Advertisement

ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

06:22 PM Dec 13, 2019 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆ ವಾರ್ಡ್‌ ನಂ.4ರ ವ್ಯಾಪ್ತಿಯ ವಸಂತ್‌ ಸಿಂಗ್‌ ಜಮಾದಾರ ನಗರಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಬಡಾವಣೆಯಲ್ಲಿ ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.

Advertisement

ಇಲ್ಲಿನ ಹುಯಿಲಗೋಳ ರಸ್ತೆಲ್ಲಿರುವ ವಸಂತ್‌ ಸಿಂಗ್‌ ಜಮಾದಾರ ನಗರದಲ್ಲಿ ಸುಮಾರು 20 ವರ್ಷಗಳಿಂದ ಯಾವುದೇ ಮೂಲ ಸೌಲಭ್ಯಗಳಿಲ್ಲದೇ, ಜನರು ದಯನೀಯವಾಗಿ ಬದುಕುತ್ತಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಿರುವ ರಸ್ತೆ, ಚರಂಡಿ ಹಾಗೂಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಫಾರ್ಮ್ನಂ .3, ಉತಾರ ನೀಡಬೇಕು ಎಂದು ದಶಕಗಳಿಂದ ಒತ್ತಾಯಿಸುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಧಿಕ್ಕಾರ ಕೂಗಿದರು. 3 ವರ್ಷಗಳ ಇದೇ ಬೇಡಿಕೆಗಳಿಗೆ ಒತ್ತಾಯಿಸಿ 17/05/2016 ರಂದು ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿಲಾಗಿದೆ. 19/05/2016 ರಿಂದ ಅಹೋರಾ ರಾತ್ರಿ ಉಪವಾಸ ಸತ್ಯಾಗ್ರಹ ಮನವಿ ಸಲ್ಲಿಸಿದಾಗ, ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ನಗರಸಭೆ ಅಧಿಕಾರಿಗಳು ಲಿಖೀತ ಭರವಸೆ ನೀಡಿದ್ದರು. ಆದರೆ, ವರ್ಷಗಳು ಕಳೆದರೂ, ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ಕಲ್ಪಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಒತ್ತಾಯಿಸಿದರು.

ಇದೇ ವೇಳೆ ನಗರಸಭೆ ಅಧಿ ಕಾರಿಗಳು ಸ್ಥಳಕ್ಕೆ ದಾವಿಸಿ, ಪ್ರತಿಭಟನಾ ನಿರತರ ಮನವೊಲಿಕೆಗೆ ನಡೆಸಿದ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಪೌರಾಯುಕ್ತ ಮನ್ಸೂರ ಅಲಿ ಅವರು 30 ದಿನಗಳಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪತ್ರ ಕಳುಹಿಸಿದ್ದರಿಂದ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.

ಧರಣಿಯಲ್ಲಿ ಬಡಾವಣೆಯ ಪ್ರಮುಖರಾದ ಹುಲ್ಲೇಶ ಭಜಂತ್ರಿ, ಇಸ್ಮಾಯಿಲಸಾಬ ಡಂಬಳ, ಬಸಣ್ಣ ಕೋತಂಬರಿ, ಈರಣ್ಣ ದ್ಯಾವನೂರ, ಬಸಣ್ಣ ಬಡಿಗೇರ, ಸೊಲಬಯ್ಯ ಹಿರೇಮಠ, ಮಹೇಶ ಸೂಡಿ, ಶ್ರೀನಿವಾಸ ಹುಬ್ಬಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next