ನವದೆಹಲಿ: ಹೊಸ ಅಪ್ ಡೇಟ್ ಗಳ ಮೂಲಕ ಬಳಕೆದಾರರ ಮನೆಗೆಲ್ಲುತ್ತಿರುವ ಇನ್ ಸ್ಟಾಗ್ರಾಂ ಇದೀಗ ಸೂಚಿತ ಪೋಸ್ಟ್ (Suggested post) ಅನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಈ ಫೀಚರ್ ಪ್ರಕಾರ ಬಳಕೆದಾರರು ತಾವು ಫಾಲೋ ಮಾಡದಿರುವ ಅಕೌಂಟ್ ಗಳ ಪೋಸ್ಟ್ ಗಳನ್ನು ಕೂಡ ಡಿಸ್ ಪ್ಲೇಯಲ್ಲಿ ಕಾಣಬಹುದು.
ಸೂಚಿತ ಪೋಸ್ಟ್ ಗಳು ಬಳಕೆದಾರರಿಗೆ ಹೆಚ್ಚಿನ ಮನರಂಜನೆ ಅಥವಾ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಇಲ್ಲಿಯವರೆಗೂ ಕೇವಲ ನಾವು ಫಾಲೋ ಮಾಡಿರುವ ಅಕೌಂಟ್ ಗಳ ಪೋಸ್ಟ್ ಗಳನ್ನು ಮಾತ್ರ ಇನ್ ಸ್ಟಾಗ್ರಾಂ ತೋರ್ಪಡಿಸುತ್ತಿತ್ತು. ಇನ್ನು ಮುಂದೆ ಇತರ ಅಕೌಂಟ್ ಗಳ ಪೋಸ್ಟ್ ಗಳನ್ನು ಕೂಡ ಶಿಫಾರಸ್ಸು ಮಾಡುತ್ತದೆ.
ಪ್ರಮುಖವಾಗಿ ಇನ್ ಸ್ಟಾಗ್ರಾಂ ಯಾವುದೇ ಪೋಸ್ಟ್ ಕೊನೆಯಾದ ತಕ್ಷಣ Your’e all caught up ಎಂಬ ಲೈನ್ ತೋರಿಸುತ್ತಿತ್ತು. ಇದೀಗ ಆ ಜಾಗದಲ್ಲಿ ಸಜೆಸ್ಟೆಡ್ ಪೋಸ್ಟ್ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ನಮ್ಮ ಅಭಿರುಚಿಗಳಿಗೆ ಅನುಗುಣವಾಗಿಗಿ ಇನ್ ಸ್ಟಾಗ್ರಾಂ ಪೋಸ್ಟ್ ಗಳನ್ನು ಸೂಚಿಸುತ್ತದೆ.
ಈ ಫೀಚರ್ ಕಂಟೆಂಟ್ ಗಳ ನಡುವಿನ ಸ್ಪೇಸ್ ಅನ್ನು ಭರ್ತಿ ಮಾಡುತ್ತದೆ. ಆದರೇ ಇಲ್ಲಿ ಯಾವುದೇ ಐಜಿ ಟಿವಿ ಕಂಟೆಂಟ್ ಗಳು ಹಾಗೂ ರೀಲ್ಸ್ ಗಳಿರುವುದಿಲ್ಲ. ಬದಲಾಗಿ ಜಾಹೀರಾತು, ಫೋಟೋಗಳು, ಇನ್ನಿತರ ಮನರಂಜನಾ ವಿಡಿಯೋಗಳಿರುತ್ತವೆ.
ಬಳಕೆದಾರರು ತಮ್ಮ ಫೀಡ್ ನ ಅಂತ್ಯಕ್ಕೆ ಬಂದಾಗ, ಅವರ ಆಸಕ್ತಿಗಳಿಗೆ ಸಂಬಂಧಿತ ವಿಷಯವನ್ನು ನೋಡಲು ಈ ಸಜೆಸ್ಟೆಡ್ ಪೋಸ್ಟ್ ಸಹಾಯ ಮಾಡುತ್ತವೆ.