Advertisement

ಕೊಚ್ಚಿ ಹೋದ ಮುಷ್ಟೂರು ಸೇತುವೆ ಪರಿಶೀಲನೆ

06:18 PM Aug 03, 2022 | Team Udayavani |

ಮಾನ್ವಿ: ನಿರಂತರ ಸುರಿದ ಮಳೆಗೆ ತಾಲೂಕಿನ ಮುಷ್ಟೂರು ಗ್ರಾಮದ ಹತ್ತಿರದ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು ಸ್ಥಳಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಗ್ರಾಮದ ಜನರಿಗೆ ಶಾಶ್ವತ ಸೇತುವೆ ಇಲ್ಲದ್ದರಿಂದ ತೊಂದರೆಯಾಗಿದ್ದು 9 ಕೋಟಿ ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಣಕ್ಕೆ ಅನುದಾನ ಮಂಜೂರು ಮಾಡುವಂತೆ ಹಲವು ಬಾರಿ ಸದನದಲ್ಲಿ ಒತ್ತಾಯಿಸಿ ಸರ್ಕಾರದ ಗಮನ ಸೆಳೆದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಇದೀಗ ತಾತ್ಕಾಲಿಕ ಸೇತುವೆಯೂ ಕುಸಿದಿದ್ದು ಈ ಭಾಗದ ಜನರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಜನರ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ಸೇತುವೆ ಎರಡು ದಿನಗಳಲ್ಲಿ ನಿರ್ಮಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಎಇಇ ರಾಜಕುಮಾರ, ಜೆಇ ಚಂದ್ರಕಾಂತ ಗುಪ್ತ ಅವರಿಗೆ ಸೂಚಿಸಿದರು.

ಎಇಇ ರಾಜಕುಮಾರ ಮಾತನಾಡಿ, ಹಳ್ಳದಲ್ಲಿ ನೀರಿನ ಹರಿವು ಕಡಿಮೆಯಾದ ನಂತರ ತಾತ್ಕಾಲಿಕ ಸೇತುವೆ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು. ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್‌, ರಾಜಾ ರಾಮಚಂದ್ರನಾಯಕ, ಗ್ರಾಪಂ ಸದಸ್ಯರಾದ ಮರೇಗೌಡ ಮದ್ಲಪುರ, ಮುಖಂಡರಾದ ಇಸ್ಮಾಯಿಲ್‌ ಸಾಬ್‌, ಖಲೀಲ್‌ ಖುರೇಷಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next