Advertisement

ಐಎನ್‌ಎಸ್‌ ವಿಕ್ರಾಂತ್‌ ; ಭಾರತಕ್ಕೆ ದೇಶೀಯ ಯುದ್ಧನೌಕೆಯ ಶಕ್ತಿ

02:36 PM Jan 19, 2022 | Team Udayavani |
ಈ ಸಮರ ನೌಕೆಯನ್ನು 2009ರಲ್ಲಿ ನಿರ್ಮಾಣ ಮಾಡಲು ಆರಂಭಿಸಲಾಯಿತು. ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಇದರ ನಿರ್ಮಾಣ ವೆಚ್ಚ 23 ಸಾವಿರ ಕೋಟಿ ರೂ. ಇದನ್ನು ಸಂಪೂರ್ಣವಾಗಿ ವಿನ್ಯಾಸ ಮಾಡಿದ್ದು ಭಾರತೀಯ ನೌಕಾಪಡೆಯ ನೌಕಾ ವಿನ್ಯಾಸ ಮಹಾನಿರ್ದೇಶನಾಲಯ. ಕೊಚ್ಚಿಯ ಅರ್ಧ ಭಾಗ ಬಳಕೆ ಮಾಡುವ ವಿದ್ಯುತ್‌ ಅನ್ನು ಇದೊಂದೇ ನೌಕೆ ಬಳಕೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಲ್ಲಿರುವ ವಿದ್ಯುತ್‌ ಕೇಬಲ್‌ಗಳ ಅಳತೆ 2,600 ಕಿ.ಮೀ. ಎಂದು ಈ ನೌಕೆಯ ವಿನ್ಯಾಸಕ ಮೇಜರ್‌ ಮನೋಜ್‌ ಕುಮಾರ್‌ ಹೇಳಿದ್ದಾರೆ. ಅಲ್ಲದೆ, ಇದಕ್ಕೆ ಬಳಸಲಾಗಿರುವ ಕಬ್ಬಿಣದಿಂದ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಂಥ ಮೂರನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ....
Now pay only for what you want!
This is Premium Content
Click to unlock
Pay with

ಒಂದು ಕಡೆ ಸದಾ ಕಾಲು ಕೆರೆದುಕೊಂಡು ನಿಲ್ಲುವ ಪಾಕಿಸ್ಥಾನ; ಮತ್ತೂಂದು ಕಡೆ ಮಾತುಕತೆಯ ಬೂಟಾಟಿಕೆ ಜತೆಗೇ ಬೆನ್ನಿಗೆ ಚೂರಿ ಇರಿಯುವ ಚೀನ… ಈ ಎರಡು ದೇಶಗಳನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಸರಿಯಾದ ಶಸ್ತ್ರಾಸ್ತ್ರಗಳೇ ಬೇಕು. ಇಡೀ ಜಗತ್ತಿನಲ್ಲೇ ನಮ್ಮ ಭೂಸೇನೆ ಅತ್ಯಂತ ಬಲಯುತವಾದದ್ದು, ಹಾಗೆಯೇ ವಾಯುಸೇನೆಗೂ ಎಂಥದ್ದೇ ಅಪಾಯ ಬಂದರೂ ಎದುರಿಸುವ ಶಕ್ತಿ ಇದೆ. ಇನ್ನೂ ನೌಕಾ ಸೇನೆ ಕೂಡ ಅಷ್ಟೇ ಬಲವಾಗಿದೆ. ನೌಕಾದಳವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಐಎನ್‌ಎಸ್‌ ವಿಕ್ರಾಂತ್‌ ಅನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.

Advertisement

ಅಗ್ರ ರಾಷ್ಟ್ರಗಳ ಗುಂಪಿಗೆ ಭಾರತ
ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಸಮರ ನೌಕೆಯನ್ನು ನಿರ್ಮಿಸಿಕೊಳ್ಳುವ ಶಕ್ತಿಹೊಂದಿವೆ. ಭಾರತವೂ ಇದುವರೆಗೆ ಬೇರೊಂದು ದೇಶದ ಮೇಲೆ ಅವಲಂಬಿತವಾಗಿತ್ತು. ಈಗ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಸ್ವದೇಶೀಯವಾಗಿಯೇ ನಿರ್ಮಿಸಲಾಗಿದೆ. ಹೀಗಾಗಿ, ಎಲೈಟ್‌ ಗುಂಪಿಗಳ ಸಾಲಿಗೆ ಭಾರತವೂ ಸೇರಿದೆ.

