Advertisement

ಸ್ವಯಂಚಾಲಿತ ಬೀದಿ ದೀಪಗಳ ಅಳವಡಿಕೆಯಾಗಲಿ

08:05 AM Feb 03, 2019 | |

ನಗರದ ಬಹುತೇಕ ಭಾಗಗಳಲ್ಲಿ ಬೆಳಗಾದರೂ ಬೀದಿ ದೀಪ ಆರಿಸಿರುವುದಿಲ್ಲ. ಬೀದಿ ದೀಪಗಳನ್ನು ಉರಿಸಲು ಹಾಗೂ ಆರಿಸಲು ಗುತ್ತಿಗೆ ಪಡೆದುಕೊಂಡ ಸಂಸ್ಥೆ ನಿರಾಸಕ್ತಿ ತೋರಿದರೆ ಮಧ್ಯಾಹ್ನವರೆಗೆ ಬೀದಿ ದೀಪಗಳು ನಿರಂತರವಾಗಿ ಉರಿಯುತ್ತಿರುತ್ತವೆ. ಇದು ಎಲ್ಲ ನಗರಗಳ ಸ್ಥಿತಿ. ಇದರಿಂದ ಉಂಟಾಗುವ ವಿದ್ಯುತ್‌ ವ್ಯರ್ಥದ ಬಗೆಗೆ ಯಾರೂ ಚಿಂತಿಸುವುದಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಸ್ವಯಂ ಚಾಲಿತ ಬೀದಿ ದೀಪಗಳನ್ನು ಮುಂದುವರಿದ ದೇಶ ಹಾಗೂ ನಗರಗಳಲ್ಲಿ ಬಳಸಲಾಗುತ್ತಿದೆ. ವಿದ್ಯುತ್‌ ಬಲ್ಪ್ಗಳಿಗೆ ಸೆನ್ಸಾರ್‌, ಎಲ್‌ ಡಿಆರ್‌ ರೆಸಿಸ್ಟರ್‌ ಕೆಪಾಸಿಟರ್‌ಗಳನ್ನು ಅಳವಡಿಸಲಾಗುತ್ತದೆ. ಇವುಗಳು ಬೆಳಕು ಮತ್ತು ಕತ್ತಲೆಯನ್ನು ಗ್ರಹಿಸಿ ದೀಪ ಬೆಳಗಲು ಆರಲು ನೆರವಾಗುತ್ತದೆ. ಇದರಿಂದ ವಿದ್ಯುತ್‌ ಅನಾವಶ್ಯಕ ವ್ಯರ್ಥವಾಗುವುದನ್ನು ತಡೆಯಬಹುದು. ಇನ್ನೂ ಮುಂದುವರಿದ ದೇಶಗಳಲ್ಲಿ ಇದಕ್ಕಿಂತ ಅಪ್‌ಡೇಟ್‌ ಆವೃತ್ತಿಗಳನ್ನು ಅಳವಡಿಸಲಾಗಿದೆ.

ಸ್ವಯಂ ಚಾಲಿತ ವಿದ್ಯುತ್‌ ದೀಪಗಳನ್ನು ನಗರದ ಪ್ರಮುಖ ಭಾಗಗಳಲ್ಲಿ ಅಳವಡಿಸುವುದು ಉತ್ತಮ. ಇದರಿಂದ ವಿದ್ಯುತ್‌ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ. ಸ್ವಯಂ ಚಾಲಿತ ಬೀದಿ ದೀಪಗಳು ಸೂರ್ಯನ ಬೆಳಕು ಕಡಿಮೆಯಾಗುತ್ತಿದ್ದಂತೆ ಬೆಳಗುತ್ತವೆ. ಸೂರ್ಯನ ಬೆಳಕು ಬೀಳುತ್ತಿದ್ದಂತೆ ಆರುತ್ತದೆ. ಇದರಿಂದ ಮಾನವ ಶ್ರಮ ವ್ಯರ್ಥವಾಗುವುದು ತಪ್ಪುತ್ತದೆ. ದೀಪ ಉರಿಸಲು ಆರಿಸಲು ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಹಣವನ್ನು ಉಳಿಸಿ ಸ್ವಯಂ ಚಾಲಿತ ಬೀದಿ ದೀಪಗಳಿಗೆ ತಾಂತ್ರಿಕವಾಗಿ ಇನ್ನಷ್ಟು ಮುಂದುವರಿದ ದೇಶಗಳಲ್ಲಿ ವಾಹನಗಳು ಸಂಚರಿಸಿದಾಗ ವಿದ್ಯುತ್‌ ದೀಪಗಳು ಉರಿದು ವಾಹನ ತೆರಳಿದಾಗ ಆರುವ ವ್ಯವಸ್ಥೆಯೂ ಇದೆ. ನಗರದ ಸಾಮಾರ್ಥ್ಯಕ್ಕೆ ತಕ್ಕುದಾದ ವ್ಯವಸ್ಥೆಯನ್ನು ಅಳವಡಿಸಬಹುದು.

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next