Advertisement
ಎಲ್ಲರಿಗೂ ತಾನು ಅಂದುಕೊಂಡ ಬದುಕು ಲಭಿಸದು. ಶ್ರೀಮಂತನಾಗಬೇಕು, ಹಾಯಾಗಿ ಬದುಕಬೇಕು, ನಾಲ್ಕು ಅಂತಸ್ತಿನ ಮನೆ ಕಟ್ಟಿಕೊಂಡು ಯಾರ ಜಂಜಾಟವೇ ಇಲ್ಲದೆ ಕುಟುಂಬವನ್ನು ನಿಭಾಯಿಸುತ್ತಾ ಹೋಗಬೇಕೆನ್ನುವ ವ್ಯಕ್ತಿಗೆ ಆ ದೇವರು ಬದುಕಿನಲ್ಲಿ ಈ ಎಲ್ಲಾ ಅದೃಷ್ಟವನ್ನು ಅನುಭವಿಸುವ ಮುನ್ನ ಅತ್ಯಂತ ಕರಾಳ ಬದುಕಿನ ದಿನಗಳನ್ನು ಸವಾಲಿನ ರೂಪದಲ್ಲಿ ಪ್ರತಿಯೊಬ್ಬನಿಗೂ ಅಥವಾ ಪ್ರತಿಯೊಬ್ಬಳಿಗೂ ಎದುರು ಇಡುತ್ತಾನೆ. ಕಷ್ಟದ ಅಲೆಗಳ ಮುಂದೆ ಆತ್ಮವಿಶ್ವಾಸ ಹಾಗೂ ಸ್ಥೈರ್ಯದ ರೆಕ್ಕೆಗಳನ್ನು ಬಳಸಿಕೊಂಡು ಈಜಿಕೊಂಡು ಹೋಗಿ ದಡ ಸೇರುವವರು ಮಾತ್ರ ದೇವರು ಕೊಟ್ಟ ಸವಾಲನ್ನು ಗೆಲ್ಲಲು ಸಾಧ್ಯ.
Related Articles
Advertisement
ಮದುವೆಯ ಮೊದಲ ರಾತ್ರಿಯೆಂದು ತನ್ನ ಗಂಡನನ್ನು ನೋಡಿ, ಇವನ ವರ್ತನೆ ವಿಚಿತ್ರ ಎಂದುಕೊಂಡು ಸುಮ್ಮನೆ ಕೂತಾಗ ಅಚಾನಕ್ಕಾಗಿ ಗಂಡ ಜಾಸ್ಮೀನ್ ಳನ್ನು ಬಲವಂತವಾಗಿ ಎಳೆದುಕೊಂಡು, ಅವಳ ಮೇಲೆ ತನ್ನ ಬಲವನ್ನೆಲ್ಲಾ ಹಾಕಿ, ಆಕೆಯನ್ನು ಹಿಂಸಿಸುತ್ತಾನೆ. ಜಾಸ್ಮೀನ್ ಹಿಂಸೆಯನ್ನು ಸಹಿಸಲಾಗೆದೆ ಕಿರುಚುತ್ತಾಳೆ. ಆದರೆ ಅವಳ ಧ್ವನಿಗೆ ಅಲ್ಲಿ ಯಾರೂ ಕಿವಿಗೂಡಲಿಲ್ಲ. ಇದು ದಿನನಿತ್ಯ ಮುಂದುವರೆಯುತ್ತದೆ. ಜಾಸ್ಮೀನ್ ಳನ್ನು ಹೊಡೆಯುವುದು, ಹಿಂಸಿಸುವುದು. ಗಂಡನ ಈ ವರ್ತನೆಯ ಮೂಲವನ್ನು ಅರಿತುಕೊಂಡಾಗ ಆತನಿಗೆ “ ಆಟಿಸ್ಟಿಕ್ “ ಸಮಸ್ಯೆ( ತಲೆ ಭಾಗದ ನರದ ಸಮಸ್ಯೆ) ಇದೆಯೆಂದು ತಿಳಿಯುತ್ತದೆ. ಶೀಘ್ರದಲ್ಲಿ ಜಾಸ್ಮೀನ್ ಮನೆಯವರ ಬಳಿ ತನಗಾದ ತೊಂದರೆಯನ್ನು ಹೇಳಿಕೊಂಡು ಗಂಡನಿಂದ ವಿಚ್ಛೇದನವನ್ನು ಪಡೆಯುತ್ತಾರೆ. ಆದರೆ ಊರಿಗೆ ಬರುವ ಸಮಯದಲ್ಲಿ ಊರಿನ ಜನರೆಲ್ಲಾ ಅವಳನ್ನು ಗಂಡ ಬಿಟ್ಟು ಬಂದ ಹೆಣ್ಣೆನ್ನುವ ಅಪವಾದನೆಯನ್ನು ಹೊರಿಸಿ ಅವಮಾನ ಮಾಡುತ್ತಾರೆ. ಇದನ್ನು ಮನಗಂಡ ಮನೆಯವರು ಮತ್ತೆ ಜಾಸ್ಮೀನಳನ್ನು ಬೇರೆ ಹುಡುಗನೊಂದಿಗೆ ಮರು ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ.
