Advertisement

ಕೇರಳ: ಐಎನ್‌ಎಲ್‌ ಇಬ್ಭಾಗ?

12:02 AM Feb 18, 2022 | Team Udayavani |

ಕೋಯಿಕ್ಕೋಡ್‌:  ಕೇರಳದ ಆಡಳಿತಾರೂಢ ಎಲ್‌ಡಿಎಫ್ ನ  ಅಂಗಪಕ್ಷವಾಗಿ ರುವ  ಇಂಡಿಯನ್‌ ನ್ಯಾಶನಲ್‌ ಲೀಗ್‌ ಮತ್ತೂಮ್ಮೆ ಹೋಳಾಗುವ ಲಕ್ಷಣ ಕಂಡು ಬಂದಿದೆ.

Advertisement

ಪಕ್ಷದ ರಾಷ್ಟ್ರೀಯ ಪ್ರಮುಖರು ಕೇರಳ ಘಟಕವನ್ನು ಅಮಾನತುಗೊಳಿಸಿದ ಬಳಿಕ ನಡೆದ ಬೆಳವಣಿಗೆಯಲ್ಲಿ ಅಧ್ಯಕ್ಷ ಅಬ್ದುಲ್‌ ವಹಾಬ್‌ ನೇತೃತ್ವದ ತಂಡವು ಪಕ್ಷವು ತಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡಿದೆ.

ಪಕ್ಷದ ಅಧ್ಯಕ್ಷರಾಗಿ ಎ.ಪಿ. ಅಬ್ದುಲ್‌ ವಹಾಬ್‌ ಅವರೇ ಮುಂದುವರಿಯಲಿದ್ದಾರೆ ಹಾಗೂ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್‌ ಕೋಯ ತಂಙಳ್‌ ನೇಮಕಗೊಳ್ಳಲಿದ್ದಾರೆ. ವಹಾಬ್‌ ಶಾಜಿ ಅವರು ಹೊಸ  ಕೋಶಾಧಿಕಾರಿಯಾಗಿರಲಿದ್ದಾರೆ ಎಂದು ವಹಾಬ್‌ ಬಣವು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next