Advertisement
ಕ್ರೂಸ್ ಟರ್ಮಿನಲ್ ಒಳಗೆ ಪ್ರವೇಶಿಸುವ ಸಂದರ್ಭ ಸ್ಕ್ಯಾನಿಂಗ್ ಮಾಡಲಾಯಿತು. ಪ್ರವಾಸಿಗರು ಆಗಮಿಸುವ ಸಂದರ್ಭ ಸಾಮಾನ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಟ್ಟೆಚ್ಚರ ಇರುವುದರಿಂದ ತಪಾಸಣೆ ಬಿಗಿಗೊಳಿಸಲಾಗಿತ್ತು ಎಂದು ಚೇರ್‌ಮನ್ ಎ.ವಿ. ರಮಣ ತಿಳಿಸಿದರು.
ನವಮಂಗಳೂರು ಬಂದರಿಗೆ ಈ ಸಾಲಿನಲ್ಲಿ ಆಗಮಿಸಿದ 12ನೇ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ. 1,800 ವಿದೇಶಿ ಪ್ರವಾಸಿಗರು ಹಾಗೂ 786 ಸಿಬಂದಿ ಅದರಲ್ಲಿದ್ದಾರೆ. ನಗರದ ಶಾಪಿಂಗ್ ಮಾಲ್, ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿ ಪ್ರವಾಸಿಗರು ಸಂದರ್ಶಿಸಿದರು. ಹಡಗು ಬಳಿಕ
ಕೊಚ್ಚಿಗೆ ಪ್ರಯಾಣ ಬೆಳೆಸಿತು.