Advertisement

ನಾಳೆ “ಅನಂತೇಶ’ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

09:22 AM Jan 16, 2020 | Lakshmi GovindaRaj |

ಮಂಗಳೂರು: ಲ್ಯಾಂಡ್‌ಟ್ರೇಡ್ಸ್‌ ಬಿಲ್ಡರ್ ಆ್ಯಂಡ್‌ ಡೆವಲಪರ್ನ ಅತ್ಯಾಧುನಿಕ “ಅನಂತೇಶ’ ವಾಣಿಜ್ಯ ಸಂಕೀರ್ಣಕ್ಕೆ ನಗರದ ಪ್ರಮುಖ ಪ್ರದೇಶವಾದ ರಥಬೀದಿಯಲ್ಲಿ ಜ. 16ರಂದು ಬೆಳಗ್ಗೆ 9.47ಕ್ಕೆ ಶಿಲಾನ್ಯಾಸ ಜರಗಲಿದೆ. ವಿವಿಧ ವಾಣಿಜ್ಯ ಅಗತ್ಯ ಮತ್ತು ಅನುಕೂಲತೆಗಳಿಗೆ ತಕ್ಕಂತೆ ಇಲ್ಲಿ ವಿವಿಧ ಸ್ವರೂಪದ ಸ್ಥಳಾವಕಾಶ ಒದಗಿಸಲಾಗುತ್ತಿದೆ. ಶೋರೂಮ್ಸ್‌, ಶಾಪ್ಸ್‌, ಬೂಟಿಕ್ಸ್‌, ಕಚೇರಿಗಳು, ಕನ್ಸಲ್ಟೆಂಟ್‌ ಚೇಂಬರ್ ಇತ್ಯಾದಿಗಳಿಗೆ ಇಲ್ಲಿ ಉತ್ಕೃಷ್ಟ ಸೌಲಭ್ಯ, ಅನುಕೂಲತೆಗಳಿವೆ.

Advertisement

ಅಗಲವಾದ ಸ್ಟೇರ್‌ವೆಸ್‌ ಮತ್ತು ವಿಶಾಲವಾದ ಸಮಾನ ಪ್ರದೇಶಗಳಿಂದ ಗ್ರಾಹಕರು ಸುಲಭವಾಗಿ ಇಲ್ಲಿನ ಮಳಿಗೆ- ಕಚೇರಿ ಇತ್ಯಾದಿಗಳನ್ನು ಸಂಪರ್ಕಿಸಬಹುದಾಗಿದೆ. ಲ್ಯಾಂಡ್‌ಟ್ರೇಡ್ಸ್‌ ಪ್ರವರ್ತನೆಯ ಈ ಅತ್ಯಾಧುನಿಕ ಯೋಜನೆಯು ಬೇಸ್‌ಮೆಂಟ್‌ ಪಾರ್ಕಿಂಗ್‌, ಎರಡು ಸ್ವಯಂಚಾಲಿತ ಲಿಫ್ಟ್‌ಗಳು, ಬ್ಯಾಕ್‌ಅಪ್‌ ಪವರ್‌ ಜನರೇಟರ್‌, ನಿರಂತರ ನೀರು ಪೂರೈಕೆ, ಶೌಚಾಲಯ ಇತ್ಯಾದಿಗಳನ್ನು ಹೊಂದಿರುತ್ತದೆ. ಮಳೆನೀರು ಕೊಯ್ಲು ಸೌಲಭ್ಯ ಅಳವಡಿಸಲಾಗುತ್ತದೆ. ಸುರಕ್ಷತೆಗೆ ಸಿಸಿ ಟಿವಿ, ಅಗ್ನಿಶಾಮಕ ಸೌಲಭ್ಯಗಳಿರುತ್ತವೆ. ಫ್ಲೋರಿಂಗ್‌, ವಾಲ್‌ ಫಿನಿಶಿಂಗ್‌, ಪ್ಲಂಬಿಂಗ್‌ ಇತ್ಯಾದಿ ನಿರ್ಮಾಣಕ್ಕೆ ಉದ್ಯಮದ ಅತ್ಯುತ್ತಮ ಪರಿಕರಗಳನ್ನು ಬಳಸಲಾಗುತ್ತದೆ.

ಅತ್ಯಾಕರ್ಷಕ ವಿನ್ಯಾಸ: ಅನಂತೇಶ ವಾಣಿಜ್ಯ ಸಂಕೀರ್ಣವು ಅತ್ಯಾಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣ ವಾಗುತ್ತಿದೆ. ನಗರದ ರಥಬೀದಿಯು ಪವಿತ್ರವಾದ ಸಾಂಪ್ರದಾಯಕ ಪರಂಪರೆಯ ಪ್ರದೇಶ. ಇಲ್ಲಿನ ಸುತ್ತಮುತ್ತ ಅನೇಕ ದೇವಾಲಯಗಳಿದ್ದು ವರ್ಷಪೂರ್ತಿ ಉತ್ಸವದ ವಾತಾವರಣವಿರುತ್ತದೆ. ರಥಬೀದಿಗೆ ಭೇಟಿ ನೀಡಲು ಜನತೆ ಸದಾ ಬಯಸುತ್ತಾರೆ. ಆದ್ದರಿಂದ ಈ ಪರಿಸರಕ್ಕೆ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿಮಿಸಲು ನಮಗೆ ಸಂತಸವಾಗುತ್ತಿದೆ ಎನ್ನುತ್ತಾರೆ ಕೆ. ಶ್ರೀನಾಥ್‌ ಹೆಬ್ಬಾರ್‌ ಅವರು. ಹೂವಿನ ಮಾರುಕಟ್ಟೆ ಸಮೀಪ ನಿರ್ಮಾಣ ವಾಗಲಿರುವ ಈ ಸಂಕೀರ್ಣವು ರಥಬೀದಿಯ “ಐಕಾನ್‌’ ಆಗಲಿದೆ. ಆರ್ಕಿಟೆಕ್ನಿಕ್ಸ್‌ನ ಪೀಟರ್‌ ಮಸ್ಕರೇಞಸ್‌ ಅವರು ಇದರ ಆರ್ಕಿಟೆಕ್ಟ್. ಅಂತಾರಾಷ್ಟ್ರೀಯ ಗುಣಮಟ್ಟದ ಎಂಫೇರ್‌ ಕನ್‌ಸ್ಟಕ್ಷನ್ಸ್‌ ಸಂಸ್ಥೆ ನಿರ್ಮಾಣದ ಕಾರ್ಯ ನಡೆಸಲಿದೆ.

ಸೂಚಿತ ಅವಧಿಯೊಳಗೆ ನಿರ್ಮಾಣ: ಲ್ಯಾಂಡ್‌ಟ್ರೇಡ್ಸ್‌ನ ಅತ್ಯಂತ ಪ್ರತಿಷ್ಠಿತವಾದ 32 ಅಂತಸ್ತುಗಳ ಸಾಲಿಟೇರ್‌ ವಸತಿ ಸಮುಚ್ಚಯ ಸೂಚಿತ ಅವಧಿಯೊಳಗೆ ನಿರ್ಮಾಣವಾಗಿದೆ. ಇದು 2-3-4 ಬಿಎಚ್‌ಕೆ ಮತ್ತು 5 ಬಿಎಚ್‌ಕೆ ಡೂಪ್ಲೆಕ್ಸ್‌ಗಳ ಸಹಿತ 143 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಅಂತಾ ರಾಷ್ಟ್ರಿಯ ಮಟ್ಟದ ಮತ್ತು ಶೈಲಿಯ ನಿರ್ಮಾಣ ವಿದೆಯೆಂದು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಲ್ಯಾಂಡ್‌ಟ್ರೇಡ್ಸ್‌ನಿಂದ ದೇರೆಬೈಲ್‌ ಕೊಂಚಾಡಿಯಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಸೌಲಭ್ಯಗಳ ಹ್ಯಾಬಿಟಟ್‌ ವನ್‌ 54 ಎಂಬ 154 ಬಜೆಟ್‌ ಅಪಾರ್ಟ್‌ಮೆಂಟ್‌ಗಳು ನಿರ್ಮಾಣ ಹಂತದಲ್ಲಿವೆ.

ಸುರತ್ಕಲ್‌ ಕಡಲ ಕಿನಾರೆಯಲ್ಲಿ ಎರೆಮಾರ್‌ ಬೇ ಎಂಬ 5.5ರಿಂದ 15 ಸೆಂಟ್ಸ್‌ ನಿವೇಶನಗಳ ಬಡಾವಣೆ ನಿರ್ಮಾಣವಾಗುತ್ತಿದೆ. ಗಾಂಧಿನಗರದಲ್ಲಿ ನಕ್ಷತ್ರ ಎಂಬ ಪ್ರೀಮಿಯಮ್‌ ರೆಸಿಡೆನ್ಸಿಯಲ್‌ ಅಪಾರ್ಟ್‌ ಮೆಂಟ್‌ ನಿರ್ಮಾಣವಾಗಲಿದೆ.ಬಲ್ಮಠದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೈಲ್‌ಸ್ಟೋನ್‌ 25 ಎಂಬ ವಾಣಿಜ್ಯ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗಿದೆ. 1992ರಲ್ಲಿ ಮಂಗಳೂರಿನಲ್ಲಿ ಶ್ರೀನಾಥ್‌ ಹೆಬ್ಬಾರ್‌ ಅವರು ಸ್ಥಾಪಿಸಿದ ಲ್ಯಾಂಡ್‌ಟ್ರೇಡ್ಸ್‌ನ ಸಾಲಿಟೇರ್‌ ಸಹಿತ ಅನೇಕ ಯೋಜನೆಗಳು ಕ್ರಿಸಿಲ್‌ 7 ಸ್ಟಾರ್‌, ಡಿಎ 2, ಕ್ರೆಡಾೖ ಮುಂತಾದ ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಐಎಸ್‌ಒ 9001: 2015 ಮಾನ್ಯತೆಯನ್ನು ಪಡೆದಿದೆ.

Advertisement

ಪೂರಕ ಮಾಹಿತಿ: landtrades.in

Advertisement

Udayavani is now on Telegram. Click here to join our channel and stay updated with the latest news.

Next