Advertisement

14 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ: ಅಧಿಕ ಹಣವಿದ್ದರೆ ವಿಚಾರಣೆ

01:00 AM Mar 15, 2019 | Team Udayavani |

ಮಡಿಕೇರಿ: ಈಗಾಗಲೇ ಲೋಕಸಭಾ ಚುನಾವಣಾ ಸಂಬಂಧ ಕೊಡಗು ಜಿಲ್ಲೆಯಲ್ಲಿ ಅಂತರರಾಜ್ಯ ಮೂರು ಚೆಕ್‌ಪೋಸ್ಟ್‌ಗಳು ಸೇರಿದಂತೆ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಗೆ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 50 ಸಾವಿರಕ್ಕೂ ಹೆಚ್ಚು ಹಣ ತೆಗೆದುಕೊಂಡು ಹೋಗುವವರು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. 50 ಸಾವಿರದಿಂದ 10 ಲಕ್ಷ ರೂ.ವರೆಗೆ ಬ್ಯಾಂಕ್‌ನಲ್ಲಿ ಚಲಾವಣೆಯಾಗುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ ಎಂದರು.  ಎಸ್ಪಿ ಜಿ.ಪಂ.ಸಿಇಒ ಹಾಗೂ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮೀಪ್ರಿಯಾಐ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ‌ು ಹಾಜರಿದ್ದರು.

ಅಧಿಕ ಹಣವಿದ್ದರೆ ವಿಚಾರಣೆ::
ವಾಹನಗಳಲ್ಲಿ ರೂ.10 ಲಕ್ಷಕ್ಕಿಂತ ಹೆಚ್ಚು ನಗದು ಇರುವುದು ತಪಾಸಣಾ ಅವಧಿಯಲ್ಲಿ ಕಂಡುಬಂದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ವಿಚಾರಣೆಗೆ ಒಳಪಡಿಸಲಾಗುವುದು. ವಾಹನಗಳಲ್ಲಿ ಅನುಮಾನಾಸ್ಪದವಾಗಿ, ದಾಖಲೆಗಳಿಲ್ಲದೆ ಸಾಗಿಸುವ ಯಾವುದೇ ಗೃಹ ಉಪಯೋಗಿ ವಸ್ತುಗಳು, ದಿನಬಳಕೆ ವಸ್ತುಗಳು, ಮದ್ಯ, ಮಾದಕ ದ್ರವ್ಯಗಳು ಮತ್ತು ಆಯುಧಗಳು ¤ಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದರು. ನಿಶ್ಚಿತಾರ್ಥ, ಮದುವೆ, ನಾಮಕರಣ, ಜಾತ್ರೆ, ಹಬ್ಬ ಇತ್ಯಾದಿ ಖಾಸಗಿ ಸಮಾ ರಂಭಗಳಿಗೆ ಯಾವುದೇ ನಿರ್ಬಂಧ ವಿರುವುದಿಲ್ಲ. ಆದರೆ ಈ ಸಮಾರಂಭಗಳು ರಾಜಕೀಯ ಪ್ರೇರಿತವಾಗಿರಬಾರದು ಎಂ¨ರು.

ಮಾ.19 ರಂದು ಅಧಿಸೂಚನೆ:
ಲೋಕಸಭಾ ಚುನಾವಣೆ ಸಂಬಂಧ ಮಾ.19 ರಂದು ಚುನಾವಣಾ ಅಧಿಸೂಚನೆಯನ್ನು ಚುನಾವಣಾಧಿಕಾರಿ ಅವರು ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಮಾ.26 ಕಡೆ ದಿನವಾಗಿದೆ. ನಾಮಪತ್ರ ಪರಿಶೀಲನಾ ಕಾರ್ಯವು ಮಾ.27 ರಂದು ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಮಾ.29 ಕಡೆ ದಿನವಾಗಿದೆ. ಏ.18 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಎಷ್ಟು ವೆಚ್ಚ ಮಾಡಬಹುದು:
ಒಬ್ಬ ಅಭ್ಯರ್ಥಿಯು ರೂ.70 ಲಕ್ಷದವರೆಗೆ ಚುನಾವಣಾ ವೆಚ್ಚಗಳನ್ನು ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾವಹಿಸಲು ವಿವಿಧ ವೆಚ್ಚ ತಂಡಗಳನ್ನು ನೇಮಕ ಮಾಡಲಾಗಿದೆ.  208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ ಒಟ್ಟು ಇಬ್ಬರು ಸಹಾಯಕ ವೆಚ್ಚ ವೀಕ್ಷಕರು, 2 ಲೆಕ್ಕ ಪತ್ರ ತಂಡ, ಒಂದು ವೀಡಿಯೋ ವಿವಿಂಗ್‌ ತಂಡ, 4 ವೀಡಿಯೋ ಸರ್ವಿಲೆನ್ಸ್‌ ತಂಡಗಳನ್ನು ನೇಮಕ ಮಾಡಲಾಗಿದೆ. ಎಂದು ಅವರು ತಿಳಿಸಿದರು.

Advertisement

ಅಧಿಕಾರಿಗಳ ನೇಮಕ
‌ ಜಿ.ಪಂ.ಸಿಇಒ ಕೆ.ಲಕ್ಷಿ¾ಪ್ರಿಯಾ(ಮಾದರಿ ನೀತಿ ಸಂಹಿತೆ ಮತ್ತು ಸ್ವೀಪ್‌) ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಹಿರಿಯ ಉಪ ನಿರ್ದೇಶಕರಾದ ಎಚ್‌.ಇ.ನಂದ (ಚುನಾವಣಾ ವೆಚ್ಚ ನಿರ್ವಹಣೆ), ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್‌ , ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕೆ.ಪಿ.ಶಂಷುದ್ದಿನ್‌(ಸಿ-ವಿಜಿಲ್‌), ಶಿಕ್ಷಣ ಇಲಾಖೆ ಉಪ ನಿರ್ದೇಶಕ‌ ಮಚ್ಚಾಡೋ (ಮತಗಟ್ಟೆ ಅಧಿಕಾರಿಗಳ ನೇಮಕ), ಲೋಕೋಪ ಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ‌ ಎಂಜಿನಿಯರ್‌ ಇಬ್ರಾಹಿಂ (ವಿದ್ಯುನ್ಮಾನ ಮತಯಂತ್ರ), ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ(ಮತಗಟ್ಟೆಗಳ ಮೇಲ್ವಿಚಾರಣೆ), ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್‌ ಸಿ.ಎಂ(ವೀಕ್ಷಕರು), ಮಡಿಕೇರಿ ಎನ್‌.ಐ.ಸಿ ಮಾಹಿತಿ ಅಧಿಕಾರಿ ಅಜಿತ್‌ ಜಿ(ಐಟಿ, ಐಟಿ ಆ್ಯಪ್ಸ್‌ ಮತ್ತು ತಾಂತ್ರಿಕತೆ), ಕೂಡಿಗೆ ಡಯಟ್‌ ಪ್ರಾಂಶುಪಾಲ ವಾಲ್ಟರ್‌ ಎಚ್‌.ಡಿಮೆಲೊ(ತರಬೇತಿ).

Advertisement

Udayavani is now on Telegram. Click here to join our channel and stay updated with the latest news.

Next