Advertisement

ವಧು-ವರರಿಂದ ವಿನೂತನ ಪರಿಸರ ಜಾಗೃತಿ

04:36 PM Dec 02, 2019 | Team Udayavani |

ಮಳವಳ್ಳಿ: ವಿವಾಹ ಸಮಾರಂಭಕ್ಕೆ ಆಶೀರ್ವದಿಸಲು ಬಂದವರಿಗೆ ನೂತನ ವಧುವರರು ಸಸಿ ವಿತರಿಸುವ ಮೂಲಕ ಪರಿಸರ ಪ್ರೇಮ ಮೆರೆದರು.

Advertisement

ಹಲಗೂರು ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ತಮ್ಮ ಮಗಳ ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ವಧುವರರಿಗೆ ಶುಭ ಹಾರೈಸಲು ಬಂದಿದ್ದ ಗಣ್ಯರಿಗೆ ತಾಂಬೂಲ ನೀಡುವುದರ ಬದಲು ಸಸಿ ನೀಡಿ ನಿಮ್ಮ ಮನೆಯಂಗಳದಲ್ಲಿ ಸಸಿ ನೆಟ್ಟು ಪರಿಸರ ರಕ್ಷಿಸುವಂತೆ ಮನವಿ ಮಾಡಿದರು.

ಸುಮಾರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡಿ ಪರಿಸರ ಜಾಗೃತಿ ಸಂದೇಶ ಸಾರಿದರು. ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಹೆಚ್ಚು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದ್ದು, ಮೊದಲು ನಮಗೆ ಉತ್ತಮ ಆಮ್ಲಜನಕ ದೊರಕಬೇಕು. ಇತ್ತೀಚಿನ ದಿನಗಳಲ್ಲಿರಸ್ತೆ ಅಗಲೀಕರಣ ಮತ್ತಿತರ ಕಾರಣಗಳಿಂದ ಮರ ಕಡಿಯಲಾಗುತ್ತಿದೆ. ಇದರಿಂದ ಸಕಾಲಕ್ಕೆ ಮಳೆಯಾಗದೆ ತುಂಬಾ ತೊಂದರೆಯಾಗುತ್ತಿದೆ. ಮಳೆ ಬರಬೇಕಾದರೆ ಹೆಚ್ಚು ಹೆಚ್ಚು ಗಿಡಮರ ಬೆಳೆಸಬೇಕು. ಆದ್ದರಿಂದ ತನ್ನ ಮಗಳ ಮದುವೆಯಲ್ಲಿ ತಾಂಬೂಲ ನೀಡುವುದರ ಬದಲಾಗಿ ಸಸಿ ನೀಡಿ ಅದನ್ನು ಸಂರಕ್ಷಿಸುವಂತೆ ತಿಳಿಸಲಾಗುತ್ತಿದೆ ಎಂದು ಮಂಗಳಮ್ಮ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next