Advertisement

ಇನ್ಸ್‌ಪೆಕ್ಟರ್‌ ವಿಕ್ರಂ ಪ್ರೇಮಗೀತೆ

10:05 AM Dec 20, 2019 | Lakshmi GovindaRaj |

ಪ್ರಜ್ವಲ್‌ ದೇವರಾಜ್‌ ಅಭಿನಯದ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಸಿದ್ಧವಾಗಿವೆ. ಅದರಲ್ಲಿ ಮುಖ್ಯವಾಗಿ “ಜಂಟಲ್‌ವುನ್‌’ ಹಾಗೂ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಗಳ ಸರದಿ. ಈಗಾಗಲೇ ಗುರುದೇಶಪಾಂಡೆ ನಿರ್ದೇಶನದ “ಜಂಟಲ್‌ ಮಾನ್‌’ ಚಿತ್ರದ “ನಡುಗುತಿದೆ …’ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಈಗ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದ ಸರದಿ. ಪ್ರಜ್ವಲ್‌ ದೇವರಾಜ್‌ ಅವರ 30ನೇ ಚಿತ್ರ ಇದಾಗಿದ್ದು, ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.

Advertisement

ಡಿಸೆಂಬರ್‌ 20ರಂದು ಚಿತ್ರದ “ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ… ಕೈ ತೊಳೆದು ಮುಟ್ಟುವಂಥ ಸುಂದರಿ ನನ್ನವಳೇ…’ ಹಾಡು ಬಿಡುಗಡೆಯಾಗುತ್ತಿದೆ. ಅನೂಪ್‌ ಸೀಳಿನ್‌ ಸಂಗೀತವಿರುವ ಈ ಹಾಡನ್ನು ಸೋನು ನಿಗಮ್‌ ಹಾಡಿದ್ದಾರೆ. “ಕಿರಿಕ್‌ ಪಾರ್ಟಿ’ಯ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ಬರೆದಿದ್ದ ಧನಂಜಯ್‌ ರಂಜನ್‌ ಸಾಹಿತ್ಯವಿದೆ. ರೊಮ್ಯಾಂಟಿಕ್‌ ಹಾಡಾಗಿರುವ ಇದರಲ್ಲಿ ಫೈಟ್‌ ಸನ್ನಿವೇಶಗಳನ್ನು ಸೇರಿಸಲಾಗಿದೆ.

ವಿಖ್ಯಾತ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ಮೂಡಿಬಂದಿದ್ದು, ಯುವ ನಿರ್ದೇಶಕ ನರಸಿಂಹ ಅವರ ನಿರ್ದೇಶನವಿದೆ. ಪ್ರಜ್ವಲ್‌ ಜೋಡಿಯಾಗಿ “ಟಗರು ಭಾವನಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಘು ಮುಖರ್ಜಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ದರ್ಶನ್‌ ಕೂಡಾ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಚಿತ್ರದಲ್ಲಿ ಅವಿನಾಶ್‌, ಧರ್ಮಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. “ಮಫ್ತಿ’ ನವೀನ್‌ ಛಾಯಾಗ್ರಹವಿದೆ.

Advertisement

Udayavani is now on Telegram. Click here to join our channel and stay updated with the latest news.

Next