Advertisement

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಒತ್ತಾಯ

03:41 PM Feb 11, 2020 | Suhan S |

ಗದಗ: ಎಪಿಎಂಸಿಗಳಲ್ಲಿ ಕಡಲೆ ಬೆಳೆಗೆ ನಿರೀಕ್ಷಿತ ಬೆಲೆ ದೊರೆಯದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಗದಗ-ಬೆಟಗೇರಿ ರೈತ ಸಂಘ ಹಾಗೂ ಹಿತಾಭಿವೃದ್ಧಿ ಸಂಘ ಒತ್ತಾಯಿಸಿದೆ.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ, ಕಡಲೆ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಆದರೆ, ಈ ಬಾರಿ ಸುರಿದ ಅತಿ ಹೆಚ್ಚು ಮಳೆಯಿಂದಾಗಿ ಕಡಲೆ ಇಳುವರಿ ಕುಂಠಿತವಾಗಿದೆ. ಪ್ರಕೃತಿ ವಿಕೋಪದ ಮಧ್ಯೆಯೂ ಅಲ್ಪಸ್ವಲ್ಪ ಕಡಲೆ ಬೆಳೆದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಕಡಲೆಗೆ ಯೋಗ್ಯ ಬೆಲೆ ಸಿಗದೇ ಪರದಾಡುವಂತಾಗಿದೆ. ತಕ್ಷಣವೇ ರಾಜ್ಯ ಸರಕಾರ ಖರೀದಿ ಕೇಂದ್ರ ಆರಂಭಿಸಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪರಮೇಶ್ವರಪ್ಪ ಜಂತ್ಲಿ, ಎಸ್‌.ಆರ್‌. ನಾಲ್ವತವಾಡಮಠ, ಬಸವರಾಜ, ವಿ.ಎಚ್‌.ದೇಸಾಯಿಗೌಡ್ರ, ಪಕ್ಕಣ್ಣ ಬೇಲೇರಿ, ಬಸವರಾಜ ಜಂತ್ಲಿ, ವಿರೂಪಾಕ್ಷಪ್ಪ ಹೆಬ್ಬಳ್ಳಿ, ವಿರೂಪಾಕ್ಷಪ್ಪ ಅಕ್ಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next