ಆಗಸ್ಟ್‌ನಲ್ಲಿ ನೌಕಾಪಡೆಗೆ ಸೇರ್ಪಡೆ
ಐಎನ್‌ಎಸ್‌ ವಿಕ್ರಾಂತ್‌ ಅನ್ನು ಆಗಸ್ಟ್‌ ವೇಳೆಗೆ ನೌಕಾಪಡೆಗೆ ನೀಡಲಾಗುತ್ತದೆ. ಸೋಮವಾರವಷ್ಟೇ ಐಎನ್‌ಎಸ್‌ ವಿಕ್ರಾಂತ್‌ನ ಮೂರನೇ ಸುತ್ತಿನ ಪ್ರಯೋಗವನ್ನು ಮುಗಿಸಿ ವಾಪಸ್‌ ಬಂದಿದೆ ಎಂದು ನೌಕಾದಳ ಟ್ವಿಟರ್‌ ಮೂಲಕ ಮಾಹಿತಿ ನೀಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಐದು ದಿನಗಳ ಪ್ರಯೋಗ ನಡೆಸಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಎರಡನೇ ಸುತ್ತಿನ 10 ದಿನಗಳ ಕಾಲ ಸಾಗರದಲ್ಲಿದ್ದು, ಯಶಸ್ವಿಯಾಗಿ ಪ್ರಯೋಗ ಮುಗಿಸಿತ್ತು. ಈಗ ಮೂರನೇ ಸುತ್ತಿನ ಪ್ರಯೋಗವೂ ಮುಗಿದಿದೆ.

ಐಎನ್‌ಎಸ್‌ ಗಾತ್ರವೇನು?
262 ಮೀಟರ್‌ ಉದ್ದ, 62 ಮೀಟರ್‌ ಅಗಲವಿರುವ ಈ ವಿಕ್ರಾಂತ್‌ ಎರಡು ಫ‌ುಟ್ಬಾಲ್‌ ಮೈದಾನದಷ್ಟು ದೊಡ್ಡದಿದೆ. 59 ಮೀಟರ್‌ ಎತ್ತರವಿರುವ ಇದರಲ್ಲಿ 14 ಡೆಕ್‌ಗಳಿದ್ದು, 2,300 ಕಂಪಾರ್ಟ್‌ಮೆಂಟ್‌ಗಳಿವೆ. ಇವುಗಳಲ್ಲಿ ಮಹಿಳಾ ಅಧಿಕಾರಿಗಳು ಸೇರಿದಂತೆ 1,700 ಸಿಬ್ಬಂದಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದು 40,000 ಟನ್‌ನಷ್ಟು ಭಾರವಿದ್ದು, ಗಂಟೆಗೆ 50 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.

ವಿಕ್ರಾಂತ್‌ನ ವೈಶಿಷ್ಟ್ಯಗಳು
ಈ ನೌಕೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಆಸ್ಪತ್ರೆಯೇ ಇದೆ. ಇದರಲ್ಲಿ ಎರಡು ಆಪರೇಷನ್‌ ಥಿಯೇಟರ್‌ಗಳೂ ಇವೆ. ಅಲ್ಲದೆ, ಇದರಲ್ಲಿರುವ ಅಡುಗೆ ಮನೆಯಲ್ಲಿ ಏಕಕಾಲದಲ್ಲಿ ಸುಮಾರು 2,000 ಮಂದಿಗೆ ಅಡುಗೆ ಮಾಡಬಹುದು.

Advertisement

ಇದು ಹೇಗೆ ಸ್ವದೇಶಿ?
ಇದರ ವಿನ್ಯಾಸದಿಂದ ಹಿಡಿದು, ಬಳಕೆ ಮಾಡಲಾಗಿರುವ ವಸ್ತುಗಳು ಕೂಡ ಸ್ವದೇಶಿಯಾಗಿವೆ. ಅಂದರೆ, ಶೇ.76ರಷ್ಟು ಸಲಕರಣೆಗಳು ಮತ್ತು 21,500 ಟನ್‌ನಷ್ಟು ವಿಶೇಷ ಗ್ರೇಡ್‌ನ‌ ಕಬ್ಬಿಣವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೆ, ಈ ಮಾದರಿಯ ಕಬ್ಬಿಣವನ್ನು ಇದೇ ಮೊದಲ ಬಾರಿಗೆ ಭಾರತೀಯ ನೌಕಾ ಹಡಗಿನಲ್ಲಿ ಬಳಕೆ ಮಾಡಲಾಗಿದೆ. ನೌಕೆಯ ನಿರ್ಮಾಣಕ್ಕೂ ಮುನ್ನ, 3ಡಿ ತಂತ್ರಜ್ಞಾನದಲ್ಲಿ ಮಾದರಿಯನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ 3ಡಿ ಮಾದರಿ ತಯಾರಿಸಿ ಸಮರ ನೌಕೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

50 ಕಂಪೆನಿಗಳು ಭಾಗಿ
ಭಾರತೀಯ ನೌಕಾ ಪಡೆಯ ಪ್ರಕಾರ, ಈ ಸಮರ ನೌಕೆ ನಿರ್ಮಾಣದಲ್ಲಿ ಸುಮಾರು 50 ಭಾರತೀಯ ಕಂಪೆನಿಗಳು ನೇರವಾಗಿ ಭಾಗಿಯಾಗಿವೆ. ಇದರಿಂದಾಗಿ ಸುಮಾರು 40 ಸಾವಿರ ಸಿಬ್ಬಂದಿ ಪ್ರತ್ಯೇಕ್ಷವಾಗಿ ಅಥವಾ ಪರೋಕ್ಷವಾಗಿ ಇದರಲ್ಲಿ ಕೆಲಸ ಮಾಡಿದ್ದಾರೆ. ಈ ಮೂಲಕ ನಾಲ್ಕರಲ್ಲಿ ಮೂರು ಭಾಗದಷ್ಟು ನಿರ್ಮಾಣ ವೆಚ್ಚವನ್ನು ಭಾರತೀಯ ಆರ್ಥಿಕತೆಗೇ ವಾಪಸ್‌ ನೀಡಿದಂತಾಗಿದೆ ಎಂದಿದೆ.

