Advertisement

ವೇತನ ತಾರತಮ್ಯ ಸರಿಪಡಿಸಲು ಒತ್ತಾಯ

07:37 AM May 25, 2020 | Team Udayavani |

ಹಿರೇಕೆರೂರ: ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುತ್ತಿಗೆ ಆಯುಷ್‌ ವೈದ್ಯರು ಹಾಗೂ ಖಾಸಗಿ ಆಯುಷ್‌ ವೈದ್ಯರು ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ರಾಜ್ಯದ ಆಯುಷ್‌ ವೈದ್ಯರ ವೇತನ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ ಗುತ್ತಿಗೆ ಆಯುಷ್‌ ವೈದ್ಯರು ಶನಿವಾರದಿಂದ ಸಾಮೂಹಿಕ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಆಯುಷ್‌ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವಲ್ಲಿ ಕೂಡ ತಾರತಮ್ಯ ಮಾಡಲಾಗುತ್ತಿದೆ. ಆದ್ದರಿಂದ ಆಯುಷ್‌ ವಿದ್ಯಾರ್ಥಿಗಳು ಕೂಡ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಖಾಸಗಿ ಆಯುಷ್‌ ವೈದ್ಯರು ಅಗತ್ಯ ಸಂದರ್ಭಗಳಲ್ಲಿ ಅಲೋಪತಿ ಔಷಧಗಳನ್ನು ಬಳಸಲು ದೇಶದ 11 ರಾಜ್ಯಗಳಲ್ಲಿ ಅನುಮತಿ ನೀಡಿದ್ದು, ಅದರಂತೆ ರಾಜ್ಯದಲ್ಲಿಯೂ ನೀಡಬೇಕು ಎಂದು ವೈದ್ಯರು ಮನವಿ ಮಾಡಿದರು.

ಆಯುಷ್‌ ವೈದ್ಯರಾದ ಡಾ| ವಿವೇಕಾನಂದ ಪಟ್ಟಣಶೆಟ್ಟಿ, ಡಾ|ರಾಕೇಶ ಶ್ರೀಹರಿ, ಡಾ| ಬಸವರಾಜ ಕೆಂಗೊಂಡ, ಡಾ| ಮಂಗಳಗೌರಿ ಕಲಾಲ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next