Advertisement

ಅನುದಾನ ಬಿಡುಗಡೆಗೆ ದಸಂಸ ಒತ್ತಾಯ

02:35 PM Dec 07, 2019 | Team Udayavani |

ತಿ.ನರಸೀಪುರ: ವಸತಿ ಯೋಜನೆಯಡಿಯಲ್ಲಿಮನೆ ನಿರ್ಮಿಸಿಕೊಂಡಿರುವ ಫ‌ಲಾನುಭಗಳಿಗೆಅನುದಾನ ಬಿಡುಗಡೆ ಮಾಡುವಂತೆ ಹಾಗೂ ಮನೆ ನಿರ್ಮಾಣದ ಅನುದಾನ ಹೆಚ್ಚಿಸುವಂತೆ ಒತ್ತಾಯಿಸಿ ದಸಂಸ ಸಮಿತಿ (ಸಾಮಾಜಿಕ ನ್ಯಾಯ) ತಾಲೂಕಿನ ಶಾಖೆ ಕಾರ್ಯಕರ್ತರು ನಡೆಸಿದರು.

Advertisement

ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನಾವಿವಿಧರಣಿಯಲ್ಲಿ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಆಲಗೂಡು ಎಸ್‌.ಚಂದ್ರಶೇಖರ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಸತಿ ರಹಿತ ಕುಟುಂಬಗಳಿಗೆ ಸೂರು ಕಲ್ಪಿಸುವ ಉದ್ದೇಶದಡಿ ಡಾ.ಬಿ.ಆರ್‌.ಅಂಬೇಡ್ಕರ್‌, ಬಸವ, ಪ್ರಧಾನ ಮಂತ್ರಿ ವಸತಿ ಯೋಜನೆಯಡಿಫ‌ಲಾನುಭಗಳನ್ನು ಗುರುತಿಸಿ ಮನೆ ಮಂಜೂರು ಮಾಡಿ ಆದೇಶ ನೀಡಿದ್ದಾರೆ ಎಂದರು.

ಹಲವು ಫ‌ಲಾನುಭವಿಗಳು ವಿವಿಧ ಹಂತದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ ಬರಬೇಕಾದ ಅನುದಾನ ಬಿಡುಗಡೆಯಾಗದೇ ಫ‌ಲಾನುಭವಿಗಳು ಅತಂತ್ರರಾಗಿದ್ದಾರೆ. ಅನುದಾನ ನಂಬಿ ಫ‌ಲಾನುಭವಿಗಳುಪರಿತಪಿಸುವಂತಾಗಿದೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಸೋಸಲೆ ರಾಜಶೇಖರ್‌ ಮೂರ್ತಿ ಮಾತನಾಡಿ, ಗ್ರಾಮ ಪಂಚಾಯ್ತಿಗಳು ಮನೆ ನಿರ್ಮಾಣಕ್ಕೆ ನೀಡುವ ಅನುದಾನ ಸಾಕಾಗುತ್ತಿಲ್ಲ. ಮನೆ ಸಾಮಗ್ರಿಗಳ ಬೆಲೆ ದುಬಾರಿಯಾಗಿ ರುವುದರಿಂದ ನೀಡುವ ಅನುದಾನ ಸಾಲುವುದಿಲ್ಲ.

ಈ ನ್ನೆಲೆಯಲ್ಲಿ ಅನುದಾನವನ್ನು 5 ಲಕ್ಷಕ್ಕೆ ನಿಗದಿ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ಅನುದಾನ ಬಿಡುಗಡೆಗೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುವುದನ್ನು ನಿಯಂತ್ರಿಸಬೇಕು ಎಂದರು.

Advertisement

ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇಫ‌ಲಾನುಭಗಳ ಖಾತೆಗೆ ಅನುದಾನದ ಕಂತುಜಮಾ ಮಾಡಬೇಕು ಮತ್ತು ಪ್ರಸ್ತುತ ಮಂಜೂರಾಗಿರುವ ಮನೆಗಳಿಗೆ ಹೆಚ್ಚಿನ ಅನುದಾನ ನಿಗದಿಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಿಪಂ ಮೌಲ್ಯ ಮಾಪನ ಶಾಖಾಧಿಕಾರಿ ರಾಜಗೋಪಾಲ್‌ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ತಾ. ಅಧ್ಯಕ್ಷ ಕೆಂಪಯ್ಯ ನಹುಂಡಿ ರಾಜು, ಸಮಿತಿ ಮುಖಂಡರಾದಕನ್ನ ನಾಯಕನಹಳ್ಳಿ ಮರಿಸ್ವಾಮಿ, ಚಂದ್ರಪ್ಪ, ರಾಜಪ್ಪ, ಕೊಳತೂರು ಪ್ರಭಾಕರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next