Advertisement

ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ

05:47 PM May 05, 2020 | mahesh |

ತಿಪಟೂರು: ರಾಜ್ಯ ಸರ್ಕಾರ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಹಾಗೂ ಯುವ ಸಂಘಟನೆಗಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಸರ್ಕಾರ ಕೋವಿಡ್ ವೈರಸ್‌ ತಡೆಗಟ್ಟಲು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಿತ್ತು. ಆದರೆ ಮೇ 4ರಿಂದ ಮತ್ತೆ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದೆ. ಕಳೆದ 40 ದಿನಗಳಿಂದ ನಮ್ಮ ಗ್ರಾಮವು ಶಾಂತತೆಯಿಂದ ಕೂಡಿತ್ತು. ಆರೋಗ್ಯದಿಂದ ಜೀವನ ನಡೆಸುತಿದ್ದರು. ಮದ್ಯ ಮಾರಾಟ ಪ್ರಾರಂಭವಾದರೆ ಕುಡುಕರ ಹಾವಳಿ ಹೆಚ್ಚಾಗಿ ಶಾಂತಿ, ನೆಮ್ಮದಿ ಹಾಳಾಗಲಿದ್ದು, ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಮಾರಾಟ ನಡೆಯದಂತೆ ತಡೆಯಬೇಕೆಂದು ಮೇಲಧಿ ಕಾರಿಗಳ ಗಮನಕ್ಕೆ ತರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಮತಾ ಶಿವಕುಮಾರ್‌ ಮಾತನಾಡಿ, ನಮ್ಮ ಗ್ರಾಮವು ಮದ್ಯ ಮುಕ್ತವಾಗಿ ಎಲ್ಲರೂ ಆರೋಗ್ಯದಿಂದಿರುವುದು ಮುಖ್ಯ. ಇಷ್ಟು ದಿನ ಮಹಿಳೆಯರು ಮತ್ತು ಮಕ್ಕಳು ನೆಮ್ಮದಿ ಜೀವನ ನಡೆಸುತ್ತಿದ್ದರು. ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರೇ ಮನವಿ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು
ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮುನಿಯಪ್ಪ, ಸದಸ್ಯ ಚಂದ್ರಶೇಖರ್‌, ಗ್ರಾಮ ಪಂಚಾಯ್ತಿ ಪಿಡಿಒ ರೂಪಸೌದಿ, ಸಂಘಟನೆಯ ಮುಖ್ಯಸ್ಥ ಶಶಿನಾಯಕ್‌,
ಚಿರಂಜೀವಿ, ದಯಾನಂದ್‌, ನಾಗರಾಜು, ರವಿ, ನವೀನ್‌, ಪೃಥ್ವಿ, ಅಶೋಕ್‌, ಹೇಮಂತ್‌, ಗೋಪಾಲ್‌ ಸೇರಿದಂತೆ ಇತರೆ ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next