Advertisement

ಅಶಾಂತಿ ಸೃಷ್ಟಿಸುತ್ತಿರುವ ಮತಾಂಧರ ವಿರುದ್ಧ ಕ್ರಮಕ್ಕೆ ಒತ್ತಾಯ

03:00 PM May 02, 2022 | Niyatha Bhat |

ಶಿವಮೊಗ್ಗ: ನಗರದಲ್ಲಿ ಅಶಾಂತಿ ಹುಟ್ಟಿಸುವ ಮತಾಂಧ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಶಿವಮೊಗ್ಗ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಆದರೆ, ಕಳೆದ ಮೂರು ತಿಂಗಳಿಂದ ಪ್ರಶಾಂತವಾಗಿದ್ದ ನಗರದಲ್ಲಿ ಅನ್ಯಕೋಮಿನ ಕೆಲವು ವ್ಯಕ್ತಿಗಳು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹಿಂದೂ ಸಂಘಟನೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿವೆ. ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಮಂಜುನಾಥ ಬಡಾವಣೆಯ ರಾಹುಲ್‌ ಮತ್ತು ಸಚಿನ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಂದೂ ಹರ್ಷನನ್ನು ಹತ್ಯೆ ಮಾಡಲಾಗಿದೆ. ಅನುಪಿನ ಕಟ್ಟೆ ಬಳಿ ಇಬ್ಬರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಮಂಜುನಾಥ ಬಡಾವಣೆ ನಿವಾಸಿ ವೆಂಕಟೇಶ್‌ ಮೇಲೆ ಹಲ್ಲೆ ನಡೆದಿದೆ. ಗೋಪಾಲಗೌಡ ಬಡಾವಣೆಯಲ್ಲಿ ನಾಗರಾಜ್‌ ಎಂಬುವವರ ಮೇಲೆ, ಭಜರಂಗದಳದ ಜಿತೇಂದ್ರ ಅವರ ಮೇಲೆ ಹಲ್ಲೆ ಮಾಡಿ ಧಮಕಿ ಹಾಕಲಾಗಿದೆ. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರ ಸಂತೋಷ್‌, ಹೊನ್ನಾಳಿ ರಸ್ತೆಯ ಪವನ್‌ ಕುಮಾರ್‌, ಭಜರಂಗದಳ ಕಾರ್ಯಕರ್ತ ಭರತ್‌ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಎಂಕೆಕೆ ರಸ್ತೆಯ ಅಕ್ಷಯ್‌ ಜೋಯ್ಸ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗಳಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರಲ್ಲಿ ಅಶಾಂತಿ ಹುಟ್ಟಿಸುವ ಭಯದ ವಾತಾವರಣ ಸೃಷ್ಟಿಸಿರುವ ನೆಮ್ಮದಿಗೆ ಭಂಗ ತಂದಿರುವ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಕೇಸ್‌ ದಾಖಲಿಸಿ ಅವರನ್ನು ಗಡೀಪಾರು ಮಾಡಬೇಕು. ಪೊಲೀಸ್‌ ಕಾವಲು ಹೆಚ್ಚಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಗಾಂಜಾ, ಜೂಜು, ಗುಟ್ಕಾಗಳನ್ನು ಬಂದ್‌ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎನ್‌.ಕೆ. ಜಗದೀಶ್‌, ಪ್ರಮುಖರಾದ ಚನ್ನಬಸಪ್ಪ, ಜ್ಞಾನೇಶ್ವರ್‌, ನಾಗರಾಜ್‌, ದೀನದಯಾಳ್‌, ಶಂಕರ್‌ ನಾಯಕ್‌, ಡಿ. ಮೋಹನ್‌ ರೆಡ್ಡಿ, ಬಳ್ಳೆಕೆರೆ ಸಂತೋಷ್‌, ರಾಹುಲ್‌ ಬಿದರೆ, ಸುರೇಖಾ ಮುರಳೀಧರ್‌, ಪ್ರಭಾ, ರವಿಕುಕಮಾರ್‌, ಕಿರಣ್‌ ಮೊದಲಾದವರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next