ಈ ಬಾರಿ ಜಾಸ್ಮೀನ್ ಮದುವೆಯಾಗುವ ಹುಡುಗನ ಜೊತೆ ಮಾತಾಡಿನಾಡಿಕೊಂಡು, ತನ್ನ ಮೇಲಾದ ದೌರ್ಜನ್ಯ, ಹಿಂಸೆ, ತನಗೆ ವಿಚ್ಛೇದನ ಆದದ್ದು ಎಲ್ಲವನ್ನೂ ಹೇಳಿಕೊಂಡು, ಮದುವೆ ಆಗಲು ಬರುವ ಹುಡುಗನ ನಿರ್ಧಾರವನ್ನು ಕೇಳುತ್ತಾರೆ. ಎಲ್ಲವನ್ನು ಕೇಳಿದ ಹುಡುಗ ಮದುವೆ ಆಗಲು ಒಪ್ಪುತ್ತಾನೆ. ಜಾಸ್ಮೀನ್ ಗೆ ಈ ವಿಷಯ ತಿಳಿದು ಸಂತೋಷವಾಗುತ್ತದೆ. ತಾನು ಅಂದುಕೊಂಡ ಗುಣಗಳೆಲ್ಲಾ ಆ ಹುಡುಗನಲ್ಲಿ ಇರುತ್ತದೆ. ಹೀಗೆ ಮಾತುಕತೆ ಮುಗಿದು ಮದುವೆಯ ಬಂಧ ನೆರವೇರುತ್ತದೆ. ಆದರೆ ವಿಧಿ ಇಲ್ಲಿಯೂ ಜಾಸ್ಮೀನ್ ಜೀವನಕ್ಕೆ ಕೊಳ್ಳಿ ಇಟ್ಟು ಬಿಟ್ಟಿತು. ಮದುವೆಯ ಒಂದು ರಾತ್ರಿ ಇದ್ದಕ್ಕಿದ್ದಂತರ, ಜಸ್ಮೀನ್ ನ ಗಂಡ ಆಕೆಯ ಸಮೀಪ ಬಂದು ಕಪಾಳ ಮೋಕ್ಷ ಮಾಡುತ್ತಾನೆ, ನೇರವಾಗಿ ಮುಖಕ್ಕೆ ಹೊಡೆಯುತ್ತಾನೆ, ನೋವಿನಲ್ಲಿ ಜಾಸ್ಮೀನ್ ಏನನ್ನೂ ಪ್ರತಿಕ್ರಿಯಿಸದೆ ಹಾಗೆ ಆಳುತ್ತಾ ಕೂರುತ್ತಾಳೆ. ಆದರೆ ಜಾಸ್ಮೀನ್ ನ ಗಂಡ ಈ ದೌರ್ಜನ್ಯ ಹೆಚ್ಚುತ್ತದೆ. ಜಾಸ್ಮೀನ್ ನ ಕೈ ಕಾಲನ್ನು ಹಗ್ಗಕ್ಕೆ ಕಟ್ಟಿ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾನೆ.
ಗಂಡನ ಈ ಹಿಂಸೆಯನ್ನು ಸಹಿಸಿಕೊಂಡ ಜಾಸ್ಮೀನ್, ಒಂದು ದಿನ ಗರ್ಭಿಣಿಯಾಗುತ್ತಾಳೆ. ಈ ವಿಷಯವನ್ನು ಗಂಡನಿಗೆ ಹೇಳಲು ಹೋದಾಗ ಆತ, ಆಕೆಯ ಹೊಟ್ಟೆಯ ಮೇಲೆ ತುಳಿದು, ಹೀಯಾಳಿಸುತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದ ಜಾಸ್ಮೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಒಂದು ವಾರದ ಬಳಿಕ ಜಾಸ್ಮೀನ್ ಳ ಚೊಚ್ಚಲ ಶಿಶು ಕಣ್ಣು ತೆರೆಯುವ ಮುನ್ನವೇ ಕಣ್ಣು ಮುಚ್ಚುತ್ತದೆ. ದೌರ್ಜನ್ಯದ ಬಗ್ಗೆ ಜಾಸ್ಮೀನ್ ಮನೆಯವರ ಬಳಿ ಹೇಳಿಕೊಳ್ಳುತ್ತಾಳೆ. ಮಾದಕ ದ್ರವ್ಯದ ವ್ಯಸನಿಯಾದ ಗಂಡಜಾಸ್ಮೀನ್ ಳಿಂದ ವಿಚ್ಛೇದನ ಪಡೆಯಲು ನಿರ್ಣಾಯಿಸುತ್ತಾನೆ. ಆದರೆ ಜಾಸ್ಮೀನ್ ವಿಚ್ಛೇದನ ನೀಡುವ ಮುನ್ನ ತನ್ನ ಪಾಪಿ ಗಂಡನಿಗೆ ತಕ್ಕ ಶಿಕ್ಷೆಯಾಗಬೇಕೆನ್ನುವ ಕಾರಣದಿಂದ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಾಳೆ.
ಈ ಎಲ್ಲಾ ನೋವಿನ ಬೇನೆಯನ್ನು ಮರೆಯಲು ದೇಶ ಬಿಟ್ಟು ನೆಲೆಸಲು ನಿರ್ಧಾರಿಸಿದಾಗ, ಜಾಸ್ಮೀನ್ ಳ ಮನೆಯವರು ಆಕೆಯ ಪಾಸ್ ಪೋರ್ಟನ್ನು ಸುಟ್ಟು ಬಿಡುತ್ತಾರೆ. ದೇಶ ಬಿಟ್ಟು ನೆಲಸಲು ವಿಫಲರಾದಾಗ, ಜಾಸ್ಮೀನ್ ಕೊಚ್ಚಿಗೆ ಹೋಗಿ ಪ್ರತಿಷ್ಠಿತ ಫಿಟ್ ನೆಸ್ ಕಛೇರಿಯಲ್ಲಿ ರಿಸೆಪ್ಷಿನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ವೈರಲ್ ಆಯಿತು ಜಾಸ್ಮೀನ್ ಬದುಕು : ರಿಸೆಪ್ಷನಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡ ಜಾಸ್ಮೀನ್ ಮಾನಸಿಕ ಹಾಗೂ ದೈಹಿಕವಾಗಿ ಸ್ಥೈರ್ಯವಂತಳಾಗಿ ಫಿಟ್ ನೆಸ್ ನಲ್ಲಿ ತನ್ನನ್ನು ತಾನು ತೂಡಗಿಸಿಕೊಳ್ಳುತ್ತಾಳೆ. ಫಿಟ್ ನೆಸ್ ಸಂಸ್ಥೆಯಲ್ಲಿರುವ ಎಲ್ಲರೂ ಜಾಸ್ಮೀನ್ ನಲ್ಲಿ ಧೈರ್ಯ ತುಂಬುತ್ತಾರೆ. ಇಷ್ಟೆಲ್ಲಾ ಆದ ಬಳಿಕ ಜಾಸ್ಮೀನ್ ಸುಮ್ಮನೆ ಕೂರಲಿಲ್ಲ. ತಾನೊಂದು ವೃತ್ತಿಪರ ಪ್ರಬಲತರಬೇತಿದಾರ ರಾಗಬೇಕೆನ್ನುವ ಕಾರಣದಿಂದ ಬೆಂಗಳೂರಿಗೆ ಬಂದು ಸರ್ಟಿಫಿಕೇಟ್ ಕೋರ್ಸ್ ಒಂದರಲ್ಲಿ ಸೇರಿಕೊಳ್ಳುತ್ತಾರೆ. ಕೋರ್ಸಿನ ಹಣಕ್ಕಾಗಿ ಹಾಗೂ ತನ್ನ ದಿನ ಖರ್ಚಿಗಾಗಿ ಜಸ್ಮೀನ್ ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಕೆಲಸ ಮಾಡಿಕೊಂಡು ಸಾಗುತ್ತಾರೆ. ಜಾಸ್ಮೀನ್ ಹಗಲು ರಾತ್ರಿ ದೇಹ ದಂಡನೆಯನ್ನು ಮಾಡುತ್ತಾರೆ. ಜಾಸ್ಮೀನ್ ಬೆಂಗಳೂರಿನಲ್ಲಿ ತ್ರೀ ಲೆವೆಲ್ ತರಬೇತುದಾರ ರಾಗುತ್ತಾರೆ.