Advertisement
ಇದೀಗ ಎನ್ಐಎ ವಿಶೇಷ ನ್ಯಾಯಾಲಯ ಇಷ್ಟೂ ಜನರನ್ನು ದೋಷಮುಕ್ತಗೊಳಿಸಿದೆ. ಸಾಕ್ಷ್ಯಾಧಾರ ಗಳ ಕೊರತೆಯೇ ದೋಷಮುಕ್ತಗೊಳಿಸಲು ನ್ಯಾಯಾಲಯ ನೀಡಿದ ಪ್ರಮುಖ ಕಾರಣ. ಅಸೀಮಾನಂದ ಜತೆಗೆ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮ, ಭರತ್ ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಅವರನ್ನೂ ಬಿಡುಗಡೆಗೊಳಿಸಲಾಗಿದೆ. ಹಿಂದು ಸಂಘಟನೆಯ ವ್ಯಕ್ತಿಗಳು ಈ ಪ್ರಕರಣದಲ್ಲಿ ಸಿಲುಕಿದ್ದರಿಂದಲೇ ದೇಶವ್ಯಾಪಿ ಪ್ರಕರಣ ಭಾರೀ ಪ್ರಚಾರಕ್ಕೆ ಒಳಗಾಗಿತ್ತು. ಕೇಸರಿ ಭಯೋತ್ಪಾದನೆ ಎಂಬ ಹೊಸ ವ್ಯಾಖ್ಯಾನವನ್ನು ಹೆಣೆಯಲು ಅಂದಿನ ಕೇಂದ್ರದ ಯುಪಿಎ ಸರ್ಕಾರ ಹೂಡಿದ ಫಲಿತಾಂಶ ಅದಾಗಿತ್ತು. ಅಂದಿನ ಸಂದರ್ಭದಲ್ಲಿ ಯುಪಿಎ ಸರ್ಕಾರ ತನ್ನ ಕಾರ್ಯತಂತ್ರದಲ್ಲಿ ಯಶಸ್ಸನ್ನು ಕಂಡಿತ್ತು. ಹಿಂದು ಸಂಘಟನೆಗಳ ಆಯ್ದ ಪ್ರಮುಖರನ್ನು ಜೈಲಿಗೆ ಕಳುಹಿಸಿ, ಸನ್ಯಾಸಿಗಳ ಬಗ್ಗೆ ದೇಶದ ಜನರಿಗೆ ಸಂಶಯ ಬರುವ ರೀತಿಯಲ್ಲಿ ಆರೋಪ ಮತ್ತು ಸಾಕ್ಷ್ಯಗಳನ್ನು ಸಿದ್ದಪಡಿಸಿತ್ತು ಯುಪಿಎ ಸರ್ಕಾರ. ಅದಕ್ಕಾಗಿ ಸಿಬಿಐ ದುರ್ಬಳಕೆ ಮಾಡಿಕೊಂಡಿತ್ತು ಎಂದೇ ಹೇಳಬಹುದು.
ಯಾಗಿದೆ. ತಮ್ಮ ಅನುಕೂಲಕ್ಕೆ ತನಿಖೆಯ ದಿಕ್ಕನ್ನು ಬದಲಾಯಿಸಿ, ತಮಗೆ ಆಗದವರನ್ನು ಜೈಲಿಗೆ ಕಳುಹಿಸಲು ಸಂಚು ಹೂಡಬಾರದು ಎಂಬ ಪಾಠ ಕಲಿಯಬೇಕಾಗಿದೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಪಕ್ಷಗಳೇ ಇರಲಿ, ದ್ವೇಶವನ್ನು ಸಾಧಿಸುವ ಪರಿಪಾಠ ಇಟ್ಟುಕೊಳ್ಳಲೇಬಾರದು. ಅಂದು ಪ್ರಕರಣ ಸಂಭವಿಸಿದಾಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದರು ಶಿವರಾಜ್ ಪಾಟೀಲ್. ಪ್ರತಿ ಬಾರಿಯೂ ಬಾಂಬ್ ಸ್ಫೋಟ ಸಂಭವಿಸಿದಾಗ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಸೆರೆಹಿಡಿ ಯಲಾಗುವುದು ಎಂದು ಹೇಳಿಕೆ ನೀಡುವುದರಲ್ಲೇ ನಿಸ್ಸೀಮರಾಗಿದ್ದವರು ಪಾಟೀಲರು. ಇದಕ್ಕಿಂತ ಬೇರೇನೂ ಅವರು ಸಾಧಿಸಲಿಲ್ಲ. ಇದೇ ವೈಫಲ್ಯದಿಂದಾಗಿ ಅವರು ಹುದ್ದೆಯನ್ನೇ ಕಳೆದುಕೊಳ್ಳಬೇಕಾಯಿತು. ಆದರೆ, ಅವರ ಗೃಹ ಸಚಿವ ಹುದ್ದೆಯ ಅವಧಿಯಲ್ಲಿ ಸಮಾಜ ವಿದ್ರೋಹಿಗಳನ್ನು ಸದೆಬಡಿಯುವುದಕ್ಕಿಂತ ಅಸೀಮಾನಾಂದ ರಂತಹ ಮುಗ್ಧರನ್ನು ಆರೋಪಿಗಳನ್ನಾಗಿ ಮಾಡಿದರು.
ಯುಪಿಎ ಸರ್ಕಾರ ವರ್ಚಸ್ಸನ್ನು ಕಳೆದುಕೊಳ್ಳಲು ಇಂತಹ ಪ್ರಕರಣಗಳೂ ಕಾರಣವಾಯಿತು. ಸ್ವಾಮಿ ಅಸೀಮಾನಂದ ಆರೋಪಮುಕ್ತರಾಗುವ ಸುದ್ದಿ ಸೋಮವಾರ ಬಿತ್ತರವಾದ ಕೆಲವೇ ಹೊತ್ತಿಗೆ ತೀರ್ಪು ನೀಡಿದ ನ್ಯಾಯಾಧೀಶರೂ ರಾಜೀನಾಮೆ ನೀಡಿದ್ದು ಅಚ್ಚರಿಯ ಸಂಗತಿ. ಇದರ ಹಿಂದೆ ಏನಾದರೂ ನಡೆಯಿತೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದಕ್ಕಾಗಿಯೇ ಅವರ ರಾಜೀನಾಮೆಗೆ ನಿಖರ ಕಾರಣಗಳೂ ಬಹಿರಂಗಗೊಂಡರೆ ಒಳ್ಳೆಯದು. ಇಲ್ಲದಿದ್ದಲ್ಲಿ ರಾಜೀನಾಮೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಗದೇ ಹೋಗಬಹುದು. ನ್ಯಾಯದೇಗುಲದ ಗೌರವಕ್ಕೆ ಚ್ಯುತಿ ಬಾರದಿರಲಿ.