Advertisement

ಮದ್ಯದಂಗಡಿ ತೆರೆಯದಂತೆ ಡಿಸಿಗೆ ಒತ್ತಾಯ

03:23 PM May 20, 2019 | Team Udayavani |

ಹಾನಗಲ್ಲ: ಹೇರೂರು ಗ್ರಾಮದಲ್ಲಿ ಎಂಎಸ್‌ಐಎಲ್ ಸ್ವಾಮ್ಯದ ಮದ್ಯದಂಗಡಿಯೊಂದನ್ನು ತೆರೆಯಲು ವಿರೋಧ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ತೀವ್ರ ಪ್ರತಿಭಟನೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರಿಗೆ ಮನವಿ ನೀಡಿ ಇಲ್ಲಿ ಮದ್ಯದಂಗಡಿಗೆ ಅನುಮತಿ ನೀಡಕೂಡದು ಎಂದು ಒತ್ತಾಯಿಸಿವೆ.

Advertisement

ಎಂಎಸ್‌ಐಎಲ್ ಸ್ವಾಮ್ಯದ ಮದ್ಯದಂಗಡಿಗೆ ಅಬಕಾರಿ ಇಲಾಖೆ ಪರವಾನಗಿ ನೀಡಲು ಮುಂದಾಗಿದ್ದು, ಸ್ಥಳ ಪರಿಶೀಲನೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡದಂತೆ ಒತ್ತಾಯಿಸಿದರು.

ಗ್ರಾಮದಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಜನರೂ ಹೆಚ್ಚಿದ್ದಾರೆ. ಮದ್ಯದಂಗಡಿ ತೆರೆಯುವುದರಿಂದ ದುಡಿದ ಹಣವನ್ನೆಲ್ಲ ಮದ್ಯಕ್ಕೆ ಸುರಿಯುವ ಸಾಧ್ಯತೆಗಳಿದ್ದು, ಕುಟುಂಬ ಕಲಹಕ್ಕೂ ಕಾರಣವಾಗಲಿದೆ. ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ಸನೀಹದಲ್ಲಿ ಗುಬ್ಬಿ ನಂಜುಂಡೇಶ್ವರ ಮಠ, ಅಯ್ಯಪ್ಪಸ್ವಾಮಿ ಸನ್ನಿದಾನವಿದೆ. ಅಲ್ಲದೆ ಯಲ್ಲಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಮದ್ಯದ ಅಂಗಡಿಯಿಂದ ಗ್ರಾಮದ ನೆಮ್ಮದಿಯ ಜೀವನಕ್ಕೆ ಕೊಳ್ಳಿ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಮಹಿಳೆಯರು ಪಟ್ಟು ಹಿಡಿದರು.

ಮದ್ಯದ ಅಂಗಡಿ ಬೇಡ ಎನ್ನುವುದು ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಹ ಸಲ್ಲಿಸಲಾಗಿದೆ. ಆದರೂ, ಮನವಿಗೆ ಕಿವಿಗೊಡದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಒಂದು ವೇಳೆ ನಮ್ಮ ಮನವಿ ಲೆಕ್ಕಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳೆಯರು ಮತ್ತು ಮಕ್ಕಳೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಸಂಘಗಳ ಮುಖಂಡರು ಎಚ್ಚರಿಕೆ ನೀಡಿದರು.

ಹೇರೂರು ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್‌ ಹತ್ತಿಯವರ, ಗ್ರಾಮಸ್ಥರಾದ ರಮೇಶ ಹಾದಿಮನಿ, ಗಿರಿಮಲ್ಲಪ್ಪ ಬಾಗಣ್ಣನವರ, ಗಿರಿಜವ್ವ ಹರಿಜನ, ನಾಗವ್ವ ಹರಿಜನ, ಲಕ್ಷ ್ಮವ್ವ ಹರಿಜನ, ನೀಲವ್ವ ಹರಿಜನ, ರೇಣುಕಾ ತಲವಾರ, ನೀಲಮ್ಮ ಹಾದಿಮನಿ, ಕಮಲವ್ವ ಸುರಳೇಶ್ವರ, ಅಕ್ಕಮ್ಮ ಸುರಳೇಶ್ವರ, ಜಬೀನಾ ನದಾಫ್‌, ಹಿರಾಂಬಿ ನದಾಫ್‌, ಫಾತಿಮಾ ನದಾಫ್‌, ರಜಿಯಾ ನದಾಫ್‌, ಅನಸವ್ವ ಕಾಶಂಬಿ, ಗೌರಮ್ಮ ಬ್ಯಾಡಗಿ, ಬೀರಪ್ಪ ಸುರಳೇಶ್ವರ, ಫಕ್ಕೀರಪ್ಪ ಹರಿಜನ, ಮಹದೇವಪ್ಪ ಹರಿಜನ, ಶಿವಾನಂದಪ್ಪ ಹರಿಜನ, ಮಾರುತಿ ಹರಿಜನ, ಮಾಲತೇಶ ಹರಿಜನ, ಹನುಮಂತಪ್ಪ ಹರಿಜನ, ಬಸವರಾಜ್‌ ವೆಂಕಟಾಪೂರ, ಗುಂಡನಗೌಡ ಪಾಟೀಲ, ಜಗದೀಶ್‌ ಗುಳಪಣ್ಣನವರ, ಮಲ್ಲನಗೌಡ ಹಂಚಿನಮನಿ, ಶಿವನಗೌಡ ಪಾಟೀಲ, ಯಲ್ಲಪ್ಪ ಬಾಗಣ್ಣನವರ, ರಾಮಣ್ಣ ಬಾಗಣ್ಣನವರ ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next