Advertisement

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

08:08 PM Oct 15, 2021 | Team Udayavani |

ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗುತ್ತಿರುವ ಯುದ್ಧ ವಿಮಾನ ವಾಹಕ ನೌಕೆಗಾಗಿ (ಐಎಸಿ) ಖರ್ಚಾಗುತ್ತಿರುವ ಹಣ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

Advertisement

“ಐಎಸಿ ವಿಕ್ರಾಂತ್‌ ಎಂಬ ನೌಕೆಯನ್ನು ಶೇ. 76ರಷ್ಟು ದೇಶೀಯವಾಗಿಯೇ ನಿರ್ಮಿಸಲಾಗಿದೆ. ಆದರೆ, ಇದರ ನಿರ್ಮಾಣ ದುಬಾರಿಯಾಗಿದ್ದು, ಇದರ ನಿರ್ಮಾಣ ಅಗತ್ಯವಿತ್ತೇ’ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

ಈ ನೌಕೆಯ ನಿರ್ಮಾಣಕ್ಕೆ ಭಾರತದಲ್ಲೇ ಉತ್ಪಾದನೆಯಾಗಿರುವ ಉಕ್ಕನ್ನು ಬಳಸಲಾಗಿದೆ. 550 ಭಾರತೀಯ ಕಂಪನಿಗಳು, 100 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇದರ ನಿರ್ಮಾಣಕ್ಕೆ ಕೈ ಜೋಡಿಸಿವೆ. ಹಾಗಿರುವಾಗ, ಇವರೆಲ್ಲರ ಪರಿಶ್ರಮವನ್ನು ಹಾಗೂ ಖರ್ಚಾಗಿರುವ ಹಣವನ್ನು ವ್ಯರ್ಥವಾಗಲು ಬಿಡಲಾಗುತ್ತದೆಯೇ ಎಂದು ಅಡ್ಮಿರಲ್‌ ಸಿಂಗ್‌ ಮರುಪ್ರಶ್ನೆ ಹಾಕಿದ್ದಾರೆ.

ನೌಕಾಪಡೆಯಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯ ಎಂಬ ಹಡಗನ್ನು ವಿಮಾನ ವಾಹಕ ನೌಕೆಯಾಗಿ ಬಳಸಲಾಗುತ್ತಿದೆ. ಅದು 40 ವರ್ಷ ಹಳೆಯದ್ದಾಗಿದ್ದು, ಸದ್ಯಕ್ಕೆ ಅದು ರಿಪೇರಿಯಲ್ಲಿದೆ. ಅದು ಹಳೆಯದ್ದಾಗಿರುವುದರಿಂದ ಐಎಸಿ ವಿಕ್ರಾಂತ್‌ ನಿರ್ಮಾಣವನ್ನು 23,000 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದೆ. ಸದ್ಯಕ್ಕೆ ಇದು ಪರೀಕ್ಷಾ ಹಂತದಲ್ಲಿದೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 470 ಹೊಸ ಪ್ರಕರಣ ಪತ್ತೆ | 368 ಸೋಂಕಿತರು ಗುಣಮುಖ 

Advertisement

ಬಿಎಸ್‌ಎಫ್ ವ್ಯಾಪ್ತಿ ಹೆಚ್ಚಳಕ್ಕೆ ಟೀಕೆ
ಗಡಿ ನಿಯಂತ್ರಣಾ ರೇಖೆಯಿಂದ 15 ಕಿ.ಮೀ.ವರೆಗೆ ಇದ್ದ ಬಿಎಸ್‌ಎಫ್ ಸೇವಾ ವ್ಯಾಪ್ತಿಯನ್ನು 50 ಕಿ.ಮೀ.ವರೆಗೆ ಕೇಂದ್ರ ಸರ್ಕಾರ ಹೆಚ್ಚಿಸಿರುವುದು, ಪಂಜಾಬ್‌ ಸರ್ಕಾರದ ಆಡಳಿತದ ವೈಫ‌ಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆಮ್‌ ಆದ್ಮಿ ಪಕ್ಷದ (ಆಪ್‌) ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, “ಬಿಎಸ್‌ಎಫ್ ಸೇವಾ ವ್ಯಾಪ್ತಿಯನ್ನು ಹೆಚ್ಚಿಸಿರುವುದು ಮುಂದಿನ ವರ್ಷ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಅರ್ಧ ಭಾಗವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮವಾಗಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next