Advertisement
ಪಟ್ಟಣದ ಅಂಬೇಡ್ಕರ ಭವನದಲ್ಲಿ 70ನೇ ಸ್ವಾತಂತ್ರ್ಯೋತ್ಸ ವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಹಾರದ ಹಕ್ಕು ವಿಷಯ ಕುರಿತು ಅವರು ಮಾತನಾಡಿದರು. ವಿಶ್ವದಲ್ಲಿಯೇ ಅತಿ ಹೆಚ್ಚು ಗೋಮಾಂಸ ರಪು ಆಗುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನದಲ್ಲಿದೆ. ಗೋಮಾಂಸ ಸೇವನೆ ಹಿಂದೂ ಧರ್ಮಕ್ಕೆ ವಿರೋಧ ಎಂಬ ಹಿಂದೂ ಧರ್ಮದ ಸಿದ್ಧಾಂತ ಕರು ಹಾಗೂ ಹಿಂಬಾಲಕರು, ಗೋಮಾಂಸ ರಫ್ತುನ್ನು ಏಕೆ ತಡೆಯಬಾರದು ಎಂದು ಪ್ರಶ್ನಿಸಿದರು. ಗೋಮಾಂಸ ರಫ್ತು ಮಾಡುವ ದಂಧೆ ಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿ ಯನ್ ಹಾಗೂ ದಲಿ ತ ನಾಗಲಿ ಇಲ್ಲ. ಶೇ.95ರಷ್ಟು ಮೇಲ್ವ ರ್ಗದ ಜನರೇ ಗೋಮಾಂಸ ರಫ್ತುನಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಾಮಾಣಿಕರಾದರೇ ಕೂಡಲೇ ಗೋಮಾಂಸ ರಫ್ತಾಗುವುದನ್ನು ತಡೆಯಲಿ ಎಂದುಹೇಳಿದರು. ಹಿಂದೂತ್ವದ ರಾಜಕೀಯ ಭಾಗವಾಗಿ ಗೋವು ರಾಜಕಾರಣ ನಡೆಯುತ್ತಿದೆ. ಬಲವಂತವಾಗಿ ಹಿಂದೂತ್ವದ ರಾಜಕೀಯ ಭಾಗವಾಗಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ದೇಶದ ಮೇಲೆ ಹೇರಲು ಅಣಿಯಾಗಿರುವುದು ದೇಶದ ಬಹು ದೊಡ್ಡ ಕಂಟಕ ವಾ ಗಿದೆ. ಇದನ್ನು ವಿಫಲಗೊಳಿಸಲು ರಾಜಕೀಯ ಪಕ್ಷಗಳು, ಒಗ್ಗೂ ಡ ಬೇಕು ಎಂದರು. ಮಾಜಿ ಶಾಸಕ ಶ್ರೀರಾಮರೆಡ್ಡಿ ವಿಷಯ ಮಂಡಿ ಸಿ ಮಾತ ನಾ ಡಿ ದರು. ಡಿಎಚ್‌ಎಸ್ ಸಂಚಾಲಕ ಎಂ.ಜಂಬಯ್ಯ ನಾಯಕ, ಯುಬಸವರಾಜ, ಗೋಪಾಲ ಕೃಷ್ಣ ಅರಳಿ ಹಳ್ಳಿ, ಜಿ.ತಿಪ್ಪಣ್ಣ, ಡಾ| ಮಲ್ಲಿಕಾರ್ಜುನ ಮಾನ್ಪಡೆ ವೇದಿಕೆ ಮೇಲಿದ್ದರು.
ವೀರಭದ್ರ ಚೆನ್ನಮಲ್ಲಸ್ವಾಮಿಜಿ, ನಿಡುಮಾಮಿಡಿ ಸಂಸ್ಥಾನ ಮಠ