Advertisement
ಐಎನ್ಎಸ್ ಶಿವಾಜಿಯ ಸ್ಥಾಪನೆಯ 75ನೇ ವರ್ಷಾಚರಣೆಯ ಸಲುವಾಗಿ ಮೋಟಾರ್ ಕಾರ್ ದಂಡಯಾತ್ರೆಯು ಚಾಲನೆಯಲ್ಲಿದ್ದು, ಇದರ ಪರವಾಗಿ ಐಎನ್ಎಸ್ ತಂಡವು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿತು. ಐಎನ್ಎಸ್ ತಂಡದಲ್ಲಿ ನಾಲ್ವರು ಹಿರಿಯ ಅಧಿಕಾರಿಗಳು, ಓರ್ವ ನಾವಿಕ ಮತ್ತು ಇಬ್ಬರು ನಾಗರಿಕ ರಕ್ಷಣಾ ಸಿಬಂದಿಯಿದ್ದರು.
ಭಾರತೀಯ ನೌಕಾಪಡೆಯು ನಿಯ ಮಿವಾಗಿ ಕಾಲೇಜಿನ ವಿದ್ಯಾರ್ಥಿಗಳ ನೇಮಕಾತಿಯನ್ನು ನಡೆಸುತಿದ್ದು, ಇದೊಂ ದು ಸೌಹಾರ್ದ ಭೇಟಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.