ಯಾವೆಲ್ಲಾ ಯುದ್ಧ ವಿಮಾನಗಳ ಬಳಕೆ?
ಈ ಸಮರ ನೌಕೆಯಲ್ಲಿ ರಷ್ಯಾ ನಿರ್ಮಿತ ಯುದ್ಧ ವಿಮಾನ ಮಿಗ್‌-29ಕೆ ಫೈಟರ್‌ ಜೆಟ್‌, ಕಮೋವ್‌-31, ಸುಧಾರಿತ ಲಘು ಹೆಲಿಕಾಪ್ಟರ್‌, ಎಂಎಚ್‌ 60ಆರ್‌ ಮಲ್ಟಿರೋಲ್‌ ಹೆಲಿಕಾಪ್ಟರ್‌ ಅನ್ನು ಬಳಕೆ ಮಾಡಬಹುದು.

ಐಎನ್‌ಎಸ್‌ ವಿಕ್ರಾಂತ್‌ ರಚಿಸಿದ್ದು ಹೇಗೆ?
ಈ ಸಮರ ನೌಕೆಯನ್ನು 2009ರಲ್ಲಿ ನಿರ್ಮಾಣ ಮಾಡಲು ಆರಂಭಿಸಲಾಯಿತು. ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಇದರ ನಿರ್ಮಾಣ ವೆಚ್ಚ 23 ಸಾವಿರ ಕೋಟಿ ರೂ. ಇದನ್ನು ಸಂಪೂರ್ಣವಾಗಿ ವಿನ್ಯಾಸ ಮಾಡಿದ್ದು ಭಾರತೀಯ ನೌಕಾಪಡೆಯ ನೌಕಾ ವಿನ್ಯಾಸ ಮಹಾನಿರ್ದೇಶನಾಲಯ. ಕೊಚ್ಚಿಯ ಅರ್ಧ ಭಾಗ ಬಳಕೆ ಮಾಡುವ ವಿದ್ಯುತ್‌ ಅನ್ನು ಇದೊಂದೇ ನೌಕೆ ಬಳಕೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಲ್ಲಿರುವ ವಿದ್ಯುತ್‌ ಕೇಬಲ್‌ಗಳ ಅಳತೆ 2,600 ಕಿ.ಮೀ. ಎಂದು ಈ ನೌಕೆಯ ವಿನ್ಯಾಸಕ ಮೇಜರ್‌ ಮನೋಜ್‌ ಕುಮಾರ್‌ ಹೇಳಿದ್ದಾರೆ. ಅಲ್ಲದೆ, ಇದಕ್ಕೆ ಬಳಸಲಾಗಿರುವ ಕಬ್ಬಿಣದಿಂದ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಂಥ ಮೂರನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ. ಜತೆಗೆ 150 ಕಿ.ಮೀ.ನಷ್ಟು ಪೈಪ್‌ಗಳನ್ನು ಬಳಕೆ ಮಾಡಲಾಗಿದೆ.

ಭಾರತದಲ್ಲಿರುವ ಇತರ ಯುದ್ಧನೌಕೆಗಳು

  1. ಐಎನ್‌ಎಸ್‌ ವಿಕ್ರಮಾದಿತ್ಯ
  2. ಐಎನ್‌ಎಸ್‌ ವಿಕ್ರಾಂತ್‌
  3. ಐಎನ್‌ಎಸ್‌ ಚಕ್ರ
  4. ಐಎನ್‌ಎಸ್‌ ಅರಿಹಂತ್‌
  5. ಐಎನ್‌ಎಸ್‌ ದಿಲ್ಲಿ
  6. ಐಎನ್‌ಎಸ್‌ ಮೈಸೂರು
  7. ಐಎನ್‌1. ಐಎನ್‌ಎಸ್‌ ವಿಕ್ರಮಾದಿತ್ಯ
  8. ಐಎನ್‌ಎಸ್‌ ವಿಕ್ರಾಂತ್‌
  9. ಐಎನ್‌ಎಸ್‌ ಚಕ್ರ
  10. ಐಎನ್‌ಎಸ್‌ ಅರಿಹಂತ್‌
  11. ಐಎನ್‌ಎಸ್‌ ದಿಲ್ಲಿ
  12. ಐಎನ್‌ಎಸ್‌ ಮೈಸೂರು
  13. ಐಎನ್‌ಎಸ್‌ ರಾಣಾ ಎಸ್‌ ರಾಣಾ
Advertisement

Udayavani is now on Telegram. Click here to join our channel and stay updated with the latest news.