ಮಣಿಪಾಲ: ವಿಶ್ವದ ಅತಿದೊಡ್ಡ ವೀಡಿಯೊ ಪ್ಲಾಟ್ಫಾರ್ಮ್ ಯೂಟ್ಯೂಬ್ ಕಿರು ವೀಡಿಯೋ ತಯಾರಿಕೆ ಪ್ಲಾಟ್ಫಾರ್ಮ್‌ಗಳನ್ನು ಮುನ್ನೆಲೆ ತಂದಿದೆ.
ಇದೀಗ ಈ ತಂತ್ರಜ್ಞಾನ ಕೆಲವೆ ದಿನಗಳಲ್ಲಿ ಒಳ್ಳೆಯ ಬೆಂಬಲವನ್ನು ಪಡೆದುಕೊಂಡಿದೆ. ವಿಶ್ಲೇಷಕರ ಪ್ರಕಾರ, ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದ ಬಳಿಕ ಇನ್‌ಸ್ಟಾಗ್ರಾಂ ರೀಲ್‌ಗಳು ಜನಪ್ರಿಯತೆ ಪಡೆದುಕೊಂಡಿತ್ತು.
ಇದಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ತೋರಿಸಿದ್ದರು. ಜನರು ಟಿಕ್‌ಟಾಕ್‌ನ ಖುಷಿಯನ್ನು ಇದರಲ್ಲಿ ಕಂಡುಕೊಂಡಿದ್ದಾರೆ. ಇದೀಗ ಯೂಟ್ಯೂಬ್ ಇಂತಹದ್ದೇ ಒಂದು ಕಿರುತಾಣವನ್ನು ಪರಿಚಯಿಸಿದ್ದು, ರೀಲ್ಸ್‌ಗೆ ದೊಡ್ಡ ಸವಾಲು ಎಂದು ಹೇಳಲಾಗುತ್ತಿದೆ.
ಹಾಗೆ ನೋಡಿದರೆ ಯುಟ್ಯೂಬ್ ಆರಂಭವಾಗಿದ್ದೇ ಕಿರು ವೀಡಿಯೋ ಪ್ಲಾಟ್‌ಫಾರ್ಮ್ ಆಗಿ. ಯೂಟ್ಯೂಬ್ ಸ್ವತಃ 2005ರಲ್ಲಿ 18 ಸೆಕೆಂಡುಗಳ “ಮಿ ಅಟ್ ದಿ ಝೂ’ ನೊಂದಿಗೆ ಪ್ರಾರಂಭವಾಯಿತು. ಇದರ ನಂತರ, ಚಾರ್ಲಿ ಬಿಟ್ ಮೈ ಫಿಂಗರ್ ಅವರನ್ನು ಜನರನ್ನು ತುಂಬಾ ಇಷ್ಟಪಟ್ಟಿದ್ದರು. ಚಾರ್ಲಿ ಅವರ ಈ ವೀಡಿಯೋ ತುಂಬಾ ವೈರಲ ಆಗಿತ್ತು.
Related Articles
ಯೂಟ್ಯೂಬ್ ತನ್ನ ಕಿರು ವಿಡಿಯೋ ಪ್ಲಾಟ್ಫಾರ್ಮ್ ಯೂಟ್ಯೂಬ್ ಶಾರ್ಟ್ಸ್ ಅನ್ನು ಪ್ರಾರಂಭಿಸಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಾಗಿ, ನೀವು ಬಳಸುತ್ತಿರುವ ಅದೇ ಪ್ಲಾಟ್ಫಾರ್ಮ್‌ನಲ್ಲಿ ಇದು ಲಭ್ಯವಿದೆ.
ಎರಡು ರೀತಿಯ ವೀಡಿಯೋಗಳು
YouTube ಕಿರುಚಿತ್ರಗಳಲ್ಲಿ ಎರಡು ರೀತಿಯ ವೀಡಿಯೋಗಳನ್ನು ಅಫ್ಲೋಡ್ ಮಾಡಬಹುದಾಗಿದೆ. ಮೊದಲನೆಯದಾಗಿ ಹೊಸ ಕ್ಯಾಮೆರಾ ಪರಿಕರಗಳನ್ನು ಅಂದರೆ ನಿಮ್ಮ ಮೊಬೈಲ್ ಕೆಮರಾ ಬಳಸಿಕೊಂಡು ಬಳಸಿಕೊಂಡು ನೀವು 15 ಸೆಕೆಂಡುಗಳ ವೀಡಿಯೊವನ್ನು ಲೈವ್ ಅಥವ ರೆಕಾರ್ಡ್ ರೂಪದಲ್ಲಿ ರಚಿಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ ನಿಮಗೆ ಕೆಮರಾ ಪರಿಕರಗಳನ್ನು ಬಳಸಲು ಸಾಧ್ಯವಾಗದಿದ್ದರೆ, ಈಗಾಗಲೇ ನೀವು ರೆಕಾರ್ಡ್ ಮಾಡಿರುವ ಲಂಬವಾದ ವೀಡಿಯೋಗಳನ್ನು 60 ಸೆಕೆಂಡುಗಳ ವರೆಗೆ ಅಪ್ಲೋಡ್ ಮಾಡಬಹುದಾಗಿದೆ. ಅವುಗಳಿಗೆ ಶೀರ್ಷಿಕೆ ಮತ್ತು ವಿವರಣೆ ಬರೆಯಬೇಕಾಗುತ್ತದೆ. ಈ ಕಿರುಚಿತ್ರಗಳ ವೀಡಿಯೊ ಶಾರ್ಟ್ಸ್ ವೀಡಿಯೊ ಶೆಲ್ಫ್ಗಳಲ್ಲಿ ಅಂದರೆ ಯೂಟ್ಯೂಬ್ ಮುಖಪುಟದಲ್ಲಿ ಕಾಣಿಸುತ್ತದೆ.
