Advertisement
ಮನೆಯವರು ಒಮ್ಮೊಮ್ಮೆ ನನಗೆ ಕಾಯಿಲೆಯಾದಾಗ ಬರುಹೋಗುವವರಿಗೆ ಕೊಡುವ ಹಾಗೆಯೇ ಮದ್ದು ಕೊಟ್ಟು, ಮು¨ªೆ ಹಾಕಿ, ಎದ್ದು ಓಡಾಡುವ ಹಾಗೆ ಮಾಡಿಬಿಡುತ್ತಿದ್ದರು. ಅವಕಾಶವಿದ್ದಿದ್ದರೆ, ಹೆಣ್ಣುಹುಡುಕಿ ಮದುವೆಯನ್ನೂ ಮಾಡಿಬಿಡುತ್ತಿದ್ದರೇನೋ, ಆಗಲಿಲ್ಲ ಅದೊಂದು ಎಂಬ ಕೊರಗು ನನಗಿದೆ. ನನಗಾದರೂ ಯಾರು ಹೆಣ್ಣುಶುನಕವನ್ನು ಗಂಟುಹಾಕಿ ಗೋಳಾಡಬೇಕಿತ್ತು. ದುಡಿಮೆಯೇ, ದಮ್ಮಡಿಯೇ? ಆದರೂ ನಾನು ಸಂತೋಷವಾಗಿದ್ದೇನೆ ಇವರೆಲ್ಲರ ಸಹವಾಸದಲ್ಲಿ. ನಮ್ಮ ಮನೆಯನ್ನು ಹಾದುಹೋಗುವ ಹೆಣ್ಣುಶುನಕಗಳು ನನ್ನ ಗಂಭೀರತೆಯನ್ನು ವಿಪರೀತ ಮೆಚ್ಚಿರುವವಾದರೂ, ಇಂದು ಕಟ್ಟಿಕೊಂಡು, ನಾಳೆಯೇ ಬಿಟ್ಟುಹೋಗುವ ಹುಂಬ ಮನುಷ್ಯರ ನೆರಳು ಬಡಿಬಡಿದು ನನಗಂತೂ ಒಟ್ಟು ಬಾಳುವ ಕೆಲಸದಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ. ಇದ್ದೇನು ಮಾಡುವುದೆಂಬ ವೈರಾಗ್ಯವೂ ಒಂದಷ್ಟು ಅಂಟಿಕೊಂಡು ಆ ಪಡಿಪಾಡಲು ಯಾಕೆ ಕೇಳುತ್ತೀರಿ?
Related Articles
Advertisement
ನೋವಾದರೂ, ಸಹಿಸಿಕೊಂಡೆ. ಅದಕ್ಕಿಂತ ಹೆಚ್ಚಾಗಿ, ಒಳ್ಳೆಯವರೆಂದು ನಾನು ಭಾವಿಸಿದ್ದ, ಮುದುಕರು, ಮಾಗಿದ ಮನಸ್ಸಿನವರು ಎಂದು ತಿಳಿದಿದ್ದ ಮನುಷ್ಯ ತೆವಲಿಗೆ ಬಲಿಯಾಗಿ, ಆ ಹೆಣ್ಣುಮಗುವಿನ ಮನಸ್ಸನ್ನೇ ಘಾಸಿ ಮಾಡಿದರಲ್ಲ ಎಂಬುದು ನನ್ನನ್ನು ವಿಪರೀತ ಬಾಧಿಸಿಬಿಟ್ಟಿತು. ನನಗೆ ಆ ಘಟನೆಯ ನಂತರ ಒಂದರೆಘಳಿಗೆಯೂ ಅಲ್ಲಿ ನಿಲ್ಲಲು ಆಗಲಿಲ್ಲ. ಪಕ್ಕೆಯ ನೋವನ್ನು ಸಹಿಸಿಕೊಂಡೇ, ಒಂದುಸಿರಿಗೆ ಓಡಿದೆ. ಅಲ್ಲಿ, ಅಂತೂ ದೂರದಲ್ಲಿ ಆಕೆ ಓಡುನಡಿಗೆಯಲ್ಲಿ ಹೋಗುತ್ತಿದ್ದಳು. ಆಕೆಯ ಪಕ್ಕದಲ್ಲಿಯೇ ಹೋಗಿ ವಾಲುತ್ತ ವಾಲುತ್ತ ನಡೆಯತೊಡಗಿದೆ. ದಳದಳನೆ ಕಣ್ಣೀರು ಹಾಕುತ್ತಿದ್ದ ಆಕೆ ನನ್ನನ್ನು ಗಮನಿಸಿದಳು. ಆದರೆ, ನಿಲ್ಲಲಿಲ್ಲ. ಆತ ಮಾಡಿದ್ದು ತಪ್ಪು, ಅದನ್ನು ನಾನೊಪ್ಪುವುದಿಲ್ಲ, ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ ಎನ್ನುವಂತೆ ಕಾಲುಕಾಲಲ್ಲಿ ತೊಡರಾಡಿಕೊಂಡೇ ಆಕೆಗೆ ಅರ್ಥಮಾಡಿಸಿಕೊಡಲು ಪ್ರಯತ್ನಿಸಿದೆ. ಆಕೆಗೆ ಏನು ತಿಳಿಯಿತೋ, ಅಷ್ಟರಲ್ಲಿ ಎದ್ದಿದ್ದ ಮಗು ತನ್ನಮ್ಮನ ಹಿಂಬಾಲತ್ತಿಕೊಂಡು ಬರುತ್ತಿದ್ದ ನನ್ನನ್ನು ನೋಡಿ, ಜ್ವರದಲ್ಲಿಯೂ ಕೇಕೆ ಹಾಕಿ ನಗತೊಡಗಿತು. ತಂದೆಯಂತೆ ಭಾವಿಸಿದ್ದಳೇನೋ, ದುಷ್ಟ ಹಾಗೆ ವರ್ತಿಸಿದ್ದನ್ನು ಆಕೆಗೆ ಜೀರ್ಣಿಸಿಕೊಳ್ಳಲು ಆಗಿರಲಿಲ್ಲ. ಈಗ ಮಗುವಿನ ಮುಖದಲ್ಲಿ ಗೆಲುವು ನೋಡಿ, ನಿಂತಳು. ಕಣ್ಣು ಕೆಂಪಗಾಗಿ ಹೋಗಿದ್ದವು. ಅಷ್ಟರಲ್ಲಿ ಅವರ ಮನೆ ಬಂದಿತ್ತು. ಗೇಟಿನೊಳಕ್ಕೆ ನನ್ನನ್ನು ಕರೆದುಕೊಂಡಳು. ನನಗೆ ಪಕ್ಕೆಯ ನೋವು ಹೆಚ್ಚಾಗುತ್ತಲೇ ಇತ್ತು. ಒಟ್ಟಿನಲ್ಲಿ ಹಿಂದಿನದೇನೆಲ್ಲ ನೆನಪಾಗಿ ನನಗೂ ಕೂಗಾಡಿಕೊಂಡು ಅಳುವಂತಾಯಿತು. ನಾನು ಅತ್ತರೆ ಆಚೀಚಿನವರು ಏನೆಂದು ಭಾವಿಸಿಯಾರು ಎಂದುಕೊಂಡು ನರಳುತ್ತ ಬಾಗಿಲ ಬಳಿಯೇ ಒರಗಿಕೊಂಡೆ.
“ನನಗಿನ್ನು ಆ ಮನೆಯ ಋಣ ತೀರಿತು, ಇಲ್ಲಿಯೇ ತುತ್ತು ಅನ್ನ ಹಾಕಿದರೆ ತಿಂದುಕೊಂಡು ಇದ್ದೇನು, ನೀನು ಆ ದಿಕ್ಕಿಗೆ ತಲೆ ಕೂಡ ಹಾಕಬೇಡ, ಎಂದಾದರೊಂದು ದಿನ ಅವನು ಪಾರ್ಕಿನ ಕಡೆಗೆ ವಾಕು ಬಂದರೆ, ಅವನ ಕಾಲು ಕಚ್ಚಿ ಹುಚ್ಚು ಹಿಡಿದು ಸಾಯುವ ಹಾಗೆ ಮಾಡುತ್ತೇನೆ’ ಎಂದು ನಾನು ಆರ್ತನಾಗಿ ಹೇಳುತ್ತಿದ್ದರೂ ಆಕೆಗೆ ಅರ್ಥವಾಗುವ ಬಗೆ ಹೇಗೆ?
