಗಳು ಹೊಂದಿರುತ್ತಾರೆ.
ಮಣಿಪುರ ಹೊಳೆಯ ಸೇತುವೆ ಬಳಿ ಸೇತುವೆ ಅಗಲ ಕಿರಿದಾಗಿದೆ ಎಂಬ ಸೈನ್ ಬೋರ್ಡ್ ಕೂಡ ಅಳವಡಿಸಲಾಗಿದೆ. ತಿರುವುಗಳ ಬಗ್ಗೆ ಗಮನ ಸೆಳೆಯುವ ಸೈನ್ ಬೋರ್ಡ್ ಅಳವಡಿಕೆ ನಡೆಯುತ್ತಿದೆ.
ಶೀಘ್ರದಲ್ಲಿಯೇ ಇಲಾಖೆಯು ಕ್ರಾÂಶ್ ಗಾರ್ಡ್, ಎಚ್ಚರಿಕೆ ಫಲಕ, ಕೆಲವು ಮೈಲುಗಲ್ಲುಗಳು ಸಹಿತ ಇನ್ನುಳಿದ ಸುರಕ್ಷತಾ ಕ್ರಮವನ್ನು ಕೈಗೊಳ್ಳುವಂತೆ ಸಂಚಾರಿಗಳು ಒತ್ತಾಯಿಸುತ್ತಿದ್ದಾರೆ.