Advertisement

ಕಾಪು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಪ್ಲಾಸ್ಟಿಕ್‌ ಸಂಸ್ಕರಣೆ ಘಟಕ ಸ್ಥಾಪನೆ

09:43 PM Oct 01, 2020 | mahesh |

ಕಾಪು: ಪುರಸಭೆ ವ್ಯಾಪ್ತಿಯಿಂದ ಸಂಗ್ರಹಿಸಿದ 2 ಸಾವಿರ ಟನ್‌ಗಳಷ್ಟು ತ್ಯಾಜ್ಯ ವಿಲೇವಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ವಿನೂತನ ಯೋಜನೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇಲ್ಲಿರುವ ತ್ಯಾಜ್ಯವನ್ನು ಶ್ರೆಡ್ಡರ್‌ ಯಂತ್ರದ ಮೂಲಕ ಸಂಸ್ಕರಿಸಿ, ಬಳಿಕ ಅದನ್ನು ಡಾಮರಿನ ಜತೆಗೆ ನಿಗದಿತ ಪ್ರಮಾಣದಲ್ಲಿ ಬೆರೆಸಿ ಗಟ್ಟಿ ಮುಟ್ಟಾದ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ, ಇಲ್ಲಿನ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಂಗ್ರಹವಾಗಿರುವ 1 ಸಾವಿರ ಟನ್‌ ತ್ಯಾಜ್ಯ ಶೀಘ್ರ ವಿಲೇವಾರಿಯಾಗಲಿದೆ.

Advertisement

ತ್ಯಾಜ್ಯ ವಿಲೇವಾರಿ ಸಮಸ್ಯೆ
ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ ಪ್ರತೀ ದಿನ 3.5 ಟನ್‌ ತ್ಯಾಜ್ಯ ವಿಲೇವಾರಿಯಾಗದೇ ಉಳಿಯುತ್ತದೆ. 2-3 ವರ್ಷಗಳಿಂದ 2 ಸಾವಿರ ಟನ್‌ ಮರು ಬಳಕೆಗೆ ಪ್ರಯೋಜನವಿಲ್ಲದ ತ್ಯಾಜ್ಯ ಸಂಗ್ರಹಿಸಿಡಲಾಗುತ್ತಿದೆ. ಇದರ ವಿಲೇವಾರಿ ಕಷ್ಟವಾಗಿದ್ದು, ಇದು ಆರ್ಥಿಕ ಹೊರೆಯೂ ಆಗಿತ್ತು. ಇವುಗಳನ್ನು ಸಿಮೆಂಟ್‌ ಕಾರ್ಖಾನೆಗೆ ಉರುವಲಾಗಿ ಕಳುಹಿಸಿ ಕೊಡಲಾಗುತ್ತಿದ್ದರೂ, ಅವುಗಳು ದೂರದಲ್ಲಿರುವುದ ರಿಂದ ರವಾನೆ ವೆಚ್ಚದಾಯಕವಾಗಿತ್ತು.

7 ಲಕ್ಷ ರೂ. ಖರ್ಚು
ತಮಿಳುನಾಡು ಮತ್ತು ರಾಜ್ಯದಲ್ಲಿ ಸುಮಾರು 400 ಕಿ. ಮೀ. ಉದ್ದದ ಪ್ಲಾಸ್ಟಿಕ್‌ ತ್ಯಾಜ್ಯ ಮಿಶ್ರಿತ ಡಾಮರು ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಬೆಂಗಳೂರಿನ ಉದ್ಯಮಿ ರಾಮನಾಥ್‌ ಲಕ್ಷ್ಮಣ್‌ ಅವರು ಕಾಪು ಪುರಸಭೆಯೊಂದಿಗೆ ಕೈಜೋಡಿಸಿದ್ದಾರೆ. ಸದ್ಯ ವಿವಿಧ ಯಂತ್ರ
ಗಳನ್ನು ಅಳವಡಿಸಲಾಗಿದೆ. ಇದಕ್ಕೆ 7 ಲಕ್ಷ ವಿನಿಯೋಗಿಸಲಾಗಿದೆ. ಘಟಕ ನಿರ್ವಹಣೆಗೆ ಮಾಸಿಕ 50-60 ಸಾವಿರ ರೂ. ಖರ್ಚಾಗಲಿದೆ.

ಆರ್ಥಿಕವಾಗಿಯೂ ಲಾಭದಾಯಕ
ಖಾಸಗೀ ಸಹಭಾಗಿತ್ವದೊಂದಿಗೆ ಸರಕಾರದ ಅನುದಾನ ಬಳಕೆ ಮಾಡದೇ ಕಾಪು ಪುರಸಭೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸುತ್ತಿರುವ ಪ್ರಯತ್ನ ರಾಜ್ಯದಲ್ಲೇ ಮೊದಲಿನದ್ದು. ಮೊದಲ ಹಂತದಲ್ಲಿ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ಮಾತ್ರ ಡಾಮರಿಗೆ ವಿನಿಯೋಗಿಸಲಾಗುತ್ತದೆ. ಇದರ ಯಶಸ್ಸು ಆಧರಿಸಿ ಮುಂದಿನ ಹಂತದಲ್ಲಿ ಉಳಿದ ಕಸಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗುವುದು. ಈ ಯೋಜನೆ ಪುರಸಭೆಗೆ ಆರ್ಥಿಕವಾಗಿಯೂ ಲಾಭದಾಯಕವಾಗಲಿದೆ.
-ವೆಂಕಟೇಶ್‌ ನಾವುಡ ಬಿ., ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next