Advertisement
ಈವರೆಗೆ ನೀರಿನಡಿ ದೋಣಿಗಳಿಂದ ಮಾಡಿದ ತಾತ್ಕಾಲಿಕ ಸೇತುವೆಗಳ ಮೂಲಕವೇ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸ್ವತಃ ಜಲಾಂತರ್ಗಾಮಿಯಿಂದಲೇ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ.
Related Articles
ಭಾರತದಲ್ಲಿ ಈಗ ಒಟ್ಟು ಮೂರು ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿಗಳಿವೆ. ಜತೆಗೆ, ಸಬ್‌ಮರೀನ್‌ಗಳಿಂದ ಉಡಾವಣೆಗೊಳ್ಳುವ ನೆಲದಿಂದ ನೆಲಕ್ಕೆ ಚಿಮ್ಮುವಂಥ ಸಾಮರ್ಥ್ಯವುಳ್ಳ ಎರಡು ಕ್ಷಿಪಣಿಗಳೂ (ಕೆ-15 ಮತ್ತು ಕೆ-4) ನಮ್ಮಲ್ಲಿವೆ. ಈ ಪೈಕಿ ಕೆ-4 ಕ್ಷಿಪಣಿಯು 3,500 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದು ಚೀನಾ ವಿರುದ್ಧ ಅಣ್ವಸ್ತ್ರ ನಿರೋಧಕವಾಗಿ ಕೆಲಸ ಮಾಡುತ್ತದೆ.
Advertisement
ವಿಶ್ವದ 6ನೇ ದೇಶ ಭಾರತಅಣ್ವಸ್ತ್ರಚಾಲಿತ ಜಲಾಂತರ್ಗಾಮಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸಬ್‌ಮರೀನ್ ಮೂಲಕವೇ ಉಡಾಯಿಸುವಂಥ ಖಂಡಾಂತರ ಕ್ಷಿಪಣಿಗಳನ್ನು ಅಳವಡಿಸುವುದು ಅತ್ಯಂತ ಸಂಕೀರ್ಣ ಹಾಗೂ ಸವಾಲಿನ ಕೆಲಸವಾಗಿತ್ತು. ಈಗ ಅದನ್ನು ಭಾರತ ಸಾಧಿಸಿದೆ. ಇಂಥ ಜಲಾಂತರ್ಗಾಮಿಗಳನ್ನು ಹೊಂದಿರುವ ವಿಶ್ವದ 6ನೇ ರಾಷ್ಟ್ರ ಎಂಬ ಖ್ಯಾತಿಗೂ ಭಾರತ ಪಾತ್ರವಾಗಿದೆ. ಈವರೆಗೆ ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್ ಮತ್ತು ಚೀನಾ ಮಾತ್ರ ಈ ಸಾಧನೆ ಮಾಡಿವೆ. ಐಎನ್‌ಎಸ್ ಅರಿಹಂತ್
ಭಾರತದ ಮೊತ್ತಮೊದಲ ದೇಶೀಯವಾಗಿ ನಿರ್ಮಿಸಲ್ಪಟ್ಟ ನ್ಯೂಕ್ಲಿಯರ್ ಸಬ್‌ಮರೀನ್. ಜುಲೈ 2009ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರು ಕಾರ್ಗಿಲ್ ವಿಜಯ್ ದಿವಸ್ ದಿನ ಇದನ್ನು ಅನಾವರಣಗೊಳಿಸಿದ್ದರು.