Advertisement

ಇಂದು ಸಂಜೆ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌ ರಿಲೀಸ್‌

03:15 PM Jan 26, 2021 | Team Udayavani |

ಪ್ರಜ್ವಲ್‌ ದೇವರಾಜ್‌ ನಟನೆಯ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಫೆ. 5ರಂದು ಚಿತ್ರ ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡ ಟ್ರೇಲರ್‌ ರಿಲೀಸ್‌ ಅನ್ನು ಸಿನಿಮಾ ಬಿಡುಗಡೆಯಂತೆ ಸಂಭ್ರಮಿಸಿ, ಅದ್ಧೂರಿಯಾಗಿ ಮಾಡಲು ಮುಂದಾಗಿದೆ. ಇಂದು ಸಂಜೆ 5.30ಕ್ಕೆ ಚಿತ್ರದ ಟ್ರೇಲರ್‌ ಗೌಡನಪಾಳ್ಯದ ಶ್ರೀನಿವಾಸ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

Advertisement

ಸಾಮಾನ್ಯ ವಾಗಿ ಚಿತ್ರ ಬಿಡುಗಡೆಯ ದಿನ ಚಿತ್ರಮಂದಿರಗಳ ಮುಂದೆ ಹೀರೋ ಕಟೌಟ್‌ ನಿಲ್ಲಿಸೋದು ವಾಡಿಕೆ. ಆದರೆ, “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರತಂಡ ಮಾತ್ರ ಟ್ರೇಲರ್‌ ರಿಲೀಸ್‌ ದಿನವೇ ಚಿತ್ರಮಂದಿರದ ಮುಂದೆ ಪ್ರಜ್ವಲ್‌ ಅವರ ಕಟೌಟ್‌ನಿಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಅವರ ಕುಟುಂಬ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದೆ. ಆರಂಭದಿಂದಲೂ ಪ್ರಜ್ವಲ್‌ ಕೆರಿಯರ್‌ಗೆ ಅವರ ಕುಟುಂಬ ಬೆಂಬಲವಾಗಿ ನಿಲ್ಲುತ್ತಲೇ ಬಂದಿದೆ. ಈಗ “ಇನ್ಸ್ ಪೆಕ್ಟರ್‌ ವಿಕ್ರಂ’ಗೂ ಸಾಥ್‌ ನೀಡುತ್ತಿದೆ.

ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರದ ಮೇಲೆ ಪ್ರಜ್ವಲ್‌ ಹಾಗೂ ಅವರ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ನಿರೀಕ್ಷೆ ಇದೆ. ಅದಕ್ಕೆ ಕಾರಣ ಚಿತ್ರದ ಪಾತ್ರ. ಮಾಸ್‌ ಕಂ ಕ್ಲಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂತಹ ಪಾತ್ರದಲ್ಲಿ ಪ್ರಜ್ವಲ್‌ ಕಾಣಿಸಿಕೊಂಡಿ ದ್ದಾರೆ. ಈ ಚಿತ್ರವನ್ನು ವಿಖ್ಯಾತ್‌ ನಿರ್ಮಿಸಿದ್ದು, ನರಸಿಂಹ ನಿರ್ದೇಶಕರು. ಚಿತ್ರದಲ್ಲಿ ದರ್ಶನ್‌ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಈ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಲೇ ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next