Advertisement

ಹಾವೇರಿ: ಟಯರ್ ಸ್ಫೋಟ, ಕಾರು ಪಲ್ಟಿಯಾಗಿ ನಾಲ್ವರ ದುರ್ಮರಣ

03:21 PM Aug 21, 2017 | Team Udayavani |

ಹಾವೇರಿ: ಮುಂಬೈನಿಂದ ಹರಿಹರದತ್ತ ಆಗಮಿಸುತ್ತಿದ್ದ ಕಾರಿನ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಶಿಗ್ಗಾಂವ್ ನಲ್ಲಿ ನಡೆದಿದೆ.

Advertisement

ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಕಾರಿನೊಳಗಿದ್ದ ಮಹಿಳೆ, ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರು ದಾವಣಗೆರೆ ಜಿಲ್ಲೆಯ ಹರಿಹರ ಮೂಲದವರು ಎಂದು ಮಾಧ್ಯಮದ ವರದಿ ತಿಳಿಸಿದೆ.

ಅಲ್ಲದೇ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next