Advertisement

INNA: ವಿದ್ಯುತ್‌ ಲೈನ್‌ ಟವರ್‌ ನಿರ್ಮಾಣಕ್ಕೆ ವಿರೋಧ: ಅಹೋರಾತ್ರಿ ಧರಣಿ

12:04 AM Dec 06, 2024 | Team Udayavani |

ಕಾರ್ಕಳ: ಉಡುಪಿಯ ಎಲ್ಲೂರಿನಿಂದ ಕೇರಳಕ್ಕೆ ವಿದ್ಯುತ್‌ ಪೂರೈಕೆಗಾಗಿ 400 ಕೆವಿ ವಿದ್ಯುತ್‌ ಲೈನ್‌ ಅಳವಡಿಸಲು ಟವರ್‌ ನಿರ್ಮಾಣಕ್ಕೆ ಜನರ ವಿರೋ ಧದ ನಡುವೆ ಗುತ್ತಿಗೆ ಪಡೆದ ಕಂಪೆನಿಯ ಸಿಬಂದಿ ಮುಂದಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇನ್ನದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಗುರುವಾರ ರಾತ್ರಿ ಕಾರ್ಕಳ ಕಾಂಗ್ರೆಸ್‌ ವತಿಯಿಂದ ಅಹೋರಾತ್ರಿ ಧರಣಿ ನಡೆದಿದೆ.

Advertisement

ಈ ಸಂದರ್ಭ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಯಾರಿಗೂ ಬೇಡವಾದ ಯೋಜನೆ ಬರಬಾರದು. ಕೇರಳದಲ್ಲಿ ಹೋರಾಟ ನಡೆದಾಗ ಯುಜಿ ಕೇಬಲ್‌ ಅಳವಡಿಸಿದ್ದಾರೆ. ಯಾವುದೇ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದೇ ಗ್ರಾಮಸ್ಥರ ಜತೆಯಲ್ಲಿ ಸಭೆ ನಡೆಸಲಿ. ಯಾವುದೇ ಕಾರಣಕ್ಕೂ ಟವರ್‌ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಇನ್ನಾ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಶ ಆರ್‌. ಮೂಲ್ಯ, ಉದ್ಯಮಿ ಗಣಪತಿ ಹೆಗ್ಡೆ, ಹೋರಾಟ ಸಮಿತಿಯ ಅಮರನಾಥ್‌ ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ಸುಬೋಧ ರಾವ್‌, ಕೇಶವ ಶೆಟ್ಟಿಗಾರ್‌, ದೀಪಕ್‌ ಕೋಟ್ಯಾನ್‌, ಶಂಕರ ಶೆಟ್ಟಿ, ಯೋಗೀಶ್‌, ದೀಪಕ್‌ ಕಾಮತ್‌, ದಿವಾಕರ ಶೆಟ್ಟಿ, ಪ್ರಕಾಶ್‌ ಮೂಲ್ಯ, ಹರೀಶ್‌ ಶೆಟ್ಟಿ, ಜಯ ಕೋಟ್ಯಾನ್‌ ಮತ್ತಿತರ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು. ಧರಣಿಯಲ್ಲಿ ಭಾಗವಹಿಸಿದ್ದವರು ಪ್ರತಿಭಟನೆಯ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next