Advertisement

ಬಾಕಿ ವೇತನ ಪಾವತಿಗೆ ಒತ್ತಾಯ

05:09 PM Sep 22, 2020 | Suhan S |

ಗದಗ: ಬಾಕಿವೇತನ ಪಾವತಿಗಾಗಿ ಇಎಫ್‌ ಎಂಎಸ್‌ಗೆ ಸೇರದ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಬೇಕು ಹಾಗೂ ವಿವಿಧ ಹುದ್ದೆಗಳಲ್ಲಿರುವ ನೌಕರರಿಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘ(ಸಿಐಟಿಯು ಸಂಯೋಜಿತ)ದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.

Advertisement

ಈ ಕುರಿತು ಜಿಪಂ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರು ಸ್ವಚ್ಛತೆ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್‌, ಸೀಲ್‌ ಡೌನ್‌ ಮುಂತಾದ ಕೆಲಸಗಳಲ್ಲಿ ವಿಶೇಷವಾಗಿ ಕ್ವಾರಂಟೈನ್‌ ಕ್ಯಾಂಪ್‌ಗ್ಳಲ್ಲಿ ಗ್ರಾಮ ಪಂಚಾಯತ್‌ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಪಂಚಾಯತ್‌ ಸಿಬ್ಬಂದಿಗೆ 2017, 2018, 2019 ಹಾಗೂ 2020ರಲ್ಲಿಯೂ ಸಂಬಳ ಬಾಕಿ ಉಳಿದಿದೆ. ಪಂಚಾಯತ್‌ ಪಿಡಿಒಗಳು ಸರಕಾರ ನಿಗದಿ  ಪಡಿಸಿದ ಕನಿಷ್ಟ ವೇತನ ಜಾರಿ ಮಾಡದೇ, ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಉಳಿದ ವೇತನವನ್ನು ತೆರಿಗೆ ಸಂಗ್ರಹದಲ್ಲಿ 14ನೇ ಹಣಕಾಸು ಯೋಜನೆ, 15ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ಕೊಡಬೇಕೆಂದು ಸರಕಾರ ಆದೇಶ ಹೊರಡಿಸಿರುವುದು ಅವೈಜ್ಞಾನಿಕ. ಈ ಹಿನ್ನೆಲೆಯಲ್ಲಿ ಪಂಪ್‌ ಆಪರೇಟರ್‌ ಗಳಿಗೆ ಅರ್ಧ ಸಂಬಳ ನೀಡಲು ಮುಂದಾದ ಸರಕಾರ ನೌಕರರ ವಿರೋಧಿ ಕ್ರಮ ಕೈಬಿಡಬೇಕು.

ಎಲ್ಲ ಸಿಬ್ಬಂದಿಗಳ ವೇತನಕ್ಕಾಗಿ ಕೊರತೆ ಇರುವ 382 ಕೋಟಿ ರೂ. ಬೇರೆ ಬೇರೆ ಯೋಜನೆಗಳಿಂದ ಹಣ ಕ್ರೋಢೀಕರಿಸಿ, ಬಿಡುಗಡೆ ಮಾಡಬೇಕು. ಕಂಪ್ಯೂಟರ್‌ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಅವರ ಹಿಂದಿನ ಸೇವೆ ಪರಿಗಣಿಸಬೇಕು. ಕರ ವಸೂಲಿಗಾರ ಮತ್ತು ಕಂಪ್ಯೂಟರ್‌ ಆಪರೇಟರ್‌ ಕೋಟಾ ಶೇ. 70ರಿಂದ 100 ರಷ್ಟು ಹೆಚ್ಚಿಸಬೇಕು. ಲೆಕ್ಕ ಸಹಾಯಕ ಕೋಟಾವನ್ನು ಶೇ. 30ರಿಂದ 100ಕ್ಕೆ ಹೆಚ್ಚಿಸಬೇಕು. ಎಲ್ಲಾ ಸಿಬ್ಬಂದಿಗೆ ನಿವೃತ್ತಿ ವೇತನ ಮಂಜೂರು ಮಾಡಬೇಕು. ವೈದ್ಯಕೀಯ ವೆಚ್ಚ, 15 ತಿಂಗಳು ಗ್ರಾಚ್ಯೂಟಿ ಹಣ ಒದಗಿಸಬೇಕು. ಅನುಮೋದನೆ ಆಗದೇ ಉಳಿದ ಸ್ವಚ್ಛತಾಗಾರರಿಗೆ ಹಾಗೂ 1500 ಕಂಪ್ಯೂಟರ್‌ ಆಪರೇಟರಗಳಿಗೆ ಅನುಮೋದನೆ ನೀಡಲು 23-07-2019ರ ಆದೇಶಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು. ಕನಿಷ್ಠ ವೇತನ ಪಡೆಯುವ ಎಲ್ಲರಿಗೂ ಬಿಪಿಎಲ್‌ ಕಾರ್ಡ್‌ ಉಳಿಸಿಕೊಳ್ಳಲು ಆದಾಯ ಮೀತಿ 1.20 ಲಕ್ಷದಿಂದ 2.00 ಲಕ್ಷಕ್ಕೆ ಹೆಚ್ಚಿಸಬೇಕು. ಅದಕ್ಕಾಗಿ ಆಹಾರ ಇಲಾಖೆಗೆ ಪತ್ರ ಬರೆಯಬೇಕು. ಪಂಪ್‌ ಆಪರೇಟರ್‌ದಿಂದ ಬಿಲ್‌ಕಲೆಕ್ಟರ್‌ ಹುದ್ದೆಗೆ ಬಡ್ತಿ ನೀಡಬೇಕು. ಬಿಲ್‌ಕಲೆಕ್ಟರ್‌ದಿಂದ ಕಾರ್ಯದರ್ಶಿ ಗ್ರೇಡ್‌-2, ಲೆಕ್ಕ ಸಹಾಯಕ ಹುದ್ದೆಗೆಳ ಬಡ್ತಿ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘ(ಸಿಐಟಿಯು ಸಂಯೋಜಿತ) ಗದಗ ತಾಲೂಕು ಅಧ್ಯಕ್ಷ ರುದ್ರಗೌಡ ಸಂಕನಗೌಡ, ಕಾರ್ಯದರ್ಶಿ ರುದ್ರಪ್ಪಕಂದಗಲ್ಲ, ಖಜಾಂಚಿ, ನೀಲಮ್ಮ ಭಾರದ್ವಾಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next