ತಿಪಟೂರು: ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿಆಕ್ಸಿಜನ್ ಬೆಡ್ ಸಂಖ್ಯೆ 35 ಮಾತ್ರ ಇದ್ದು, ಕೂಡಲೇಜಿಲ್ಲಾಡಳಿತ ವಿಶೇಷ ಗಮನ ಹರಿಸಿ ಆಮ್ಲಜನಕ ಸಹಿ ತಬೆಡ್ ಸಂಖ್ಯೆ ಕನಿಷ್ಟ 75ಕ್ಕಾದರೂ ಹೆಚ್ಚಿಸ ಬೇಕೆಂದುಬಿಜೆಪಿ ಮುಖಂಡ ಲೋಕೇಶ್ವರ ಒತ್ತಾಯಿಸಿದರು.
ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವ ರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ತಿಪಟೂರು ಬೆಂಗಳೂರು ಕಂದಾಯ ವಿಭಾಗದಲ್ಲೇ ದೊಡ್ಡ ತಾಲೂಕಾಗಿದ್ದು, ಜನಸಂಖ್ಯೆಯೂ ಹೆಚ್ಚಿದೆ.ಇಲ್ಲಿ ಕೇವಲ 50 ಬೆಡ್‌ಗಳ ಕೋವಿಡ್ ಆಸ್ಪತ್ರೆ ಇದ್ದು,ಇದು ಏನಕ್ಕೂ ಸಾಲದಾಗಿದೆ.
ಕೋವಿಡ್ 2ನೆ ಅಲೆಯಲ್ಲಿಸೋಂಕಿತರ ಹಾಗೂ ಸಾವು-ನೋವಿನ ಸಂಖ್ಯೆ ದಿನೇ ದಿನೆದುಪ್ಪ ಟ್ಟಾಗುತ್ತಿದ್ದು, ಆಮ್ಲಜನಕ ಸಹಿತ ಬೆಡ್‌ಗಳ ಸಂಖ್ಯೆತೀರಾ ಕಡಿಮೆ ಇದೆ. ಜೀವ ಕಳೆದುಕೊಳ್ಳುತ್ತಿ ರುವಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.ನಗರದ ಹಳೆಪಾಳ್ಯ ಬಡಾವಣೆ ಒಂದರಲ್ಲೇ 8ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ತಾಲೂಕಾದ್ಯಂತನಿತ್ಯ ಸಾವು ಸಂಖ್ಯೆ ಹೆಚ್ಚುತ್ತಿದ್ದು, ಅವರ ಕುಟುಂಬ ಅನಾಥವಾಗುತ್ತಿವೆ. ಆಮ್ಲಜನಕ ಬೆಡ್ ಈಗಾಗಲೇ ಭರ್ತಿ ಯಾಗಿದ್ದು, ಹೊಸ ಸೋಂಕಿತರಿಗೆ ಆಮ್ಲಜನಕ ಬೆಡ್‌ಗಳದ್ದೇತೀವ್ರ ತೊಂದರೆಯಾಗಿದೆ ಎಂದರು.
ಸ್ವತ್ಛತೆ ಆದ್ಯತೆ: ನಗರಸಭೆ ವಿಶೇಷವಾಗಿ ನಗರವನ್ನುನಿತ್ಯವೂ ಸ್ವತ್ಛತೆ ಹಾಗೂ ಸ್ಯಾನಿಟೈಸ್ ಮಾಡಬೇಕು.ಸರ್ಕಾರಿ ಹಾಗೂ ನಗರದಲ್ಲಿನ ಬಹುತೇಕ ಖಾಸಗಿಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು,ಆಸ್ಪತ್ರೆಗಳ ಸುತ್ತಮುತ್ತ ಬಳಸಿ ಬಿಸಾಡುವ ತ್ಯಾಜ್ಯಬಹುದೊಡ್ಡದಿದ್ದು, ಆಸ್ಪತ್ರೆಗಳ ಸುತ್ತಮುತ್ತಲಿನನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರಿಕಿರಿಯಾಗುತ್ತಿದೆ. ನಿತ್ಯವೂ ಇಂತಹ ಕಡೆಗಳಲ್ಲಿ ಸ್ವತ್ಛತೆ ಹಾಗೂ ನಿತ್ಯಸ್ಯಾನಿಟೈಸ್ ಮಾಡಬೇಕೆಂದು ತಿಳಿಸಿದರು.
ಸೌಲಭ್ಯ ಕೊರತೆ: ನಗರದ ಕೆಲವೆಡೆ ಕೋವಿಡ್ ಕೇರ್‌ಸೆಂಟರ್‌ಗಳನ್ನು ತಾಲೂಕು ಆಡಳಿತ ತೆರೆದಿದ್ದು, ಅಲ್ಲಿಮೂಲಭೂತ ಸೌಲಭ್ಯಗಳ ಜತೆ ವೈದ್ಯರ, ನರ್ಸ್‌ಗಳಕೊರತೆ ಇದೆ. ಇಲ್ಲೂ ಆಮ್ಲಜನಕ ಬೆಡ್‌ಗಳ ವ್ಯವಸ್ಥೆಮಾಡಬೇಕಾಗಿದ್ದು, ಆರೋಗ್ಯ ಇಲಾಖೆ ಹಾಗೂತಾಲೂಕು ಆಡಳಿತ ಗಮನ ಹರಿಸಬೇಕು ಎಂದರು.
ಕೆಲ ಆ್ಯಂಬುಲೆನ್ಸ್ ಶವ ಸಾಗಿಸಲು 10 ಸಾವಿರ ರೂ.ಬೇಡಿಕೆ ಇಡುತ್ತಿದ್ದು, ಅದನ್ನು ತಾಲೂಕು ಆಡಳಿತಮಾತುಕತೆ ನಡೆಸಿ 4 ಸಾವಿರಕ್ಕಾದರೂ ಇಳಿಸಬೇಕುಎಂದರು. ನಗರಸಭೆ ಅಧ್ಯಕ್ಷ ರಾಮ್‌ಮೋಹನ್,ಉಪಾಧ್ಯಕ್ಷ ಸೊಪ್ಪುಗಣೇಶ್, ಪಿಎಂಸಿ ನಿರ್ದೇಶಕಬಸವರಾಜು(ಕೌಟು), ಬಿಜೆಪಿ ಮುಖಂಡ ದತ್ತಪ್ರಸಾದ್, ನಗರಸಭಾ ಸದಸ್ಯೆ ಯಮುನಾ, ಭಾರತಿಹಾಗೂ ಇತರರು ಇದ್ದರು.