Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ

02:30 PM Mar 16, 2020 | Suhan S |

ಕುಳಗೇರಿ ಕ್ರಾಸ್‌: ಮಲಪ್ರಭಾ ನದಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪ್ರವೇಶ ಮಾಡುವ ಕಾರು-ಬಸ್‌ ಸೇರಿದಂತೆ ಇತರೆ ವಾಹನಗಳಲ್ಲಿನ ಜನರನ್ನು ತಪಾಸಣೆ ಮಾಡಲಾಗುತ್ತಿದೆ.

Advertisement

ಪ್ರವಾಸಿಗರು ಪ್ರವೇಶ ಪಡೆಯುವ ಮುಖ್ಯ ರಸ್ತೆಯಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ, ಗ್ರಾಪಂ ಜಂಟಿಯಾಗಿ ಕೊರೋನಾ ವೈರಸ್‌ ತಪಾಸಣಾ ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ಜಿಲ್ಲಾಧಿಕಾರಿ ಆದೇಶದಂತೆ ತಪಾಸಣೆ ನಡೆಸಿದ್ದಾರೆ. ಹೊರದೇಶ ಹಾಗೂ ರಾಜ್ಯಗಳಿಂದ ಬಾದಾಮಿ -ಬನಶಂಕರಿ, ಶಿವಯೋಗಮಂದಿರ, ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗೂ ಕೂಡಲಸಂಗಮ ಸೇರಿದಂತೆ ಐತಿಹಾಸಿಕ ತಾಣಗಳಿಗೆ ಬರುವ ಪ್ರವಾಸಿಗರನ್ನ ತಪಾಸಣೆ ಮಾಡುತ್ತಿದ್ದಾರೆ.

ಜಿಲ್ಲೆ ಪ್ರವೇಶಿಸಿ ವಾಹನಗಳಲ್ಲಿ ಬರುವ ಎಲ್ಲ ಜನರನ್ನ ತಪಾಸಣೆ ಮಾಡುತ್ತಿದ್ದು ಮುಂಜಾಗ್ರತ ಕ್ರಮವಾಗಿ ಬೇರೆ ದೇಶಗಳಿಂದ ರಾಜ್ಯಗಳಿಂದ ಬರುವ ವ್ಯಕ್ತಿಗಳನ್ನು ಗುರುತಿಸಿ ಆರೋಗ್ಯ ಇಲಾಖೆಯವರು ವಿಚಾರಿಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಹಶೀಲ್ದಾರ್‌ ಸುಹಾಸ್‌ ಇಂಗಳೆ ತಿಳಿಸಿದರು.

ಆರೋಗ್ಯ, ಕಂದಾಯ, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಸುಮಾರು 12ರಿಂದ 15ಜನ ಕಾರ್ಯನಿರ್ವಹಿಸುತ್ತಿದ್ದು ಮುನ್ನಚ್ಚರಿಕೆ ಕ್ರಮವಾಗಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವಂತೆ ಆದೇಶ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಒಂದು ಆ್ಯಂಬುಲನ್ಸ್‌ ಗಡಿ ಭಾಗದಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ಎಂ.ಬಿ. ಪಾಟೀಲ, ಕಂದಾಯ ನೀರಿಕ್ಷಕ ಎ.ಡಿ. ಸಾರವಾಡ, ಗ್ರಾಮ ಲೆಕ್ಕಾಧಿಕಾರಿ ಗೋಡೆ, ಮೇಡಿ, ಮುಲ್ಲಾ, ಎಎಸ್‌ಐ ಗೊರವರ್‌, ನಾಗರಬೆಟ್ಟ, ಎಂ.ಐ. ತೋಟದ, ಸಿದ್ದು ಚಲವಣ್ಣವರ, ಮಲ್ಲು ಕುರಿ ಸೇರಿದಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next