Advertisement

ಸೇತುವೆಗೆ ನೇರ ರಸ್ತೆ ಕಲ್ಪಿಸಲು ಒತ್ತಾಯ

05:44 PM Feb 26, 2022 | Shwetha M |

ತಾಳಿಕೋಟೆ: ಪಟ್ಟಣದಿಂದ ಹಡಗಿನಾಳ ಗ್ರಾಮದ ಮಾರ್ಗವಾಗಿ ತೆರಳುವ ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವ ಡೋಣಿ ನದಿಗೆ ಮೇಲ್ಮಟ್ಟದ ಸೇತುವೆ ನಿರ್ಮಾಣಗೊಂಡಿದ್ದು ಸಂತಸಕರ. ಆದರೂ ಕೂಡಾ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಂಕು ಡೊಂಕು ನಿರ್ಮಿಸಲಾಗುತ್ತಿದ್ದು ಸದರಿ ಸೇತುವೆಗೆ ನೇರ ರಸ್ತೆಯನ್ನು ಕಲ್ಪಿಸಿಕೊಡಬೇಕೆಂದು ಹಡಗಿನಾಳ, ಹರನಾಳ, ಕಲ್ಲದೇವನಹಳ್ಳಿ ಮತ್ತು ಮೂಕಿಹಾಳ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Advertisement

ಸೇತುವೆ ಕಾಮಗಾರಿಯ ಟೆಂಡರ್‌ ಡಿಪಿಆರ್‌ನಲ್ಲಿ ಸೇತುವೆಗೆ ನೇರ ರಸ್ತೆಯನ್ನು ಗುರುತಿಸಿದರೂ ಕೂಡಾ ಗುತ್ತಿಗೆದಾರರು ಅಂಕು ಡೊಂಕು ರಸ್ತೆಯನ್ನು ನಿರ್ಮಿಸುತ್ತಿದ್ದಾರೆ. ಈ ರೀತಿ ಅಂಕು ಡೊಂಕು ರಸ್ತೆ ನಿರ್ಮಿಸುವುದರಿಂದ ಅಪಘಾತ ಸಂಖ್ಯೆಗಳು ಹೆಚ್ಚಾಗುತ್ತದೆ. ಅಲ್ಲದೇ ಯಾವಾಗಲು ಯಾವುದೇ ಸೇತುವೆ ನಿರ್ಮಾಣ ಮಾಡಿದರೂ ಕೂಡಾ ಕನಿಷ್ಠ 100 ಮೀ. ನೇರ ರಸ್ತೆ ನಿರ್ಮಾಣ ಮಾಡಬೇಕೆಂಬ ನಿಯಮವಿದೆ. ಹೀಗಿದ್ದರೂ ಅದನ್ನು ಧಿಕ್ಕರಿಸಿ ಅಂಕು ಡೊಂಕು ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆಗೆ ವಾಹನ ದಟ್ಟನೆ ಹೆಚ್ಚಾಗಿರುವುದರಿಂದ ಬಸ್‌ ನಿಲ್ದಾಣದವರೆಗೆ ನೇರ ರಸ್ತೆ ನಿರ್ಮಿಸುವದು ಅಗತ್ಯವಾಗಿದೆ. ಈ ರಸ್ತೆಗೆ ಹೊಂದಿಕೊಂಡು ಒಂದು ಭಾಗದಲ್ಲಿ ರುದ್ರಭೂಮಿ ಇದೆ. ಇನ್ನೊಂದು ಬದಿ ಎಡ ಭಾಗದಲ್ಲಿ ರಿ.ಸ.ನಂ. 98.00,100.104 ಜಮೀನು ಇದ್ದು ಕಾರಣ ಎರಡೂ ಬದಿಗೂ ಸಂಪರ್ಕ ರಸ್ತೆ (ಸರ್ವಿಸ್‌ ರೋಡ್‌) ನಿರ್ಮಿಸುವುದು ಅಗತ್ಯವಿದೆ. ಕಾರಣ ಅಂಕು ಡೊಂಕು ರಸ್ತೆ ನಿರ್ಮಿಸುತ್ತಿರುವವರ ಮೇಲೆ ಕ್ರಮ ಜರುಗಿಸಿ ಸೇತುವೆಗೆ ಬಸ್‌ ನಿಲ್ದಾಣದವರೆಗೆ ನೇರ ರಸ್ತೆ ನಿರ್ಮಾಣಕ್ಕೆ ಹಾಗೂ ಎರಡೂ ಬದಿಗೆ ಸಂಕರ್ಪ ರಸ್ತೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಖಂಡರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರತನಸಿಂಗ್‌ ಕೊಕಟನೂರ, ಸುರೇಶ ಹಜೇರಿ, ಅರುಣ ದಡೇದ, ರವಿ ಕಟ್ಟಿಮನಿ, ಸುರೇಶ ಅಮರಸಿಂಗ್‌ ಹಜೇರಿ, ಗ್ರಾಮಸ್ಥರಾದ ಚನ್ನಪ್ಪಗೌಡ ದೇಸಾಯಿ, ಕುಮಾರಗೌಡ ದೇಸಾಯಿ, ಬಾಪುಗೌಡ ದೇಸಾಯಿ, ಮಲ್ಲಪ್ಪ ಮಾದರ, ಲಕ್ಷ್ಮಣ ವಾಲೀಕಾರ, ಶಿವಣ್ಣ ಕುಂಬಾರ, ಚಂದ್ರಶೇಖರ ಮಾದರ, ಚನ್ನಪ್ಪ ಕಟ್ಟಿಮನಿ, ಚಿದಾನಂದ ಹರಿಜನ, ಮಹಾದೇವಪ್ಪ ನಡಕೋರ, ಮಲ್ಲಿಕಾರ್ಜುನ, ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next