Advertisement

2ನೇ ಬೆಳೆಗೆ ನೀರು ಹರಿಸಲು ಒತ್ತಾಯ

01:13 PM Aug 27, 2019 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟಗಾರ ವಾಟಾಳ್‌ ನಾಗರಾಜ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಡ್ಯಾಂ ನೀರನ್ನು ಅವಲಂಬಿಸಿ ಕೆಲ ವರ್ಷಗಳಿಂದ ಕೇವಲ ಒಂದೇ ಬೆಳೆಯಲು ಸಾಧ್ಯವಾಗಿದೆ. ಈ ಬಾರಿ ಟಿಬಿ ಡ್ಯಾಂ ಭರ್ತಿಯಾಗಿದ್ದು, 2ನೇ ಬೆಳೆಗೆ ನೀರು ಹರಿಸಬೇಕು. ಇದಕ್ಕೂ ಮೊದಲು ಜಲಾಶಯದಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳಬೇಕು. ಟಿಬಿ ಬೋರ್ಡ್‌ಗೆ ಹೊರ ರಾಜ್ಯದ ಅಧಿಕಾರಿಗಳನ್ನು ನೇಮಿಸಿರುವುದರಿಂದ ಇಲ್ಲಿನ ಸ್ಥಳೀಯ ಜನರ ಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ. ಶೀಘ್ರವೇ ಹೊರ ರಾಜ್ಯದ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದು, ಕನ್ನಡದ ಅಧಿಕಾರಿಗಳನ್ನು ನೇಮಿಸಬೇಕು. ಸ್ಥಳೀಯ ಕಾರ್ಖಾನೆಗಳಲ್ಲಿ ಹೊರ ರಾಜ್ಯದವರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಲ್ಲಿನ ಜನರನ್ನು ಕಡೆಗಾಣಿಸಲಾಗುತ್ತಿದೆ. ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯ ವೇಳೆ ವಾಟಾಳ್‌ ನಾಗರಾಜ ಅವರು ಸೇರಿದಂತೆ ವಿವಿಧ ಮುಖಂಡರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು.

ಪ್ರತಿಭಟನೆಯ ವೇಳೆ ಕನ್ನಡ ಸಂಘಟನೆಗಳ ಪದಾಧಿಕಾರಿಗಳಾದ ಆರ್‌. ವಿಜಯಕುಮಾರ್‌, ದಯಾನಂದ ಸ್ವಾಮಿ, ಟಿ. ದುರುಗೇಶ, ದುರುಗಪ್ಪ ನಡುವಲಮನಿ, ಯಂಕಪ್ಪನಾಯಕ್‌, ವಿರೂಪಾಕ್ಷಿಗೌಡ ನಾಯಕ್‌, ದೇವೇಂದ್ರಪ್ಪ ನಾಡದಾಳ, ಬಸವನಗೌಡ ಪೊಪಾ, ವಿಶ್ವನಾಥ ನಾಯಕ್‌, ಹನುಮೇಶ ಬೆಣಕಲ್ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next