ಮಂಗಳೂರು: ಭಾರ್ಗವಿ ಬಿಲ್ಡರ್ ಮತ್ತು ನಿರ್ಮಾಣ್ ಹೋಮ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೊಟ್ಟಾರ ಚೌಕಿಯ ಮಾಲೆಮಾರ್ ಕ್ರಾಸ್ ಬಳಿ ನಿರ್ಮಾಣಗೊಳ್ಳಲಿರುವ ಹೈ ಲಿವಿಂಗ್ ಲಕ್ಸುರಿ ವಸತಿ ಸಮುಚ್ಚಯ “ಕೈಲಾಶ್ ಅಪಾರ್ಟ್‌ಮೆಂಟ್’ಗೆ ರವಿವಾರ ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್‌ನ ಆಡಳಿತ ನಿರ್ದೇಶಕ ರವೀಂದ್ರ ಪೈ ಶಿಲಾನ್ಯಾಸ ನೆರವೇರಿಸಿದರು.
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಜಿಡಿಪಿ ಬೆಳವಣಿಗೆಗೆ 2ನೇ ಅತೀ ದೊಡ್ಡ ಕೊಡುಗೆ ಈ ಕ್ಷೇತ್ರದ್ದು. ಉದ್ಯೋಗ ಸೃಷ್ಟಿಯಲ್ಲಿ ಕೃಷಿಯ ಅನಂತರದ ಸ್ಥಾನದಲ್ಲಿದೆ. ಅತ್ಯಧಿಕ ವಿದೇಶೀ ವಿನಿಮಯ ತಂದು ಕೊಡುತ್ತದೆ. ಆದ್ದರಿಂದ ಈ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದವರು ಹೇಳಿದರು.
ಪರಿಸರ ಸಂರಕ್ಷಣೆಗೆ ಕರೆ: ಶಾಸಕ ಡಾ| ವೈ. ಭರತ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ ಅವರು ಕೈಲಾಶ್ ಯೋಜನೆಗೆ ಶುಭ ಹಾರೈಸಿದರು. ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಅವರು ಬಿಲ್ಡರ್‌ಗಳು ಅಪಾರ್ಟ್ ಮೆಂಟ್ ಸುತ್ತಮುತ್ತ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕೆಂದು ಸಲಹೆ ಇತ್ತರು.
ಭಾರ್ಗವಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಭಾಸ್ಕರ್ ಗಡಿಯಾರ್ ಸ್ವಾಗತಿಸಿದರು. ನಿರ್ಮಾಣ್ ಹೋಮ್ಸ್ ಪಾಲುದಾರ ಗುರುದತ್ತ ಶೆಣೈ ಯೋಜನೆಯ ಮಾಹಿತಿ ನೀಡಿದರು. ಯೋಜನೆಯ ಮಾಹಿತಿ ಪುಸ್ತಕ ಬಿಡುಗಡೆಯ ಮಾಡಲಾಯಿತು.
ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಗುಣನಾಥ (ನಟ ಅರವಿಂದ ಬೋಳಾರ್) ಅವರಿಗೆ ಸಾಂಕೇತಿಕವಾಗಿ ಈ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದ ಮೊದಲ ಗ್ರಾಹಕ ಎಂಬ ನೆಲೆಯಲ್ಲಿ ಕೀಲಿ ಕೈ ಹಸ್ತಾಂತರಿಸಲಾಯಿತು. ಯೋಜನೆಯ ಕೊ-ಪ್ರಮೋಟರ್ ಹಾಗೂ ಭೂ ಮಾಲಕ ಶ್ರೀವತ್ಸ ಕೊಜಪಾಡಿ ವಂದಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ಭಾರ್ಗವಿ ಗಡಿಯಾರ್, ರಾಮನಾಥ ಗಡಿಯಾರ್, ಮಂಗಲ್, ಮಹೇಶ್ ಶೆಟ್ಟಿ, ಕಂಟ್ರಾಕ್ಟರ್ ಎಂಫಾರ್ ಕನ್‌ಸ್ಟ್ರಕ್ಷನ್ಸ್‌ನ ಫಯಾಜ್ ಕಮಲುದ್ದೀನ್, ಆರ್ಕಿಟೆಕ್ಟ್ ಮೆ|ನಾಯಕ್ ಪೈ ಆ್ಯಂಡ್ ಅಸೋಸಿಯೇಟ್ಸ್‌ನ ಸುರೇಶ್ ಪೈ, ಸ್ಟ್ರಕ್ಚರಲ್ ಎಂಜಿನಿಯರ್ ಬಾಬು ನಾರಾಯಣ್ ಉಪಸ್ಥಿತರಿದ್ದರು.
ಉದ್ಘಾಟನಾ ಆಫರ್: 50 ಲಕ್ಷ ರೂ.ಗಳಿಗೆ 2 ಬಿಎಚ್‌ಕೆ 10 ಮನೆಗಳನ್ನು ನೀಡುವ ಉದ್ಘಾಟನ ಆಫರ್ ಇನ್ನು 3 ದಿನ ಮಾತ್ರ ಇರುತ್ತದೆ ಎಂದು ಗುರುದತ್ತ ಶೆಣೈ ಮಾಹಿತಿ ನೀಡಿದರು.