Advertisement

ಗ್ರಾಮ ವಿಕಾಸದ ವಿನೂತನ ಪರಿಕಲ್ಪನೆ

08:38 PM May 27, 2019 | mahesh |

ಬಂಟ್ವಾಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು, ಪ್ರಧಾನಿ ಮೋದಿ ಮತ್ತೆ ದೇಶದ ಪ್ರಧಾನಿಯಾದ ಸಂಭ್ರಮದ ವಿಜಯೋತ್ಸವವನ್ನು ಮೋದಿಯವರ ಜನಪರ ಯೋಜನೆಯಾದ ಸ್ವಚ್ಛ ಭಾರತ ಯೋಜನೆಯನ್ನು ಕೈಗೊಳ್ಳುವ ಮೂಲಕ ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ವಿನೂತನವಾಗಿ ಆಚರಿಸಿದೆ.

Advertisement

ತ್ಯಾಜ್ಯ ನಿರ್ವಹಣೆ ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಸಾಮಾನ್ಯ ಸಮಸ್ಯೆ. ನಗರಗಳಲ್ಲಿ ಖಾಸಗಿ ಸಂಸ್ಥೆ ಇದರ ನಿರ್ವಹಣೆ ಮಾಡುತ್ತಿದ್ದರೆ ಗ್ರಾಮಗಳಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಘನತ್ಯಾಜ್ಯ ಘಟಕ ನಿರ್ಮಿಸಲು ಸ್ಥಳಾವಕಾಶ ಕೊರತೆಯಿಂದಾಗಿ ಹೆಚ್ಚಿನ ಪಂಚಾಯತ್‌ಗಳು ಸಮಸ್ಯೆಯನ್ನು ಎದುರಿಸುತ್ತಿದ್ದವು. ಅದೇ ಪ್ರಕಾರ ಕಳ್ಳಿಗೆ ಗ್ರಾಮಸ್ಥರೂ ಪಂಚಾಯತ್‌ಗೆ ಅನೇಕ ಭಾರಿ ಈ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಿದ್ದರೂ ಪರಿಹಾರ ಸಿಕ್ಕಿಲ್ಲ. ಕೆಲವರು ರಾತ್ರೊರಾತ್ರಿ ಕಸವನ್ನು ಸಾರ್ವಜನಿಕ ಪ್ರದೇಶದಲ್ಲಿ ಸುರಿಯುತ್ತಿದ್ದು, ಈಗ ಅದುವೇ ತ್ಯಾಜ್ಯ ತೊಟ್ಟಿಯಾಗಿ ನಿರ್ಮಾಣವಾಗಿದೆ.

ಕಳ್ಳಿಗೆ ಗ್ರಾಮದ ರೈಲ್ವೆ ಬ್ರಿಡ್ಜ್ ಹತ್ತಿರ ಮುಖ್ಯ ರಸ್ತೆಗೆ ಪಕ್ಕದಲ್ಲಿ ತ್ಯಾಜ್ಯ ರಾಶಿಯಿಂದ ದುರ್ನಾತ ಬೀರುತ್ತಿದ್ದು, ಜನರ ಆರೋಗ್ಯಕ್ಕೂ ಮಾರಕವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಯುವಕರ ತಂಡ ಸ್ವತಃ ವಿಲೇವಾರಿಗೆ ಮುಂದಾಗಿದೆ.

ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಗ್ರಾಮದ ಸ್ವಾಸ್ಥ ಕಾಪಾಡುವ ಸಲುವಾಗಿ ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ಸದಸ್ಯರು, ಸ್ವತ್ಛ ಭಾರತ ಅಭಿಯಾನ ಕೈಗೊಳ್ಳುವ ಮೂಲಕ ವಿನೂತನವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಸ್ವತ್ಛತಾ ಕಾರ್ಯ ವೇಳೆ ಕಸದ ರಾಶಿಯಲ್ಲಿ ಅನ್ನಭಾಗ್ಯ ಬೇಳೆಯ ಹಲವು ಪ್ಯಾಕೆಟ್‌ಗಳು ಲಭಿಸಿದ್ದು, ಕಳಪೆ ಗುಣಮಟ್ಟದಿಂದಾಗಿ ಗ್ರಾಮಸ್ಥರು ಎಸೆದಿರಬಹುದೆಂದು ಶಂಕಿಸಲಾಗಿದೆ.

 ವಿಜಯೋತ್ಸವದ ಅಂಗವಾಗಿ
ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ಕಾಲುಸೇತುವೆ, ಮನೆ ದುರಸ್ತಿ, ಸ್ಪತ್ಛತಾ ಕಾರ್ಯ, ಪುಸ್ತಕ ವಿತರಣೆ, ಗ್ರಾಮೀಣ ಕ್ರೀಡಾಕೂಟ ಹೀಗೆ ಹಲವು ಕಾರ್ಯಕ್ರಮಗಳನ್ನು ಹಲವು ವರ್ಷದಿಂದ ಆಯೋಜಿಸುತ್ತಿದ್ದೇವೆ. ಈ ಬಾರಿ ಪ್ರಧಾನಿ ಮೋದಿ ಮತ್ತೋಮ್ಮೆ ದೇಶದ ಚುಕ್ಕಾಣಿ ಹಿಡಿಯುವ ಹಿನ್ನಲೆಯಲ್ಲಿ ವಿಜಯೋತ್ಸವದ ಅಂಗವಾಗಿ ಸ್ವತ್ಛತಾ ಕಾರ್ಯ ನಡೆಸಿದ್ದೇವೆ.
ಮನೋಹರ ಕಂಜತ್ತೂರು, ಸಂಯೋಜಕರು, ಗ್ರಾಮ ವಿಕಾಸ ಪ್ರತಿಷ್ಠಾನ ಕಳ್ಳಿಗೆ

Advertisement

 ವಿಜಯೋತ್ಸವದ ಅಂಗವಾಗಿ
ಸಾರ್ವಜನಿಕರಲ್ಲಿ ಸ್ವತ್ಛತೆ ಬಗ್ಗೆ ಜಾಗೃತಿ ಮೂಡದೆ ಸ್ವತ್ಛ ಭಾರತ ಪೂರಿಪೂರ್ಣವಾಗಲು ಸಾಧ್ಯವಿಲ್ಲ. ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಬೇಕು. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ.
– ಸಂದೇಶ್‌ ದರಿಬಾಗಿಲು ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next