Advertisement
ಕಂಕನಾಡಿ ಕರಾವಳಿ ಸರ್ಕಲ್‌ನಿಂದ ಸ್ಟೇಟ್‌ಬ್ಯಾಂಕ್‌ವರೆಗೆ ಕೇಬಲ್ ಅಳವಡಿಕೆ ಪೂರ್ಣಗೊಂಡಿದೆ. ಅಲ್ಲಲ್ಲಿ ಇಂಟರ್‌ಲಾಕ್ ಅಳವಡಿಕೆ ಹಾಗೂ ಅಪೂರ್ಣವಾಗಿರುವ ಸಣ್ಣ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಸೂಚಿಸಿದರು.
ಉರ್ವ ಮಾರ್ಕೆಟ್‌ನಲ್ಲಿ 33 ಕೆವಿ ವಿದ್ಯುತ್ ಸೆಂಟರ್‌ಗೆ ಸ್ಥಳ ಬಿಟ್ಟು ಕೊಡಬೇಕು ಹಾಗೂ ನೆಹರೂ ಮೈದಾನದಲ್ಲಿಯೂ ಸ್ಥಳಾವಕಾಶ ಒದಗಿಸಬೇಕು. ಈ ನಿಟ್ಟಿನಲ್ಲಿ ಶೀಘ್ರ ಗಮನ ಹರಿಸಬೇಕು ಹಾಗೂ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ದಾರಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಮೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಂಜಪ್ಪ, ಸುನೀಲ್ ಮೊಂತೇರೊ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಮೋಹನ್ ಮೆಂಡನ್, ದುರ್ಗಾ ಪ್ರಸಾದ್, ಕಮಲಾಕ್ಷ ಕುಂದರ್, ವಿಜಯ ಲಕ್ಷ್ಮೀ, ಎಲಿಜಬೆತ್ ಹಾಗೂ ಮೆಸ್ಕಾಂ ಅಧಿಕಾರಿಗಳು, ಮೊದಲಾದವರು ಉಪಸ್ಥಿತರಿದ್ದರು.