ರಾಣಿಬೆನ್ನೂರ: ಸ್ಥಳೀಯ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಅರುಣಕುಮಾರ ಪೂಜಾರ ಅವರ ಹೆಸರನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣೆ ಕುರಿತು ಕಾರ್ಯಕರ್ತರ ಸಭೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ ಹಾಗು ಬಿಜೆಪಿ ಮುಖಂಡರು ಆಗಮಿಸಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಡಾ| ಬಸವರಾಜ ಕೇಲಗಾರ ಅವರ ಅಭಿಮಾನಿಗಳು ಸಭೆ ನಡೆಸಬಾರದು.
2018ರ ಚುನಾವಣೆಯಲ್ಲಿಡಾ| ಬಸವರಾಜ ಕೇಲಗಾರವರು 48ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2013ರ ಚುನಾವಣೆಯಲ್ಲಿ ಅರುಣಕುಮಾರ ಪೂಜಾರ ಕೇವಲ 9 ಸಾವಿರ ಮತಗಳನ್ನು ಪಡೆದಿದ್ದರು. ಅಂತಹ ದುರ್ಬಲ ಅಭ್ಯರ್ಥಿಗೆ ಜಾತಿ ರಾಜಕಾರಣ ಮಾಡಿ ಟಿಕೆಟ್ ನೀಡಿರುವುದು ಎಷ್ಟು ಮಟ್ಟಿಗೆ ಸರಿ? ಅ ಧಿಕ ಮತಗಳನ್ನು ಪಡೆದ ಕೇಲಗಾರವರಿಗೆ ಟಿಕೆಟ್ ನಿರಾಕರಿಸಿರುವುದು
ಸರಿಯಲ್ಲ ಎಂದು ಡಾ| ಬಸವರಾಜ ಕೇಲಗಾರ ಪರ ಜೈಕಾರ ಹಾಕುವ ಮೂಲಕ ಹೈಕಮಾಂಡ್ ನಿರ್ಧಾರವನ್ನು ವಿರೋ ಧಿಸಿ ಅಭಿಮಾನಿಗಳುಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಕಾರ್ಯಾಲಯದ ಒಳಗಡೆ ಸಭೆ ಆರಂಭವಾಗುತ್ತಿದ್ದಂತೆ ಡಾ| ಅಭಿಮಾನಿಗಳು ಒಳಗಡೆ ನುಗ್ಗಿ ಗಲಾಟೆ, ಗದ್ದಲ ಮಾಡಿ ಸಭೆ ನಡೆಯದಂತೆ ತಡೆದರು. ಸುಮಾರ 2 ಗಂಟೆಗಳ ಕಾಲ ಸಭೆ ನಡೆಸಲು ಬಿಡಲಿಲ್ಲ, ಇದನ್ನೆಲ್ಲ ಶಾಂತ ಚಿತ್ತದಿಂದ ಆಲಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ, ವ್ಯಕ್ತಿಗಿಂತ ಪಕ್ಷ ದೊಡ್ಡದು ನಾವು ನೀವು ಸೇರಿ ಪಕ್ಷ ಕಟ್ಟೋಣ, ನಿಮ್ಮ ಭಾವನೆನಮಗೆ ಅರ್ಥವಾಗಿದೆ. ನಿಮ್ಮ ಅಹವಾಲನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅವರ ಅಂತಿಮ ನಿರ್ಧಾರವನ್ನು ಎಲ್ಲರೂ ಗೌರವಿಸಿ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರೂ ಹೋರಬೇಕಾಗಿದೆ. ಈಗ ಸಭೆ ನಡೆಯಲಿ ಎಂದು ಅವರಲ್ಲಿ ಮನವಿ ಮಾಡಿದಾಗ ಪ್ರತಿಭಟನೆ ಹಿಂಪಡೆದರು. ನಂತರ ಸಭೆ ನಡೆಸಲಾಯಿತು.