Advertisement

ಸ್ಥಗಿತವಾದ ಆಹಾರ ತಯಾರಿಕಾ ಘಟಕ ಪರಿಶೀಲನೆ

11:33 AM Jul 20, 2022 | Team Udayavani |

ಚಿಂಚೋಳಿ: ಪಟ್ಟಣದ ವಿಶ್ವಬ್ಯಾಂಕ್‌ ಹಾಗೂ ಇಂಟರ್‌ ನ್ಯಾಶನಲ್‌ ಗ್ಲೋಬಲ್‌ ಅಲೈನ್ಸ್‌ ಇಂಪ್ರೂವ್‌ ನ್ಯೂಟ್ರಿಸಿಯನ್‌ ನೆರವಿನ ಸ್ಥಗಿತವಾಗಿರುವ ಕರ್ನಾಟಕ ಮಲ್ಟಿ ಸೆಕ್ಟೋರಲ್‌ ನ್ಯೂಟ್ರಿಷನ್‌ ಪೈಲಟ್‌ ಪ್ರಾಜೆಕ್ಟ್ ಶಕ್ತಿವೀಟಾ ಸಾರಯುಕ್ತ ಪೌಷ್ಟಿಕ ಆಹಾರ ತಯಾರಿಕಾ ಘಟಕಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಗಿರೀಶ ಬಡೊಲೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕೆಎಚ್‌ಪಿಟಿ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನವು ಮಾತೃಶಕ್ತಿ ಮಹಿಳಾ ಸ್ವ-ಸಹಾಯ ಸಂಘ ನಡೆಸುತ್ತಿರುವ ಪೌಷ್ಟಿಕ ಆಹಾರ ಘಟಕ 2018ರಲ್ಲೇ ಸ್ಥಗಿತವಾಗಿದೆ. ಈ ಘಟಕ 2015ರಲ್ಲಿ ಪ್ರಾರಂಭವಾಗಿದ್ದು 17ಸಾವಿರ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಪೂರೈಸಿದೆ. ಆದರೆ ಇದೀಗ ಸರ್ಕಾರದ ನೆರವು ಇಲ್ಲದ ಕಾರಣ ಸ್ಥಗಿತವಾಗಿದೆ. ಈ ಘಟಕಕಕಎ ಜುಲೈ 21ರಂದು ಜಪಾನ್‌ ಸೋಷಿಯಲ್‌ ಡೆವಲಪ್‌ಮೆಂಟ್‌ ಫಂಡ್‌ ನಿಯೋಗ ಭೇಟಿ ನೀಡಿ ಪರಿಶೀಲಿಸಲಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ ಗಫಾರ ಅಹೆಮದ್‌ ಮಾತನಾಡಿ, ತಾಲೂಕಿನಲ್ಲಿ 150 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇದರಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳಿದ್ದಾರೆ, ಗರ್ಭಿಣಿಯರಲ್ಲಿ ರಕ್ತ ಹೀನತೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಇದೆ ಎಂದು ವಿವರಿಸಿದರು.

ತಾಲೂಕು ನೋಡಲ್‌ ಅಧಿಕಾರಿ ಡಾ| ರಾಜಕುಮಾರ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಜೇವರ್ಗಿ ಮತ್ತು ಅಫಜಲಪುರ ತಾಲೂಕಿನಲ್ಲಿ ಅಪೌಷ್ಟಿಕತೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಮಾಹಿತಿ ನೀಡಿದರು.

ತಾಪಂ ಇಒ ವೈ.ಎಲ್‌.ಹಂಪಣ್ಣ, ಸಿಡಿಪಿಒ ಶರಣಬಸಪ್ಪ, ಡಾ| ಮಹಮ್ಮದ ಗಫಾರ, ಡಾ| ರಾಜಕುಮಾರ ಕುಲಕರ್ಣಿ, ಜಗದೇವ ಬೈಗೊಂಡ, ಉದ್ಯೋಗ ಖಾತ್ರಿ ಅಧಿಕಾರಿ ನಾಗೇಂದ್ರಪ್ಪ ಬೆಡಕಪಳ್ಳಿ, ಶಿವಯೋಗಿ ಮಠಪತಿ ಈ ಸಂದರ್ಭದಲ್ಲಿದ್ದರು. ಆನಂತರ ಸಿಇಒ ಕುಂಚಾವರಂ, ಜಿಲವರ್ಷ, ಚಂದ್ರಂಪಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next