ಹಳದಿ ಬಣ್ಣದ ಅಂಟುಹಾಳೆಗಳನ್ನು “ಮ್ಯಾಜಿಕ್ ಸ್ಟಿಕ್ಕರ್’ ಎಂದು ಸಹ ಕರೆಯಲಾಗುತ್ತದೆ. ಈ ವಿಶೇಷ ಹಳದಿ ಅಂಟು ಬಲೆಗಳು, ಹಾರುವ ಕೀಟಗಳನ್ನು ಆಕರ್ಷಿಸುತ್ತವೆ. ಹಾಳೆಯ ಮೇಲೆ ಅಂಟು ಸವರಲಾಗಿರುತ್ತದೆ. ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಮತ್ತೆ ಹಾರಲು ಸಾಧ್ಯವಾಗದಂತೆ ಅಲ್ಲಿಯೇ ಅಂಟಿಕೊಳ್ಳುತ್ತವೆ.
ಇವುಗಳ ಬಳಕೆಯಿಂದ ಸಾಕಷ್ಟು ಅನುಕೂಲಗಳಿವೆ. ಆಯಾ ಪರಿಸರದಲ್ಲಿರುವ ಕೀಟ ವೈವಿಧ್ಯತೆ, ಅವುಗಳು ಕಡಿಮೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿವೆಯೋ ಎಂಬ ಅಂಶಗಳನ್ನು ತಿಳಿಯಬಹುದು. ಕೃಷಿಕ್ಷೇತ್ರದ ಕೀಟಗಳನ್ನು ಅಧ್ಯಯನಕ್ಕೂ ಸಹಾಯಕ. ಇದರಿಂದ ಕೀಟ ನಿಯಂತ್ರಣ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು.
ಹಾಳೆಯ ಎರಡೂ ಬದಿಗಳೂ ಕೀಟಗಳನ್ನು ಆಕರ್ಷಿಸುವುದರಿಂದ ಅಧಿಕ ಸಂಖ್ಯೆಯಲ್ಲಿ ಬೆಳೆ ಬಾಧಿಸುವ ಕೀಟಗಳು ನಿಯಂತ್ರಿತವಾಗುತ್ತವೆ. ಹಾಳೆಗಳ ಸುತ್ತಲೂ ತುಸು ಜಾಗ ಬಿಡಲಾಗಿದ್ದು ಕೀಟಗಳ ಮಾಹಿತಿಯನ್ನು ಅಲ್ಲಿ ದಾಖಲಿಸಬಹುದು. ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ,
ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ, ಮಿಡ್ಜಸ್ ಇತ್ಯಾದಿ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ.
ಹೆಚ್ಚಿನ ಮಾಹಿತಿಗೆ: 9900800033
* ಕುಮಾರ ರೈತ