Advertisement

Mukesh Ambani ನಿವಾಸದಲ್ಲಿ ಗಣೇಶೋತ್ಸವ ಸಂಭ್ರಮ; ತಾರೆಯರ ದಂಡು ಭಾಗಿ: ಫೋಟೊ ವೈರಲ್

03:59 PM Sep 20, 2023 | Team Udayavani |

ಮುಂಬೈ: ಪ್ರತಿವರ್ಷದಂತೆ ಈ ವರ್ಷವೂ‌ ಉದ್ಯಮಿ ಮುಕೇಶ್ ಅಂಬಾನಿಯ ಮುಂಬೈನ ಆಂಟಿಲಿಯಾ ನಿವಾಸದಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದು, ನೀತಾ ಅಂಬಾನಿ ಕುಟುಂಬದ ಸದಸ್ಯರು ಸೇರಿದಂತೆ ಬಾಲಿವುಡ್ ನ ಐಶ್ವರ್ಯಾ ರೈ ಬಚ್ಚನ್‌, ಕರಣ್‌ ಜೋಹರ್‌, ಒಳಗೊಂಡಂತೆ ಹಲವು ಗಣ್ಯರು ಭಾಗವಹಿಸಿದ್ದರು.‌

Advertisement

ಇದನ್ನೂ ಓದಿ:POCSO; ಮಲಮಗಳ ಕುರಿತು ಅಶ್ಲೀಲ ಪೋಸ್ಟ್: ಮಹಿಳೆ ವಿರುದ್ಧ ಪ್ರಕರಣ ದಾಖಲು

ಬುಧವಾರ (ಸೆಪ್ಟೆಂಬರ್‌ 20) ಬಾಲಿವುಡ್‌ ನ ಜೂಹಿ ಚಾವ್ಲಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಶೇರ್‌ ಮಾಡಿದ್ದು, ಅದರಲ್ಲಿಐಶ್ವರ್ಯಾ ರೈ, ಆರಾಧ್ಯಾ, ಕರಣ್‌ ಜೋಹರ್‌, ಅಮೀರ್‌ ಖಾನ್‌ ಮಕ್ಕಳಾದ ಜುನೈದ್‌, ಐರಾ, ಅರ್ಜುನ್‌ ಕಪೂರ್‌, ಸುನೀಲ್‌ ಶೆಟ್ಟಿ, ನೀತಾ ಅಂಬಾನಿ, ಜಾಕಿ ಶ್ರಾಫ್‌, ಪ್ರಸೂನ್‌ ಜೋಶಿ, ವಿಧು ವಿನೋದ್‌ ಚೋಪ್ರಾ ಮತ್ತು ಮನೀಶ್‌ ಮಲ್ಹೋತ್ರಾ ಅಂಬಾನಿ ನಿವಾಸದ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದರು.

ಜೂಹಿ ಚಾವ್ಲಾ ಶೇರ್‌ ಮಾಡಿರುವ ಮತ್ತೊಂದು ಪೋಸ್ಟ್‌ ನಲ್ಲಿ, ಕಿಯಾರಾ ಅಡ್ವಾಣಿ, ಸಿದ್ಧಾರ್ಥ ಮಲ್ಹೋತ್ರಾ, ರಾಧಿಕಾ ಮರ್ಚೆಂಟ್‌, ಅನಿಲ್‌ ಕಪೂರ್‌, ರವೀನಾ ಟಂಡನ್‌, ಮಾಧುರಿ ದೀಕ್ಷಿತ್‌, ಭಾಗ್ಯಶ್ರೀ, ಫರಾ ಖಾನ್‌ , ಶಾರುಖ್‌ ಖಾನ್‌, ಗೌರಿ, ಸುಹಾನಾ, ಅಬ್‌ ರಾಮ್‌, ಸಲ್ಮಾನ್‌ ಖಾನ್‌, ರಣ್ವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಅಲಿಯಾ ಭಟ್‌, ಅಯಾನ್‌ ಮುಖರ್ಜಿ, ನಯನತಾರಾ, ವಿಘ್ನೇಶ್‌ ಶಿವನ್‌, ನವ್ಯಾ ನವೇಲಿ ನಂದಾ ಸೇರಿದಂತೆ ಗಣ್ಯಾತೀಗಣ್ಯರು ಅಂಬಾನಿ ನಿವಾಸದ ಗಣೇಶೋತ್ಸವದಲ್ಲಿ  ಪಾಲ್ಗೊಂಡಿದ್ದರು.

Advertisement

ಗಣೇಶೋತ್ಸವದಲ್ಲಿ ಸೆಲೆಬ್ರಿಟಿಗಳು ಸಾಂಪ್ರದಾಯಿಕ ಬಟ್ಟೆ ಧರಿಸಿದ್ದು, ಅಂಬಾನಿ ನಿವಾಸದಲ್ಲಿ ನಡೆದ ಗಣೇಶೋತ್ಸವ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ವಿಶೇಷ ಪೂಜೆಯ ನಂತರ ಔತಣಕೂಟ ಏರ್ಪಡಿಸಲಾಗಿತ್ತು. ಇದೀಗ ಅಂಬಾನಿ ನಿವಾಸದಲ್ಲಿನ ಗಣೇಶೋತ್ಸವದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next