ಬೆಂಗಳೂರು: ಅನಧಿಕೃತವಾಗಿ ರಾಜಕಾಲುವೆ ಸೇರುತ್ತಿರುವ ತ್ಯಾಜ್ಯವನ್ನು ಶೀಘ್ರ ತೆರವುಗೊಳಿಸಲು ಕಾಲುವೆಗಳಲ್ಲಿ ಟ್ರ್ಯಾಶ್ ಬ್ಯಾರಿಯರ್ (ತೇಲುವ ಕಸ ತಡೆಯುವ ಅಲ್ಯೂಮಿನಿಯಂ ಬಲೆ) ಅಳವಡಿಕೆ ಹಾಗೂ ಹೂಳು ಸಂಗ್ರಹ ತೊಟ್ಟಿ ನಿರ್ಮಾಣಕ್ಕೆ ಪಾಲಿಕೆ ನಿರ್ಧರಿಸಿದೆ.
ಭಾರೀ ಪ್ರಮಾಣದಲ್ಲಿ ರಾಜ ಕಾಲುವೆ ದಸೇರುವ ಪ್ಲಾಸ್ಟಿಕ್, ಥರ್ಮಾಕೋಲ್ ತ್ಯಾಜ್ಯವನ್ನು ಟ್ರ್ಯಾಶ್ ಬ್ಯಾರಿಯರ್ ತಡೆಯು ತ್ತದೆ. ಅದೇ ರೀತಿ ನೀರಿನಲ್ಲಿ ಮುಳುಗುವ ತ್ಯಾಜ್ಯವನ್ನು ಕಾಂಕ್ರಿಟ್ ತೊಟ್ಟಿಗಳು ಶೇಖರಣೆ ಮಾಡಲಿದ್ದು, ಪಾಲಿಕೆ ಅದನ್ನು ವಿಲೇವಾರಿ ಮಾಡತ್ತದೆ.
ಪ್ರಾಯೋಗಿಕವಾಗಿ ಅಗರ ಕೆರೆ, ಸಿಲ್ಕ್ಬೋರ್ಡ್ ಜಂಕ್ಷನ್, ದೊಮ್ಮಲೂರು ಬಳಿ ಅಳವಡಿಸಿ ರುವ ಟ್ರ್ಯಾಶ್ ಗೇಟ್‌ಗಳಿಂದ ನೀರು ಸರಾಗವಾಗಿ ಹರಿಯು ತ್ತಿದೆ. ಆ ಹಿನ್ನೆಲೆಯಲ್ಲಿ ಉಳಿದ ಕಾಲುವೆಗಳಲ್ಲೂ ಟ್ರ್ಯಾಶ್ ಗೇಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ.
ಹೂಳು ಸಂಗ್ರಹ ತೊಟ್ಟಿ: ಆನೇಪಾಳ್ಯ, ದೊಮ್ಮಲೂರು ಬಳಿ ಹೂಳು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೊಟ್ಟಿಗಳು ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ ಹಾಗೂ ಒಂದು ಮೀಟರ್ ಆಳ ಇರಲಿದ್ದು, ಕಾಲುವೆಗೆ ಅಡ್ಡಲಾಗಿ ಸಾಲು ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. ಆ ತೊಟ್ಟಿಗಳಲ್ಲಿ ಶೇಖರಣೆಯಾಗುವ ಹೂಳು ಹಾಗೂ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಸುಲಭವಾಗಿ ತೆರವುಗೊಳಿಸಲಿದ್ದಾರೆ.
Advertisement
ರಾಜಕಾಲುವೆಗಳಲ್ಲಿ ಭಾರೀ ಪ್ರಮಾಣದಲ್ಲಿ ಘನತ್ಯಾಜ್ಯ, ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜಕಾಲುವೆ ಸೇರುತ್ತಿರುವ ತೇಲುವ ಹಾಗೂ ಮುಳುಗುವ ತ್ಯಾಜ್ಯ ವಿಲೇವಾರಿಗೆ ಈ ವಿನೂತನ ಕ್ರಮಗಳಿಗೆ ಪಾಲಿಕೆ ಕೈಹಾಕಿದೆ.
Related Articles
Advertisement
ಟ್ರ್ಯಾಶ್ ಬ್ಯಾರಿಯರ್ ಎಂದರೇನು?: ಟ್ರ್ಯಾಶ್ ಬ್ಯಾರಿಯರ್ ವ್ಯವಸ್ಥೆ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡ ಆವ್ಯವಸ್ಥೇ ಅಳವಡಿಕೆಗೆ ಚಿಂತನೆ ನಡೆಸಿದೆ. ರಾಜಕಾಲುವೆಯ ನಿಗದಿತ ಸ್ಥಳದಲ್ಲಿ ಟ್ರ್ಯಾಶ್ ಬ್ಯಾರಿಯರ್‌ಗಳನ್ನು ಅಳವಡಿಸಲಾಗುತ್ತದೆ. ನೀರಿನಲ್ಲಿ ತೇಲಿಬರುವ ತ್ಯಾಜ್ಯವನ್ನು ಬ್ಯಾರಿಯರ್‌ಗಳು ತಡೆಯುತ್ತವೆ. ಹೀಗೆ ಒಂದು ಕಡೆ ಸಂಗ್ರಹವಾದ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಎರಡು ದಿನಕ್ಕೊಮ್ಮೆ ತೆರವುಗೊಳಿಸುತ್ತಾರೆ.