Advertisement

ದೇಗುಲ ಬಳಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿ

01:37 PM May 03, 2019 | Team Udayavani |

ಹಾಸನ: ಪುರದಮ್ಮ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುವುದರಿಂದ ಅಲ್ಲಿನ ಘನತ್ಯಾಜ್ಯ ನಿರ್ವಹಣೆ ಮಾಡಲು ಪ್ರತ್ಯೇಕ ಘಟಕ ಸ್ಥಾಪನೆ ಮಾಡಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಹಾಸನ ಉಪವಿಭಾಗಾಧಿಕಾರಿ ಹಾಗೂ ಪುರದಮ್ಮ ದೇಗುಲದ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್‌ ಅವರಿಗೆ ಸೂಚನೆ ನೀಡಿದರು.

Advertisement

ಹಸಿರು ಭೂಮಿ ಪ್ರತಿಷ್ಠಾನದ 2ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪುರದಮ್ಮ ದೇವಾ ಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿನೆಡುವ ಹಾಗೂ ಕೆರೆ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬರಪರಿಸ್ಥಿತಿ ಎದುರಿಸಲು ಮತ್ತು ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಪರಿಸರಕ್ಕೆ ಪೂರಕ ವಾಗುವ ಇಂತಹ ಕೆಲಸಗಳನ್ನು ಮಾಡುವ ಸಂಘ  ಸಂಸ್ಥೆಗಳಿಗೆ ಶ್ರಮದಾನದ ಮೂಲಕ ಸಾರ್ವಜನಿಕರು ಸಹಕರಿಸಿದ್ದಲ್ಲಿ ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತದೆ ಎಂದರು.

ಕೆರೆ ಕಟ್ಟೆಗಳೇ ದೇವರು: ಅಧ್ಯಕ್ಷತೆ ವಹಿಸಿದ್ದ ಹಾಸನ ಉಪವಿಭಾಗಾಧಿಕಾರಿ ಹಾಗೂ ಹಸಿರು ಭೂಮಿ ಪ್ರತಿ ಷ್ಠಾನದ ಗೌರವಾಧ್ಯಕ್ಷ ಎಚ್.ಎಲ್.ನಾಗರಾಜ್‌ ಮಾತ ನಾಡಿ, ಕೆರೆ ಕಟ್ಟೆಗಳೇ ಸಮಾಜಕ್ಕೆ ನಿಜವಾದ ದೇವರು. ಅವುಗಳನ್ನು ಸಂರಕ್ಷಿಸಿ ಪೊಷಣೆ ಮಾಡುವುದೇ ನಿಜವಾದ ಪೂಜೆ. ಗ್ರಾಮಾಂತರ ಪ್ರದೇಶದ ಜನರು ತಮ್ಮ ತಮ್ಮ ಊರುಗಳಲ್ಲಿರುವ ಕೆರೆ ಕಟ್ಟೆಗಳನ್ನು ಶ್ರಮದಾನದ ಮೂಲಕ ಪುನಶ್ಚೇತನಗೊಳಿಸಲು ಮುಂದಾಗಬೇಕು. ಇದಕ್ಕೆ ಬೇಕಾದ ಎಲ್ಲಾ ಸಲಹೆ ಸಹಕಾರಗಳನ್ನು ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.

ಪುರದಮ್ಮ ದೇಗುಲದ ಸಮೀಪವೇ ಇರುವ ಕೆರೆಗೆ ದೇವಾಲಯದ ಸುತ್ತ ಮುತ್ತಲಿರುವ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಯಾವುದೇ ತ್ಯಾಜ್ಯವನ್ನು ಸುರಿಯದಂತೆ ಹಾಗೂ ಕೆರೆಯ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಕೋರಿದರು.

Advertisement

ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಜಾಗೃತಿ ಸಭೆಗಳನ್ನು ಏರ್ಪಡಿಸಲಾಗುವುದು. ಪ್ರೌಢ ಶಾಲೆಗಳಲ್ಲಿರುವ ಪರಿಸರ ಕ್ಲಬ್‌ಗಳನ್ನು ಗುರಿ ಯಾಗಿರಿಸಿಕೊಂಡು ಮಕ್ಕಳಿಗೆ ಪರಿಸರದ ಬಗ್ಗೆ ತರಬೇತಿ ನೀಡಿ ಶಾಲೆಗೆ ಇಬ್ಬರು ವಿದ್ಯಾರ್ಥಿಗಳನ್ನು ಮಾಸ್ಟರ್‌ ಟ್ರೈನರ್‌ಗಳನ್ನಾಗಿ ಮಾಡುವ ಉದ್ದೇಶವಿದೆ ಎಂದರು.

ಸಮುದಾಯದ ಭಾಗವಹಿಸುವಿಕೆ ಮುಖ್ಯ: ಹಾಸನ ತಹಸೀಲ್ದಾರ್‌ ಶ್ರೀನಿವಾಸಯ್ಯ ಮಾತನಾಡಿ, ಸಮುದಾ ಯದ ಭಾಗವಹಿಸುವಿಕೆಯಿದ್ದಲ್ಲಿ ಮಾತ್ರ ಇಂತಹ ಪರಿಸರ ಕಾಳಜಿಯುಳ್ಳ ಕೆಲಸಗಳು ಯಶಸ್ವಿಯಾಗು ತ್ತವೆ. ಅಧಿಕಾರಿಗಳೂ ಇಂತಹ ಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಭಾಗವಹಿಸುವುದರಿಂದ ಸಾರ್ವಜನಿ ಕರಿಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಪರಿಸರ ಸಂರಕ್ಷಣೆಗೆ ಕ್ರಮ ಅಗತ್ಯ
ಎಲ್ಲಾ ತಾಲೂಕುಗಳಲ್ಲಿ ಈ ರೀತಿಯ ಕೆರೆ ಕಟ್ಟೆ ಗಳನ್ನು ಹೂಳೆತ್ತುವ ಹಾಗೂ ಸಸಿನೆಡುವ ಕಾರ್ಯ ಕ್ರಮವನ್ನು ವಿವಿಧ ಸಂಘ ಸಂಸ್ಥೆಗಳು ಪ್ರಯತ್ನಿಸಬೇಕು ಎಂದ ಅವರು, ಇಂದಿನ ಪರಿಸರ ನಾಶಗಳು ಹಾಗೂ ಪ್ರಕೃತಿ ವಿಕೋಪ ಸಂಭವಿಸುವುದು ಪ್ರಕೃತಿಯು ನಮಗೆ ನೀಡು ತ್ತಿರುವ ಅಪಾಯದ ಮುನ್ಸೂಚನೆಯಾಗಿದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next