ನೋಡುವುದು ಹೇಗೆ
ಈ ಹೊಸ ಫೀಚರ್ ಬಹುತೇಕ ಎಲ್ಲ ಯೂಟ್ಯೂಬ್‌ವಿರುವ ಫೋನ್‌ಗಳಲ್ಲಿ ಲಭ್ಯವಿದೆ. ನೀವು ಶಾರ್ಟ್ಸ್ ಕೆಮರಾಗೆ ಅರ್ಹರಾಗಿದ್ದೀರಾ ಎಂಬುದನ್ನು ಅಪ್ಲಿಕೇಶನ್ ಸಹಾಯದಿಂದ ನೋಡಬಹುದಾಗಿದೆ. YouTube ಅಪ್ಲಿಕೇಶನ್ ತೆರೆಯಿರಿ. “+’ ಐಕಾನ್ ಒತ್ತಿರಿ. “ವೀಡಿಯೋ’ ಆಯ್ಕೆಮಾಡಿ. ಈ ಸಂದರ್ಭ “ಕಿರುಚಿತ್ರಗಳು’ ಕಾಣಿಸಿಕೊಂಡರೆ, ನೀವು ಕಿರುಚಿತ್ರಗಳ ಕೆಮರಾಕ್ಕೆ ಪ್ರವೇಶವನ್ನು ಹೊಂದಿದ್ದೀರಿ ಎಂದರ್ಥ. ನಿಮ್ಮ ಮೊದಲ ಕಿರುಚಿತ್ರಗಳ ವೀಡಿಯೋವನ್ನು ಮಾಡಬಹುದು.
ನಾವು ಅಪ್‌ಲೋಡ್ ಮಾಡಬಹುದೇ?
ನೀವು ಇನ್ನೂ ಕಿರುಚಿತ್ರಗಳ ಕೆಮರಾಕ್ಕೆ ಪ್ರವೇಶವನ್ನು ಪಡೆಯದಿದ್ದರೆ, ನೀವು ವೀಡಿಯೊಗಳನ್ನು ಅಪ್ಲೋಡ್ ಮಾಡಬಹುದು. ಆದರೆ ಇದು 60 ಸೆಕೆಂಡುಗಳಿಗಿಂತ ಕಡಿಮೆಯಿರಬೇಕು. ಅಂತಹ ವೀಡಿಯೊಗಳನ್ನು ಅಪ್ಲೋಡ್ ಮಾಡಿದ ಅನಂತರ, ಶೀರ್ಷಿಕೆ ಮತ್ತು ವಿವರಣೆಯಲ್ಲಿ #Shorts ಎಂದು ನಮೂದಿಸಬೇಕು.
Instagram ರೀಲ್‌ಗಳ ಕತೆ ಏನು?
ಟಿಕ್‌ಟಾಕ್ ನಿಷೇಧದ ಅನಂತರ ಅನೇಕ ಕಿರು ವೀಡಿಯೋ ಪ್ಲಾಟ್‌ಫಾರ್ಮ್ಗಳು ಭಾರತಕ್ಕೆ ಬಂದವು. ಇನ್‌ಸ್ಟಾಗ್ರಾಮ್ ರೀಲ್‌ಗಳು ಇದರಲ್ಲಿ ಪ್ರಮುಖವಾಗಿವೆ. ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಿಗಾಗಿ ಅಪ್ಲಿಕೇಶನ್ ಅನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. 15 ಸೆಕೆಂಡುಗಳ ವರೆಗೆ ವೀಡಿಯೋವನ್ನು ರೀಲ್‌ಗಳಲ್ಲಿ ತಯಾರಿಸಲಾಗುತ್ತದೆ. ನೀವು ಈ ವೀಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿ ಅಥವಾ ಫೀಡ್‌ನಲ್ಲಿ ಪೋಸ್ಟ್ ಮಾಡಬಹುದು.
YouTube ಮಾರುಕಟ್ಟೆ ಹೇಗಿದೆ?
ಭಾರತದಲ್ಲಿ ಸುಮಾರು 600 ಮಿಲಿಯನ್ ಸ್ಮಾರ್ಟ್‌ಫೋನ್‌ಗಳಿವೆ. ಅದು ಮುಂದಿನ ವರ್ಷದ ವೇಳೆಗೆ 75 ಮಿಲಿಯನ್ ದಾಟಬಹುದು. ಸ್ಟಾಟ್‌ಟಿಸ್ಟಾದ ಅಂಕಿಅಂಶಗಳನ್ನು ನೋಡಿದರೆ ಭಾರತದಲ್ಲಿ ಶೇ. 90ರಷ್ಟು ಮಂದಿ ಆಂಡ್ರಾಯ್ಡ್ ಫೋನ್‌ಗಳನ್ನು ಬಳಸುತ್ತಾರೆ. ಅಂದರೆ 55 ಕೋಟಿ ಜನರು ಆಂಡ್ರಾಯ್ಡ್ ಫೋನ್‌ಗಳನ್ನು ಹೊಂದಿದ್ದಾರೆ. ಈ ಎಲ್ಲ ಫೋನ್‌ಗಳಲ್ಲಿ ಯೂಟ್ಯೂಬ್ ಇನ್‌ಬಿಲ್ಟ್ ಆಗಿದೆ. ಇದು ಟಿಕ್‌ಟಾಕ್‌ನ 200 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಂನ 100 ಮಿಲಿಯನ್ ಸಕ್ರಿಯ ಬಳಕೆದಾರರಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ.