Advertisement

ಇಂದು ನೌಕಾಪಡೆಗೆ ವಿಶಾಖಪಟ್ಟಣಂ

12:03 AM Nov 21, 2021 | Team Udayavani |

ದೇಶದ ಮೊದಲ ಗುಪ್ತ ಕ್ಷಿಪಣಿ ನಾಶಕ ಯುದ್ಧನೌಕೆ “ಐಎನ್‌ಎಸ್‌ ವಿಶಾಖ ಪಟ್ಟಣಂ’ ರವಿವಾರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಮ್ಮುಖದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. “ಪ್ರಾಜೆಕ್ಟ್ 15ಬಿ’ಯಡಿ ನಿರ್ಮಾಣ­ವಾದ ಮೊದಲ ನೌಕೆ ಇದಾಗಿದ್ದು, ಮುಂಬಯಿಯ ನೌಕಾ ಹಡಗುಕಟ್ಟೆಯಲ್ಲಿ  ಸೇರ್ಪಡೆ ಸಮಾರಂಭ ನಡೆಯಲಿದೆ.

Advertisement

ಭಾರತದ ಹೆಮ್ಮೆಯ ನೌಕೆಯ ವೈಶಿಷ್ಟ್ಯ :

ಇದು ವಿಶಾಖಪಟ್ಟಣಂ ದರ್ಜೆಯ ಗುಪ್ತ ಕ್ಷಿಪಣಿ ನಾಶಕ ನೌಕೆ. ಇದರ ಸೇರ್ಪಡೆ ಬಳಿಕವೂ ಇನ್ನೂ ಕೆಲವು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಿದ್ದೇವೆ ಎಂದು ಕಮಾಂಡಿಂಗ್‌ ಅಧಿಕಾರಿ ಕ್ಯಾ| ಬೀರೇಂದರ್‌ ಸಿಂಗ್‌ ಬೈನ್ಸ್‌ ಹೇಳಿದ್ದಾರೆ. ಈ ನೌಕೆಯ ನಿರ್ಮಾಣಕ್ಕೆ ಸ್ವದೇಶಿ ಉಕ್ಕು ಬಳಕೆ ಮಾಡಲಾಗಿದೆ. ಈ ಮೂಲಕ ಸುಧಾರಿತ ಸಮರ ನೌಕೆ  ನಿರ್ಮಿಸಬಲ್ಲ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.

  • ಐಎನ್‌ಎಸ್‌ ವಿಶಾಖಪಟ್ಟಣಂ ಉದ್ದ-164 ಮೀ.
  • ಅಂದಾಜು ತೂಕ – 7,500 ಟನ್‌
  • ನೌಕೆಯ ಎಷ್ಟು ಭಾಗಗಳು ಸ್ವದೇಶಿ ನಿರ್ಮಿತ?- 75%
  • ನೌಕೆಯಲ್ಲಿ ಎಷ್ಟು ಸಿಬಂದಿ ಇರಬಹುದು? 312
  • ಸಂಚಾರದ ವೇಗ 55 ಕಿ.ಮೀ.
  • ಹೆಲಿಕಾಪ್ಟರ್‌ಗಳ ಸಂಖ್ಯೆ- 2

ಅಳವಡಿಸಲಾಗಿರುವ ಶಸ್ತ್ರಾಸ್ತ್ರಗಳು :

ಬೆಂಗಳೂರಿನ ಬಿಇಎಲ್‌ ನಿರ್ಮಿತ ಮಧ್ಯಮ ವ್ಯಾಪ್ತಿಯ ನೆಲದಿಂದ ಗಗನಕ್ಕೆ ಚಿಮ್ಮಬಲ್ಲ ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್‌ ಏರೋಸ್ಪೇಸ್‌ನ ಕ್ಷಿಪಣಿಗಳು, ಟಾರ್ಪೆಡೋ ಟ್ಯೂಬ್‌ಗಳು ಮತ್ತು ಲಾಂಚರ್‌ಗಳು, ಬಿಎಚ್‌ಇಎಲ್‌ ನಿರ್ಮಿತ ಗನ್‌ ಮೌಂಟ್‌ಗಳು, ಜಲಾಂತರ್ಗಾಮಿ ನಿಗ್ರಹ ರಾಕೆಟ್‌ಗಳು, ಸೆನ್ಸರ್‌ಗಳು.

Advertisement

ಐಎನ್‌ಎಸ್‌ ವಿಶಾಖಪಟ್ಟಣಂ ಹಾಗೂ 28ರಂದು ಸೇರ್ಪಡೆಗೊಳ್ಳಲಿರುವ ವೇಲಾ ಜಲಾಂತರ್ಗಾಮಿ ನೌಕೆಯು ಭಾರತದ ಸಂಕೀರ್ಣ ಸಮರ ನೌಕೆಗಳ ನಿರ್ಮಾಣ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಇದೊಂದು ಮಹತ್ವದ ಮೈಲುಗಲ್ಲು.-ಕ್ಯಾ| ಬೀರೇಂದರ್‌ ಸಿಂಗ್‌ ಬೈನ್ಸ್‌,  ನೌಕೆಯ ಕಮಾಂಡಿಂಗ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next