ಬೆಂಗಳೂರು: ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್ ಮಾಡಿ ಮಹಿಳೆಯೊಬ್ಬರಿಂದ ಸೈಬರ್ ವಂಚಕರು ಸಾವಿರಾರು ರೂ. ದೋಚಿದ್ದಾರೆ.
ಈ ಸಂಬಂಧ ಜೆ.ಪಿ.ನಗರ ನಿವಾಸಿ ಅಶ್ವಿನಿ ದೇಸಾಯಿ ಎಂಬವರು ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಅಶ್ವಿನಿದೇಸಾಯಿ ಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ಹೊಂದಿದ್ದು, ಅದನ್ನು ಗಮನಿಸಿರುವ ವಂಚಕರು, ಅವರ ಸ್ನೇಹಿತರ ಖಾತೆಯನ್ನು ಹ್ಯಾಕ್ ಮಾಡಿ, ತುರ್ತು ಹಣದ ಅಗತ್ಯವಿದೆ ಕೂಡಲೇ ಹಣ ವರ್ಗಾವಣೆ ಮಾಡುವಂತೆ ಕೋರಿದ್ದಾರೆ.
ನಂಬಿದ ಅಶ್ವಿನಿ, ವಂಚಕರು ಕಳುಹಿಸಿದ ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ 38.700ರೂ. ವರ್ಗಾವಣೆ ಮಾಡಿದ್ದಾರೆ. ಅನಂತರತನ್ನ ಸ್ನೇಹಿತರಿಗೆ ಕರೆ ಮಾಡಿ ಹಣದ ವಿಚಾರ ತಿಳಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಂ ಇನ್‌ಸಿಡೆಂಟ್ ರಿಪೋರ್ಟ್ (ಸಿಐಆರ್) ದಾಖಲಿಸಿದ್ದಾರೆ.
ಈ ಸಂಬಂದ ಪ್ರಕರಣದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.