ಆಕೆಯ ಮತ್ತೂಂದು ಮಗುವು ತಂದೆಯೊಡನೆ ಎಲ್ಲಿಯಾದರೂ ಹೋಗಿತ್ತೋ ಏನೋ, ಆಕೆ ನನಗೆ ಅನ್ನಹಾಲು ಬಟ್ಟಲಲ್ಲಿ ಹಾಕಿಟ್ಟು, ಮಗುವನ್ನೂ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮೈದಡವಿ ಹೇಳತೊಡಗಿದಳು, “ನಿನಗೆ ನನ್ನ ಮಾತು ಎಷ್ಟು ಅರ್ಥವಾದೀತೋ ಗೊತ್ತಿಲ್ಲ. ವಿಶ್ವಾಸವೆಂದರೆ ಅಷ್ಟಿಷ್ಟಲ್ಲ ನನಗೆ ಅವರ ಮೇಲೆ. ಕಳೆದ ಹತ್ತು ವರ್ಷಗಳಿಂದ ಎಳ್ಳುಕಾಳು ಮತ್ತೂಂದು ವಿಚಾರ ಮಾಡದ ಹಾಗೆ, ನನ್ನ ಜೀವನದ ಎಲ್ಲ ಸಂಗತಿಗಳನ್ನು ಹಂಚಿಕೊಂಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿಯೇ ತಾಯ್ತಂದೆಯರಿಂದ ದೂರವಾದ ನನಗೆ ಆತನೇ ತಂದೆ ಎಂಬ ದೃಢಭಾವನೆಯಿತ್ತು. ಎಂತಹ ಕೆಟ್ಟ ಕನಸಿನಲ್ಲಿಯೂ ನನಗೆ ವಯಸ್ಸು, ಜ್ಞಾನ, ಹಿರಿತನದಲ್ಲಿ ಅಷ್ಟು ದೊಡ್ಡವರಾದ ಆ ವ್ಯಕ್ತಿ ಹಾಗೆ ಮಾಡುವರೆಂದು ಅನಿಸಿರಲಿಲ್ಲ. ಪುರುಷ ಲೋಕ ಗೊತ್ತಿಲ್ಲದ ಮಡ್ಡಿ, ಮಬ್ಬು, ಮುಗೆœ ನೀನು ಅಂತ ನನ್ನ ಗಂಡ ಅಂದಾಗಲೆಲ್ಲ, ಇಲ್ಲ, ನನಗೂ ಎಲ್ಲ ಅರ್ಥವಾಗುತ್ತದೆ. ಹಾಗೆಲ್ಲ ನನ್ನನ್ನು ಮಡ್ಡಿ ಅನ್ನಬೇಡಿ ಎಂದು ಗಂಡನನ್ನೇ ಬಯ್ದಾಡುತ್ತಿ¨ªೆ. ಇವತ್ತು ಆತ ಹೇಳಿ¨ªೆ ಸರಿಯಾಯಿತಲ್ಲ. ನಾನೇನು ಮಾಡಲಿ. ಒಂದು ಕ್ಷಣಕ್ಕೂ ಹಾಗೆ ಪರಪುರುಷನನ್ನು ಪ್ರಚೋದಿಸುವ ಹಾಗೆ ನಾನು ಇದ್ದವಳಲ್ಲ. ಅನಾರೋಗ್ಯವೆಂದು ಔಷಧಿಗೆ ಹೋದಾಗ, ಒಂದಷ್ಟು ಪುರುಸೊತ್ತು ಇದ್ದರೆ, ತನ್ಮಯಳಾಗಿ ಹಾಡಿ, ಮೆಚ್ಚುಗೆಯನ್ನು ಪಡೆದು, ಮರಳಿ ಬರುವುದಷ್ಟೇ ಗೊತ್ತು. ಹಾಗಾದರೆ, ಹಾಗೆ ನಾನು ಕಣ್ಮುಚ್ಚಿ ಹಾಡುವಾಗಲೆಲ್ಲ ಆತ ನನ್ನನ್ನು ಕಣ್ಣಲ್ಲಿಯೇ ಅದೆಷ್ಟು ಬಾರಿ ತಿಂದಿರಲಿಕ್ಕಿಲ್ಲ ಅಲ್ಲವೇ? ನಾನೆಂಥ ದಡ್ಡಿ’ ಎಂದು ಉಮ್ಮಳಿಸಿ ತಲೆ ಗಟ್ಟಿಸಿಕೊಂಡು ಅಳತೊಡಗಿದಳು.
ನನಗೆ ಅವನ ಮೇಲೆ ಸಿಟ್ಟು, ಆಕೆಯ ಮೇಲೆ ಕನಿಕರ ಒಮ್ಮೆಲೇ ಉಕ್ಕಿದವು. ತಲೆಯನ್ನು ಆಕೆಯ ಕಾಲಿಗೆ ಸವರಿ ಸವರಿ, “ಇಲ್ಲ, ಅಷ್ಟು ಅಳಬೇಡ. ನಾಲಾಯಕ್ಕು ನರಮನುಷ್ಯ ಆತ. ಅವನಿಗಾಗಿ ಕಣ್ಣೀರು ಹಾಕಬೇಡ. ಅಯೋಗ್ಯರಿಗೆ ಅಳಬಾರದು. ಮನೆಮಂದಿಯೆಲ್ಲ ಯಾಕೆ ಆತನನ್ನು ಸೇರುತ್ತಿರಲಿಲ್ಲ ನನಗೀಗ ಅರ್ಥವಾಗುತ್ತದೆ. ನಾನಿನ್ನು ನಿನ್ನೊಡನೆಯೇ ಇರುತ್ತೇನೆ. ಕಾಯುತ್ತೇನೆ’ ಎಂದು ಪರಿಪರಿಯಾಗಿ ಬೇಡಿಕೊಂಡೆ. ಮತ್ತೆಮತ್ತೆ ನನ್ನ ತಲೆಯನ್ನು ಸವರಿಯೇ ಸವರಿದಳು. ಮೂಕಪ್ರಾಣಿ ನಿನಗಾದರೂ ನನ್ನ ನೋವು ಅರ್ಥವಾಯಿತಲ್ಲ ಎಂದು ಸಮಾಧಾನದಿಂದ ಹೇಳಿ, ಕಣ್ಣೊರೆಸಿಕೊಂಡಳು.
ನಾನು, ಹಾಕಿದ ಅನ್ನವನ್ನು ತಿಂದು ಜೀವಿಸುವ ಯಃಕಶ್ಚಿತ ನಾಯಿಯಷ್ಟೇ. ನನಗೆ ಅರ್ಥವಾದ ಆ ಹೆಣ್ಣುಜೀವದ ನೋವು ಆ ಮುಪ್ಪಾನುಮುಪ್ಪ ಮುದುಕನಿಗೆ ತಿಳಿಯದೇ ಹೋಯಿತಲ್ಲ ಎಂದು ಅನಿಸಿ, ಹಲ್ಲುಹಲ್ಲು ಕಡಿದೆ. ದೇಹದ ಹಸಿವು ಅಷ್ಟು ಕೆಟ್ಟದೇ? ಅನಿಸಿಬಿಟ್ಟಿತು. ಮನುಷ್ಯರ ನಡುವೆ ಇದ್ದುಕೊಂಡು ನನಗೆ ಹಲವಾರು ಸಲ ಇನ್ನೊಂದು ಜನುಮವೊಂದಿದ್ದರೆ, ಮನುಷ್ಯನಾಗಿ ಹುಟ್ಟಬೇಕು, ಅವರಂತಾಗಬೇಕು ಅನಿಸುತ್ತಿತ್ತು. ಈಗ, ಈ ಹೆಣ್ಣುಕೂಸಿನ ಕಳವಳವ ಕಣ್ಣಾರೆ ನೋಡಿದ ಮೇಲೆ, ನಾನು ನಾನಾಗಿರುವುದೇ ಸಾವಿರ ಪಾಲು ಉತ್ತಮ ಅನಿಸಿತು. ಇಂಗದ ಹಸಿವಿನ ಹಂಬಲದೊಳಗೆ, ನರನೂ ನಾಯನು ಮೀರುವನಲ್ಲ ಎಂದು ಮುಂದಲ ಬದುಕಿನಲ್ಲಿಯಾದರೂ ಒಂದು ಸಾಲು ಗೀಚಬೇಕು ಎಂದು ಕನಸುತ್ತ, ಆಕೆಯ ಪಾದದಡಿ ನೋವುಣ್ಣುತ್ತ ಮಲಗಿಬಿಟ್ಟೆ. ಆಕೆ ತಾಯಾಗಿದ್ದಳು!
ಛಾಯಾ ಭಗವತಿ