ಹೊಸಕೋಟೆ: ತಾಲೂಕಿನ ದೇವನಗುಂದಿಯಲ್ಲಿರುವ ಇಂಡೇನ್ ಬಾಟ್ಲಿಂಗ್ ಪ್ಲಾಂಟ್‌ನ ಸುರಕ್ಷತಾ ವ್ಯವಸ್ಥೆ ಯನ್ನು ಶಾಸಕ ಶರತ್ ಬಚ್ಚೇಗೌಡ ಪರಿಶೀಲಿಸಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಅನಾಹುತ ಗಮನದಲ್ಲಿಟ್ಟು ಕೊಂಡು ತಾಲೂಕಿನ ಗ್ರಾಮಸ್ಥರ ರಕ್ಷಣೆಗಾಗಿ ದೇವನ ಗೊಂದಿ ಘಟಕದಲ್ಲಿ ಪಾಲಿಸುತ್ತಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅಲ್ಲದೇ, ಯಾವುದೇ ಅಹಿತಕರ ಘಟನೆ ಸಂಭವಿಸ ದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದರು. ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಸಿಲಿಂಡರ್‌ಗಳಿಗೆ ಅನಿಲ ತುಂಬುವ ಸ್ಥಾವರ ಗಳನ್ನೂ ಪರಿಶೀಲಿಸಿ, ಸೂಕ್ತ ಮುಂಜಾಗ್ರತಾ ಕ್ರಮ ಕೈ ಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದರು.
ಘಟಕದ ಪ್ರಧಾನ ವ್ಯವಸ್ಥಾಪಕ ನಬಾ ಕುಮಾರ್ ಕೊನಾರ್ ಮಾತನಾಡಿ, 2001ರಲ್ಲಿ ಸುಮಾರು 93 ಎಕರೆ ಪ್ರದೇಶದಲ್ಲಿ ಸ್ಥಾವರ ಪ್ರಾರಂಭಗೊಂಡಿದ್ದು ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳಿಗೆ ಅನಿಲ ಭರ್ತಿ ಮಾಡುವ ಸಾಮರ್ಥ್ಯ ಹೊಂದಿದೆ. ನಿಗದಿಪಡಿಸಿರುವ ಎಲ್ಲಾ ಸುರ ಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಉಷ್ಣಾಂಶದ ತೀವ್ರತೆ ಪತ್ತೆ ಹಚ್ಚಲು ವಿಶೇಷ ಸ್ವಯಂಚಾಲಿತ ನೀರು ಸಿಂಪಡಿಸುವ ಸಲಕರಣೆ ಅಳವಡಿಸಿಕೊಳ್ಳಲಾಗಿದೆ.
ಪ್ರತಿ 6 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ವಿಪತ್ತು ನಿಯಂತ್ರಣದ ಬಗ್ಗೆ ಅಣುಕು ಪ್ರದರ್ಶನ ನಡೆಸುತ್ತಿದೆ ಎಂದು ಹೇಳಿದರು. ಸಂಸ್ಥೆ ವತಿಯಿಂದ ಉಪಕರಣಗಳ ಸುಸ್ಥಿತಿ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲನೆ ನಡೆಸಿ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿ ದರು.
ಸಂಸ್ಥೆಯ ತೈಲ ಸರಬರಾಜು ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜೇಂದ್ರಪ್ರಸಾದ್, ಜಿಪಂ ಸದಸ್ಯ ಕೆ. ಕೃಷ್ಣ ಮೂರ್ತಿ, ವಾಗಟ ಗ್ರಾಪಂ ಅಧ್ಯಕ್ಷ ರಾಮಚಂದ್ರ,ಕಾರ್ಖಾನೆ, ಬಾಯ್ಲರ್ ಇಲಾಖೆ ಜಿಲ್ಲಾ ಉಪನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಸಿದ್ದೇಗೌಡ ಮತ್ತಿತರರಿದ್ದರು.